ಶಿವಮೊಗ್ಗ, ಮಾರಕಾಸ್ತ್ರದಿಂದ ಚುಚ್ಚಿ ವೃದ್ಧೆಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ.ಶಿವಮೊಗ್ಗ ತಾಲೂಕು ಕುಂಸಿಯ ರಥಬೀದಿಯ ಮನೆಯಲ್ಲಿ ಸಂಭವಿಸಿದೆ.
ಬಸಮ್ಮ (65) ಮೃತರು. ಮನೆಯಲ್ಲಿ ವೃದ್ಧೆ ಒಬ್ಬರೆ ವಾಸವಾಗಿದ್ದರು. ಶಿವಮೊಗ್ಗದಲ್ಲಿ ವಾಸವಾಗಿರುವ ಪುತ್ರ ಗುರುವಾರ ಮನೆಗೆ ಬಂದು ಬಾಗಿಲು ಬಡಿದರು ತೆಗೆದಿರಲಿಲ್ಲ. ಹೆಂಚು ತೆಗೆದು ಪರಿಶೀಲಿಸಿದಾಗ ಬಸಮ್ಮ ಅವರ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.
ಕುತ್ತಿಗೆ ಕೊಯ್ದು, ಹೊಟ್ಟೆ ಭಾಗದಲ್ಲಿ ಹಲವೆಡೆ ಇರಿದಿರುವುದು ಗೊತ್ತಾಗಿದೆ. ಪೊಲೀಸರು ಮಹಜರು ನಡೆಸಿ ಪ್ರಕರಣ ದಾಖಲಿಸಿದ್ದಾರೆ.