ಶಿವಮೊಗ್ಗ, ಮದ್ಯಪಾನ ಮಾಡಿ ಕಾರು ಚಾಲನೆ ಮಾಡಿ ಎರಡು ಕಾರುಗಳಿಗೆ, ಆಟೋ ಮತ್ತು ಬಸ್ ಗೆ ಡಿಕ್ಕಿ ಹೊಡೆದ ಪ್ರಕರಣ ನಗರದ ಮಹಾವೀರ ವೃತ್ತದಲ್ಲಿ ನಡೆದಿದೆ.
KA17MC2063 ನಂಬರಿನ ಕಾರು ಚಾಲಕ ಕಳೆದ ರಾತ್ರಿ ಗೋಪಿ ವೃತ್ತದಿಂದ ಹೊರಟು ತಹಶೀಲ್ದಾರ್ ಕಚೇರಿಗೆ ಹೋಗುವುದರೊಳಗೆ ಇಷ್ಟು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ.
ಗೋಪಿ ವೃತ್ತದಲ್ಲಿ ಪೊಲೀಸರು ತಡೆದರೂ ಕಾರು ನಿಲ್ಲಿಸದೆ ಹೋದ ಈತ ಬಾಲರಾಜ ಅರಸ್ ರಸ್ತೆಯಲ್ಲಿ ಅಪಘಾತ ಎಸಗಿದ್ದಾನೆ.
ನಂತರ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕನಿಗೆ ಗಂಭೀರ ಗಾಯವಾಗಿದೆ. ಕಾರು ಚಾಲಕನನ್ನು ವಶಕ್ಕೆ ಪಡೆದ ಪೋಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.