ಶಿವಮೊಗ್ಗ | ಮಾಮ್‌ಕೋಸ್‌ನಿಂದ ಆರಂಭವಾಗಲಿದೆ ಬ್ಯಾಂಕಿಂಗ್‌ ಸೇವೆ

Date:

ಶಿವಮೊಗ್ಗ, ಅಡಕೆ ಬೆಳೆಗಾರರಿಗೆ ನೆರವಾಗುತ್ತಿದ್ದ ಮಾಮ್‌ಕೋಸ್‌, ಈಗ ಬ್ಯಾಂಕಿಂಗ್‌ ಮತ್ತು ವಾಣಿಜ್ಯ ವಹಿವಾಟನ್ನೂ ಆರಂಭಿಸಲು ನಿರ್ಧರಿಸಿದೆ. ಚಿನ್ನಾಭರಣ, ಗೃಹೋಪಯೋಗಿ, ಕೃಷಿ ಉಪಕರಣ, ಶಿಕ್ಷಣ ಸಾಲ ಸೇರಿದಂತೆ ಹಲವು ಹೊಸ ಸಾಲಗಳನ್ನೂ ನೀಡಲಿದೆ.

- Advertisement -

ಶೈಕ್ಷಣಿಕ ಸಂಸ್ಥೆ, ಕೃಷಿ ಯಂತ್ರೋಪಕರಣ ಮಾರಾಟ, ಗೊಬ್ಬರ ಮಳಿಗೆಗಳಂತಹ ವಾಣಿಜ್ಯ ಚಟುವಟಿಕೆಗಳನ್ನೂ ಸಂಸ್ಥೆ ಆರಂಭಿಸಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ಇದರ ಜೊತೆಗೆ ತನ್ನ ಕಾರ್ಯಕ್ಷೇತ್ರವನ್ನು ರಾಜ್ಯಾದ್ಯಂತ ವಿಸ್ತರಿಸಲು ಮತ್ತು ಕಾಫಿ, ಕೋಕೋ, ತೆಂಗು ಬೆಳೆಗಳನ್ನೂ ಸೇರಿಸಿಕೊಳ್ಳಲು ಯೋಜಿಸಿದೆ.

ಮಲೆನಾಡಿನಿಂದ ರಾಜ್ಯದೆಲ್ಲೆಡೆಗೆ ವಾಣಿಜ್ಯ ವಹಿವಾಟು ವಿಸ್ತರಿಸಲು ನಿರ್ಧರಿಸಿರುವ ಮಾಮ್‌ಕೋಸ್‌ನಿಂದ ಬ್ಯಾಂಕಿಂಗ್‌ ಸೇವೆಯನ್ನೂ ಆರಂಭಿಸಲಿದೆ.

ಅಡಕೆ ಬೆಳೆಗಾರರು ಮತ್ತು ವ್ಯಾಪಾರಿಗಳ ನಡುವೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ ಮಲೆನಾಡು ಅಡಕೆ ಮಾರಾಟದ ಸಹಕಾರ ಸಂಘ (ಮಾಮ್‌ಕೋಸ್‌) ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಬ್ಯಾಂಕಿಂಗ್‌ ವಹಿವಾಟು ವಿಸ್ತರಣೆಯೊಂದಿಗೆ ವಾಣಿಜ್ಯ ವಹಿವಾಟು ಆರಂಭಿಸಲು ನಿರ್ಧರಿಸಿದೆ.

ದಲ್ಲಾಳಿಗಳು ಮತ್ತು ವ್ಯಾಪಾರಿಗಳ ಶೋಷಣೆ ತಪ್ಪಿಸುವ ಸಲುವಾಗಿ ಅಡಕೆ ಬೆಳೆಗಾರರಿಗೆ ವ್ಯವಸ್ಥಿತ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ 1939ರಲ್ಲಿ ಅಸ್ತಿತ್ವಕ್ಕೆ ಬಂದ ಮಾಮ್‌ಕೋಸ್‌ ಆನಂತರದಲ್ಲಿ ಧಾರಣೆ ಕುಸಿದಾಗ ರೈತರಿಗೆ ನೆರವಾಗುವ ಸಲುವಾಗಿ ಖರೀದಿಯನ್ನೂ ಆರಂಭಿಸಿತು.

ಪ್ರಸ್ತುತ ತನ್ನ ವ್ಯಾಪ್ತಿಯ ಎಲ್ಲ ತಾಲೂಕುಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆದು ಬೆಳೆಗಾರರಿಗೆ ಬೇರೆಲ್ಲಾ ವ್ಯಾಪಾರಿಗಳು ಮತ್ತು ಸಂಘಗಳಿಗಿಂತ ಉತ್ತಮ ಧಾರಣೆಯನ್ನು ಮಾಮ್‌ಕೋಸ್‌ ನೀಡುತ್ತಿದೆ.ಸದಸ್ಯರಿಂದ ಉಳಿತಾಯ ಮತ್ತು ಚಾಲ್ತಿ ಖಾತೆಗಳ ಮೂಲಕ ಠೇವಣಿ ಸಂಗ್ರಹ ಆರಂಭಿಸಿ ಸೀಮಿತ ಅವಕಾಶದಲ್ಲಿ ಬ್ಯಾಂಕಿಂಗ್‌ ವಹಿವಾಟು ಸಹ ನಡೆಸುತ್ತಿತ್ತು.

ಬೆಳೆಗಾರರ ಸಂಕಷ್ಟಕ್ಕೆ ನೆರವಾಗುವ ಸಲುವಾಗಿ ಅಡಕೆ ಆಧಾರ ಸಾಲ, ಕಟಾವು ಸಾಲ, ಕೊಳೆ ಔಷಧ ಸಾಲ, ಠೇವಣಿ ಆಧಾರ ಸಾಲವನ್ನು ಮಾತ್ರ ನೀಡುತ್ತಿತ್ತು. ಹೀಗಾಗಿ ಬೆಳೆಗಾರರು ಇತರೆ ಉದ್ದೇಶಗಳಿಗೆ ಮತ್ತೊಂದು ಬ್ಯಾಂಕ್‌ ಅಥವಾ ಸಹಕಾರ ಸಂಘವನ್ನು ಅವಲಂಬಿಸಬೇಕಾಗಿತ್ತು.ಬೆಳೆಗಾರರು ಮತ್ತೊಂದು ಸಂಘವನ್ನು ಅವಲಂಬಿಸುವುದನ್ನು ತಪ್ಪಿಸುವ ಸಲುವಾಗಿ ಬ್ಯಾಂಕಿಂಗ್‌ ವಹಿವಾಟು ವಿಸ್ತರಿಸಲು ನಿರ್ಧರಿಸಲಾಗಿದೆ. ಅದಕ್ಕೆ ಇತ್ತೀಚೆಗೆ ನಡೆದ ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ.

ಚಿನ್ನಾಭರಣ ಸಾಲ, ಗೃಹೋಪಯೋಗಿ ಸಾಲ, ಕೃಷಿ ಉಪಕರಣಗಳು, ಸಲಕರಣೆಗಳು ಮತ್ತು ಯಂತ್ರೋಪಕರಗಳ ಸಾಲ, ಬೆಳೆಗಾರರ ಮಕ್ಕಳಿಗೆ ಶಿಕ್ಷಣ ಸಾಲ, ಸ್ಥಿರಾಸ್ತಿ ಖರೀದಿ ಸಾಲ, ಟ್ರ್ಯಾಕ್ಟರ್‌, ನಾಲ್ಕು ಚಕ್ರ, ಮತ್ತು ದ್ವಿ ಚಕ್ರ ವಾಹನಗಳ ಖರೀದಿ ಸಾಲ, ಮನೆ ನಿರ್ಮಾಣ, ಖರೀದಿ ಮತ್ತು ದುರಸ್ತಿ ಸಾಲ, ನಿವೇಶನ ಖರೀದಿ ಸಾಲಗಳನ್ನು ಮಾಮ್‌ಕೋಸ್‌ನಲ್ಲೇ ಪಡೆಯಬಹುದು. ಈ ವ್ಯವಸ್ಥೆಯು ಬಹುತೇಕ ಡಿಸೆಂಬರ್‌ನಿಂದ ಜಾರಿಯಾಗುವ ಸಾಧ್ಯತೆ ಇದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಮಾಜಿ ಗ್ರಾ. ಪಂ ಸದಸ್ಯನ ಬರ್ಬರ ಹತ್ಯೆ

ಲಕ್ಕುಂಡಿ ಗ್ರಾಮದ ಹೊರವಲಯದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರೊಬ್ಬರನ್ನು ಬರ್ಬರವಾಗಿ ಹತ್ಯೆ...

ಹಾವೇರಿ‌ | ಬಾಲಕರ ವಸತಿ ನಿಲಯಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ

ಚುನಾವಣಾ ಸಂಬಂಧಿತ ಕಾರ್ಯಗಳ ಪರಿಶೀಲನೆಯ ಜೊತೆಗೆ, ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ...

ಗದಗ | ಮಾನವ ದಿನಗಳ ಸೃಜನೆ ಮಾಡದಿದ್ದರೇ ಶಿಸ್ತು ಕ್ರಮ : ಜಿಪಂ ಸಿಇಓ ಮುಕುಲ್ ಜೈನ್

ರೋಣ ತಾಲೂಕಿನಲ್ಲಿ ಮಾನವ ದಿನಗಳ ಸೃಜನೆ ತುಂಬಾ ಕಡಿಮೆ ಇದೆ. ಮಾನವ...

ಮಹಿಷಮಂಡಲದ ಇತಿಹಾಸಕ್ಕೆ ಮರುಜೀವ: ಮೈಸೂರಿನಲ್ಲಿ ಮಹಿಷಮಂಡಲೋತ್ಸವ-2026

ರಾಜ್ಯದ ಪ್ರಗತಿಪರ ಚಿಂತಕರು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ದಲಿತ ಸಂಘಟನೆಗಳು,...