ಶಿವಮೊಗ್ಗ, ನಗರದ ಹೊರವಲಯದಲ್ಲಿರುವ ಸೋಗಾನೆ ಬಳಿ ಭೀಕರ ಅಪಘಾತ ಸಂಭವಿಸಿದ್ದು, ರಸ್ತೆ ದಾಟುತ್ತಿದ್ದ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಆಕ್ಸಿಡೆಂಟ್‌ನ ದೃಶ್ಯಗಳು ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿವೆ.ರಸ್ತೆ ದಾಟಲು ಯತ್ನಿಸುತ್ತಿದ್ದ ಬೈಕ್ ಸವಾರನ ಮೇಲೆ ಅತಿ ವೇಗವಾಗಿ ಬಂದ ಕಾರು ಭಾರಿ ರಭಸದಿಂದ ಅಪ್ಪಳಿಸಿದೆ.
ಡಿಕ್ಕಿಯ ಪರಿಣಾಮದಿಂದಾಗಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ನಂತರ ಚಾಲಕನ ನಿಯಂತ್ರಣ ತಪ್ಪಿದ ರಸ್ತೆ ಪಕ್ಕದಲ್ಲಿದ್ದ ಅಂಗಡಿಯೊಂದಕ್ಕೆ ನುಗ್ಗಿದೆ. ಈ ಘಟನೆಯಿಂದ ಅಂಗಡಿಗೂ ಹಾನಿಯಾಗಿದೆ.