ಶಿವಮೊಗ್ಗ, ಕಣ್ಣಿನ ಆರೈಕೆ ಹಾಗೂ ಅಂಧತ್ವ ಮುಕ್ತ ಶಿವಮೊಗ್ಗ ವಿಶೇಷ ಕಾರ್ಯಕ್ರಮವನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಅರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯದ್ಯಾಂತ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರವನ್ನು ಶಂಕರ ಕಣ್ಣಿನ ಆಸ್ಪತ್ರೆ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸೊರಬ ತಾಲೂಕಿನ ತಳಗದ್ದೆಯಲ್ಲಿ 220 ರೋಗಿಗಳಿಗೆ ತಪಾಸಣೆ ನಡೆಸಲಾಗಿದೆ ಹಾಗೂ 107 ರೋಗಿಗಳಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಗಿದೆ.
15 ರೋಗಿಗಳಿಗೆ ಉಚಿತ ಔಷಧಿ ನೀಡಲಾಯಿತು ಮತ್ತು 35 ಪೊರೆ ಇರುವ ರೋಗಿಗಳಿಗೆ ಮತ್ತು 10 ಡಯಬಿಟಿಕ್ ರೆಟಿನೊಪತಿ ರೋಗಿಗಳಿಗೆ ಉಚಿತ ಶಸ್ತ್ರ ಚಿಕೆತ್ಸೆಗಾಗಿ ಶಂಕರ ಕಣ್ಣಿನ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ.

ಹಾಗೂ ಶಿವಮೊಗ್ಗ ಗ್ರಾಮಾಂತರದ ಅಬ್ಬಲಗೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಶ್ರೀಮತಿ ಭಾಗ್ಯಮ್ಮ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಮತ್ತು ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಧಿಕಾರಿಗಳಾದ ಡಾ. ರಾಜೇಂದ್ರ ಉದ್ಘಾಟನೆಯನ್ನ ನೆರವೇರಿಸಿದರು.
ಒಟ್ಟು 267 ರೋಗಿಗಳಿಗೆ ತಪಾಸಣೆ ನಡೆಸಲಾಗಿದೆ.120 ರೋಗಿಗಳಿಗೆ ಉಚಿತ ಕನ್ನಡಕ ನೀಡಲಾಗಿದೆ.ಪೊರೆ ಇದ್ದ 33 ರೋಗಿಗಳಿಗೆ ಹಾಗೂ 10 ಡಯಬಿಟಿಕ್ ರೆಟಿನೊಪತಿ ರೋಗಿಗಳಿಗೆ ಶಸ್ತ್ರ ಚಿಕಿತ್ಸೆಗಾಗಿ ಶಂಕರ ಕಣ್ಣಿನ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ.

ಜಿಲ್ಲಾಡಳಿತದಿಂದ ಕಣ್ಣಿನ ಅರೋಗ್ಯಕ್ಕೆ ಒಂದು ಮಹತ್ತರ ಹೆಜ್ಜೆಯನ್ನಿಡುವ ಮೂಲಕ ಕಾರ್ಯಕ್ರಮ ನಡೆಸಲಾಗುತ್ತಿದೆ.