ಶಿವಮೊಗ್ಗ ಶರಾವತಿ ನಗರದ 1ನೇ ಅಡ್ಡ ರಸ್ತೆ ಮಸೀದಿ ಪಕ್ಕ ಓಣಿಯಲ್ಲಿ ಮೊಹಮದ್ ಪೀರ್ (49) ಅವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ತೀವ್ರವಾಗಿ ಗಾಯಗೊಂಡಿದ್ದು ಹಾಗೂ ಅವರ ಪತ್ನಿ ಸಾಹೇರ ಹಾಗೂ ಸೊಸೆ ಜಯೇಬಾ ಗಾಯಗೊಂಡಿದ್ದು ಸ್ಥಳೀಯ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು.
ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಹಾಗೂ ಮಹಾನಗರಪಾಲಿಕೆ ಮಾಜಿ ಸದಸ್ಯರಾದ ಹೆಚ್. ಸಿ. ಯೋಗೇಶ್ ರವರು ಧೈರ್ಯ ತುಂಬಿ ಹೆಚ್ಚಿನ ಚಿಕಿತ್ಸೆಗೆ ನೆರವು ನೀಡಿದರು.
ಈ ಸಂದರ್ಭದಲ್ಲಿ ಉತ್ತರ ಹಾಗೂ ದಕ್ಷಿಣ ಕಾಂಗ್ರೇಸ್ ಬ್ಲಾಕ್ ಅಧ್ಯಕ್ಷರಾದ ಶಿವು ಕುಮಾರ್ ಹಾಗೂ ಕಲೀಮ್ ಪಾಷಾ ಹಾಗೂ ಮೆಗ್ಗಾನ್ ಆಸ್ಪತ್ರೆ ಮಾಜಿ ಸಲಹಾ ಸಮಿತಿ ಸದಸ್ಯರಾದ ಎಸ್. ಚಿನ್ನಪ್ಪ ಹಾಗೂ ಕಾಂಗ್ರೇಸ್ ಮುಖಂಡರಾದ ಬಾಬು,ಪವನ್ ಕುಮಾರ್, ವಾರ್ಡ್ ಅಧ್ಯಕ್ಷ ನವೀನ್, ಸನಾಉಲ್ಲಾ , ನಿಜಮ್ ,ಪವನ್, ಆಸಿಫ್ , ಅಜಮ್ ಉಪಸ್ಥಿತರಿದ್ದರು