ಶಿವಮೊಗ್ಗ, ತಾಯಿ ಮತ್ತು ಸಹೋದರನನ್ನು ಬಸ್ಸಿಗೆ ಹತ್ತಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ಮರಳುತ್ತಿದ್ದ ಯುವತಿಯನ್ನು ಅಡ್ಡಗಟ್ಟಿ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಶರಾವತಿ ನಗರದ ಎ ಬ್ಲಾಕ್‌ನಲ್ಲಿ ಸೆ.8ರ ಬೆಳಗಿನ ಜಾವ 5 ಗಂಟೆ ಹೊತ್ತಿಗೆ ಘಟನೆ ಸಂಭವಿಸಿದೆ.
ಯುವತಿ ತನ್ನ ತಾಯಿ ಮತ್ತು ಸಹೋದರನನ್ನು ಬೆಳಗಿನ ಜಾವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಿಟ್ಟು ಮರಳುತ್ತಿದ್ದರು. ಬಸ್ ನಿಲ್ದಾಣದ ಬಳಿ ಇಬ್ಬರು ಯುವಕರು ನಿಂತಿದ್ದರು. ಅವರನ್ನು ಗಮನಿಸಿದ್ದ ಯುವತಿ ತನ್ನ ದ್ವಿಚಕ್ರ ವಾಹನದಲ್ಲಿ ಮನೆಯತ್ತ ತೆರಳುತ್ತಿದ್ದರು.
ಆ ಪೈಕಿ ಒಬ್ಬ ಯುವಕ ಯುವತಿಯ ದ್ವಿಚಕ್ರ ವಾಹನವನ್ನು ಹಿಂಬಾಲಿಸಿದ್ದನು.ಸರ್ಕಿಟ್ ಹೌಸ್ ಸಮೀಪ ಯುವತಿಯ ದ್ವಿಚಕ್ರ ವಾಹನಕ್ಕೆ ಆ ಯುವಕ ತನ್ನ ಬೈಕ್ ಅಡ್ಡಿಗಟ್ಟಿ ಬೀಳಿಸಿದ್ದನು. ಯುವತಿಯ ವೇಲ್ ಮತ್ತು ಟೀ ಶರ್ಟ್ ಹಿಡಿದು ಎಳೆದಾಡಿದಾಗ. ಟೀ ಶರ್ಟ್ ಹರಿದಿದ್ದು, ಆಕೆ ತಪ್ಪಿಸಿಕೊಂಡು ಓಡಿದ್ದಾರೆ.
ಅದೇ ಮಾರ್ಗದಲ್ಲಿ ವಾಹನ ಬಂದಿದ್ದರಿಂದ ಯುವಕ ಅಲ್ಲಿಂದ ಪರಾರಿಯಾಗಿದ್ದಾನೆ ಯುವತಿ ಕೂಡಲೆ ತನ್ನ ದ್ವಿಚಕ್ರ ವಾಹನ ತೆಗೆದುಕೊಂಡು ಮನೆಗೆ ಹೋಗಿದ್ದು, ಸಹೋದರನಿಗೆ ವಿಷಯ ತಿಳಿಸಿದ್ದಾರೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.