ಶಿವಮೊಗ್ಗದ ರಾಗಿಗುಡ್ಡದಲ್ಲಿ ಬಹುತೇಕ ಎಲ್ಲಾ ಮನೆ ಅಂಗಡಿಗಳು ಒತ್ತುವರಿ ಮಾಡಿ ಚರಂಡಿಯ ನೀರು ಹೋಗದಂತೆ ವಾಹನ ಓಡಾಡಲು ತೊಂದರೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳುವಂತೆ,
ರಾಗಿಗುಡ್ಡದಲ್ಲಿ ಬಹುತೇಕ ಮನೆಗಳು ಅಂಗಡಿಗಳು ಹೋಟೆಲ್ ಗಳು ಮುಂಭಾಗದಲ್ಲಿ ಕಟ್ಟಡ ನಿರ್ಮಾಣ ಮಾಡುವಾಗ ಪರವಾನಿಗೆ ಇಲ್ಲದೆ ನಗರಸಭೆ ಜಾಗವನ್ನು ಒತ್ತುವರಿ ಮಾಡಿ ಚರಂಡಿಯ ಮೇಲೆ ಮನೆ ಕಟ್ಟುವುದು ಇದರಿಂದ ಮಹಾನಗರ ಪಾಲಿಕೆಯವರು ಚರಂಡಿ ಸ್ವಚ್ಛತೆಯನ್ನು ಮಾಡಿರುವುದಿಲ್ಲ ಸಾಂಕ್ರಾಮಿಕ ರೋಗಗಳಿಗೆ ಇಲ್ಲಿನ ಜನ ತುತ್ತಾಗುತ್ತಿದ್ದಾರೆ ಎಂದು ಆರೋಪಿಸಿರುತ್ತಾರೆ.
ಅಲ್ಲದೆ ತಮ್ಮ ಮನೆಯ ಮುಂದೆ ಹಾಕಿರುವ ಶೀಟ್ ಗಳು ರೋಡಿನ ತನಕ ವಿಸ್ತಾರ ಮಾಡಿಕೊಂಡಿರುವುದರಿಂದ ಕಸದ ಗಾಡಿಗಳು ಸಿಲೆಂಡರ್ ಗಾಡಿಗಳು ಅಲ್ಲದೆ ಯಾವುದೇ ವಾಹನಗಳು ಬರದೇ ರೀತಿಯಲ್ಲಿ ಇಲ್ಲಿನ ಜನರು ಮನೆಗೆ ಶೀಟ್ ಗಳನ್ನು ಅಳವಡಿಸಿರುತ್ತಾರೆ.
ಮುಖ್ಯವಾಗಿ ರಾಗಿಗುಡ್ಡದ ನಾಲ್ಕನೇ ತಿರುವು ಬಲಭಾಗದಲ್ಲಿ ಬಹುತೇಕ ಎಲ್ಲಾ ಮನೆಗಳು ಚರಂಡಿ ರಸ್ತೆ ಕಾಣದ ಹಾಗೆ ರಸ್ತೆಯನ್ನು ಕಳುಹಿಸಿಕೊಂಡಿದ್ದು ಇಲ್ಲಿನ ಜನರಿಗೆ ಓಡಾಡಲು ಇನ್ನಿತರ ಎಲ್ಲಾ ಕೆಲಸಗಳು ತೊಂದರೆ ಆಗಿರುತ್ತದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಹಲವಾರು ಬಾರಿ ಮಹಾನಗರ ಪಾಲಿಕೆಯ ಸಂಬಂಧ ಪಟ್ಟ ಇಲಾಖೆಗೆ ತಿಳಿಸಿದರು ಸಹ ಯಾವ ಅಧಿಕಾರಿಗಳು ಈ ಜಾಗಕ್ಕೆ ಬಂದು ಪರಿಚಲನೆ ಮಾಡಿರುವುದಿಲ್ಲ ದಯಮಾಡಿ ಈ ಕೂಡಲೇ ಅನಧಿಕೃತವಾಗಿ ಚರಂಡಿ ರಸ್ತೆಯನ್ನು ಆಕ್ರಮಿಸಿಕೊಂಡಿರುವ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಉತ್ತುವರಿ ಜಾಗವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಹಾಗೂ ಆರೋಗ್ಯಕರ ಜೀವನಕ್ಕೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಂಘಟನೆ ಮತ್ತು ರಾಗಿಗುಡ್ಡ ನಿವಾಸಿಗಳಿಂದ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಮೂಲಕ ಎಚ್ಚರಿಸುತಿದ್ದೇವೆ ಎಂದು ಕರವೇ ಸ್ವಾಭಿಮಾನಿ ಬಣ ಅಗ್ರಹಿಸಿದ್ದು.

ಈ ಕುರಿತು ಆಯುಕ್ತರಿಗೆ ಮನವಿ ನೀಡಿದ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್, ಎಚ್ಎಸ್ ನಗರಾಧ್ಯಕ್ಷ ಜೀವನ ಡಿ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಮಾಲತೇಶ್ ಎನ್, ಯುವ ಘಟಕದ ಅಧ್ಯಕ್ಷ ಸಂತೋಷ್, ನಗರ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಫಿ, ಗ್ರಾಮಾಂತರ ಅಧ್ಯಕ್ಷ ಮಂಜುನಾಥ್ ಕಾರ್ಯದರ್ಶಿ ರಾಮು, ರವಿ ಮುಂತಾದ ಪದಾಧಿಕಾರಿಗಳು ಭಾಗವಹಿಸಿದ್ದರು.
ಹಾಗೂ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಮಾತನಾಡಿ ನಾವು ಇದರ ಜೊತೆಗೆ ಕೆಲವು ದಿನಗಳಲ್ಲಿ ಹಿಂದೆ ಜೆ ಎಚ್ ಪಟೇಲ್ ಬಡಾವಣೆಯಲ್ಲಿ ಒಳಚರಂಡಿ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದೆ ಎಂದು ಮಹಾನಗರ ಪಾಲಿಕೆ ಹಾಗೂ ತುಂಗಾ ಮೆಲ್ದಂಡೆ ಯೋಜನೆ ಅಧಿಕಾರಿಗಳಿಗೆ ಈ ಸಂಬಂಧ ಆಯುಕ್ತರು ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದಾರೆ ಅದರೊಟ್ಟಿಗೆ ನಾನು ಕೂಡ ಸ್ಥಳ ಪರಿಶೀಲನೆ ನಡೆಸಿದ್ದೇನೆ,ಸಂಬಂಧಪಟ್ಟ ಇಂಜಿನಿಯರ್ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಹಾಗೂ ನಮ್ಮ ಹೋರಾಟಕ್ಕೆ ಜಯ ಸಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಕುರಿತು ಮಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಾಯಣ್ಣ ಗೌಡ ಮಹಾನಗರ ಪಾಲಿಕೆ ಆಯುಕ್ತರು, ನಾನು ಸಹ ಜೆ ಎಚ್ ಬಡಾವಣೆ ಸ್ಥಳ ಪರಿಶೀಲನೆ ನಡಿಸಿದ್ದೇನೆ ಅಕ್ರಮ ಆಗಿರುವುದು ತಿಳಿದುಬಂದಿದೆ ಎಂದರು.
ರಾಗಿಗುಡ್ಡದಲ್ಲಿ ಚರಂಡಿ ಸ್ವಚ್ಛತೆ ಸೋಮುವಾರದಿಂದ ಮಾಡುತ್ತೇವೆ, ಸಾರ್ವಜನಿಕ ಶುಚಿತ್ವ ನಮಗೆ ಮುಖ್ಯವಾದದ್ದು ಎರಡು ಮೂರು ದಿನದಲ್ಲಿ ಸ್ವಚ್ಛತೆಯಾಗಲಿದೆ ಎಂದರು. ಹಾಗೂ ಒತ್ತುವರಿ ಸಂಬಂಧ ಅಕ್ರಮವಾಗಿರುವುದು ತಿಳಿದುಬಂದಿದೆ,
ಮುಂದಿನ ದಿನಗಳಲ್ಲಿ ಅಧಿಕರಿಗಳ ಸಭೆ ಕರೆದು ಅಗತ್ಯ ಕ್ರಮ ಜರುಗಿಸಲಾಗುವುದು, ಮತ್ತು ಸಾರ್ವಜನಿಕರು ಸಹಕಾರ ನೀಡಬೇಕು ಇಲ್ಲದಿದ್ದಲ್ಲಿ ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳಗುವುದು ಎಂದು ತಿಳಿಸಿದ್ದಾರೆ. ಕರವೇ ಸ್ವಾಭಿಮಾನಿ ಬಣದ ಈ ನ್ಯಾಯಸಮ್ಮತ ಹೋರಾಟಕ್ಕೆ ಸಿಕ್ಕಜಯ ಎಂದು ತಿಳಿಸಿದ್ದಾರೆ.