ಶಿವಮೊಗ್ಗ ಜಿಲ್ಲೆಯ ಗ್ರಾಮಾಂತರ ಭಾಗದ ತುಪ್ಪೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕೊರಗಿ ಎಂಬ ಗ್ರಾಮದಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಭಾಗಷಃ ಮನೆಗಳ ವರಾಂಡವದರೆಗೂ ಮಳೆ ನೀರು ಬಂದಿದ್ದು, ಮನೆಯ ಸುತ್ತಮುತ್ತಲಿನಲ್ಲಿ ಭಾಗ ಕೊಚ್ಚಿ ಹೋಗಿರುವುದಾಗಿ ತಿಳಿದುಬಂದಿದೆ. ಇದರಿಂದ ಜನಸಾಮಾನ್ಯರು, ಸ್ಥಳೀಯ ನಿವಾಸಿಗಳು ದುಸ್ಥಿತಿ ಎದುರಿಸುವಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಸಂಬಂಧ ತುಪ್ಪುರು ಗ್ರಾಮ ಪಂಚಾಯತ್ ಪಿಡಿಒ ಜಯಶ್ರೀಯವರಿಗೆ ಗ್ರಾಮಸ್ಥರು ಇಂದು ಬೆಳಿಗ್ಗೆ ಸಮಸ್ಯೆ ತಿಳಿಸಿ ಸರಿಪಡಿಸಿಕೊಡಿ ಹಾಗೂ ಮತ್ತಷ್ಟು ಮಳೆ ಬಂದರೆ ಹೆಚ್ಚಿನ ಸಮಸ್ಯೆ ಉಂಟಾಗಲಿದೆ, ಮನೆಗಳಿಗೆ ನೀರು ನುಗ್ಗುಲಿದೆ ಎಂದು ಅಳಲು ತೋಡಿಕೊಂಡಿದ್ದರು. ಇದರ ಕುರಿತಾಗಿ ಇಂದು ಸಂಜೆಯಾದರೂ ಸಹ ಪಿಡಿಒ ಹಾಗೂ ಸಿಬ್ಬಂದಿಗಳು ಗ್ರಾಮಕ್ಕೆ ಭೇಟಿ ನೀಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸಮಸ್ಯೆ ಬಗೆಹರಿಯದ ಕಾರಣ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಆಗುತ್ತಿರುವುದರಿಂದ ಗ್ರಾಮದ ಸ್ಥಳೀಯರು ಈದಿನ ಡಾಟ್ ಕಾಮ್ ಗೆ ಮಾಹಿತಿ ತಿಳಿಸಿದ್ದರು.
ಗ್ರಾಮದಲ್ಲಿ ಮಳೆಯಿಂದ ಆದ ಸಮಸ್ಯೆ ಕುರಿತಾಗಿ ಪಿಡಿಒ ಜಯಶ್ರೀ ನಮ್ಮೊಂದಿಗೆ ಮಾತನಾಡಿ, “ಕೊರಗಿ ಗ್ರಾಮದಲ್ಲಿ ಮಳೆಯಿಂದ ತೀವ್ರ ಸಮಸ್ಯೆ ಆಗಿರುವುದಾಗಿ ಯಾರು ಒಬ್ಬರು ಸಹ ನನಗೆ ಮಾಹಿತಿ ನೀಡಿಲ್ಲ. ಸ್ಥಳೀಯರೊಬ್ಬರು ಮಾತ್ರ ನನಗೆ ಕರೆ ಮಾಡಿ ತಿಳಿಸಿದರು. ನಾನು ಅವರಿಗೆ ಇಂದು ಮೆಸ್ಕಾಂ ಅಧಿಕಾರಿಗಳೊಂದಿಗೆ ಕೆಲಸದ ನಿಮಿತ್ತ ಹೊರಗೆ ತೆರಳುತ್ತಿರುವ ಕಾರಣ ನಾಳೆ ಗ್ರಾಮಕ್ಕೆ ಭೇಟಿ ನೀಡುತ್ತೇನೆ ಪರಿಶೀಲಿಸುತ್ತೇನೆ ಎಂದು ತಿಳಿಸಿದೆ” ಎಂದು ಉತ್ತರಿಸಿದ್ದಾರೆ.
“ಈಗ ಏಕಾಏಕಿ ಮಾಧ್ಯಮದವರ ಗಮನಕ್ಕೆ ತರುವ ಬದಲು ನನಗೆ ತಿಳಿಸಿದ್ದರೆ ಸ್ವತಃ ನಾನೆ ಭೇಟಿ ನೀಡಿ ಸಮಸ್ಯೆ ಆಲಿಸುತ್ತಿದ್ದೆ. ಬಗೆಹರಿಸಿ ಕೊಡುವ ಪ್ರಯತ್ನ ಮಾಡುತ್ತಿದ್ದೆ” ಎಂದು ತಿಳಿಸಿದರು.
ಇಂದು ರಾತ್ರಿ ಹೆಚ್ಚಾಗಿ ಮಳೆ ಸುರಿದು ಸ್ಥಳೀಯರಿಗೆ ಮತ್ತಷ್ಟು ಸಮಸ್ಯೆ ಎದುರಾದಲ್ಲಿ ಏನು ಮಾಡಬೇಕು. ಮೊದಲೇ ಈ ಗ್ರಾಮದಲ್ಲಿ ನೆಟ್‌ವರ್ಕ್ ಸಮಸ್ಯೆಯಿದೆ. ಯಾರಿಗೆ ಸಂಪರ್ಕ ಮಾಡಬೇಕು, ಅನಾಹುತ ಸಂಭವಿಸಿದಲ್ಲಿ ಯಾರು ಹೊಣೆಗಾರಾಗುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಪಿಡಿಒ, “ಮಾಧ್ಯಮ ವರದಿಗಾರರಾದ ನೀವೇ ಈಗ ಬನ್ನಿ. ಗ್ರಾಮಕ್ಕೆ ಒಟ್ಟಿಗೆ ತೆರಳುವ ಮೂಲಕ ಸಮಸ್ಯೆ ಬಗೆಹರಿಸಿ ಕೊಡುವ. ಹೆಚ್ಚಾಗಿ ಯಾವುದೇ ಹಾನಿ ಆಗಿಲ್ಲ”ವೆಂದು” ಎಂದು ತಿಳಿಸಿದರು.
ಮುಂದುವರೆದು ಮಾತನಾಡಿದ ಅವರು, “ಊರಿನಲ್ಲಿರುವ ಒಬ್ಬ ವ್ಯಕ್ತಿ ಕೆರೆಗೆ ತಲುಪುವ ನೀರನ್ನು ತನ್ನ ತೋಟಕ್ಕೆ ತಲುಪುವ ಸ್ಥಳದಲ್ಲೇ ಸರ್ಕಾರ ಮಾಡಿರುವ ಚಾನೆಲ್‌ಗೆ ಮಣ್ಣು ತುಂಬಿದ್ದಾರೆ. ಹೀಗಾಗಿ ನೀರು ಕೆರೆಗೆ ಹೋಗಲು ಆಗುತ್ತಿಲ್ಲ. ಈ ಸಂಬಂಧ ಪ್ರತಿ ವರ್ಷ ಈ ರೀತಿ ಸ್ಥಳೀಯರಿಗೆ ಸಮಸ್ಯೆ ಆಗುತ್ತಿದೆ. ಜೊತೆಗೆ ವೆಂಕಟಜ್ಜನ ಕೆರೆಗೆ ನೀರು ಹೋದಲ್ಲಿ ಈ ಪರಿಣಾಮ ನೀರು ಉರಿನೊಳಗೆ ಬರುವುದಿಲ್ಲ” ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿ ಬರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಹಾಗಿದ್ದಲ್ಲಿ ಪ್ರತಿವರ್ಷ ಇದೆ ಸಮಸ್ಯೆ ಆಗುತ್ತಿದೆ. ಗ್ರಾಮದಲ್ಲಿ ಎಂದಾದರೆ ಯಾಕೆ ಇಲ್ಲಿವರೆಗೂ ಸಮಸ್ಯೆ ಬಗೆಹರಿಸಿಲ್ಲ? ಯಾಕೆ ಕ್ರಮ ಜರುಗಿಸಿಲ್ಲ ಹಾಗೂ ಅತಿಯಾದ ಮಳೆಯಿಂದ ಸ್ಥಳೀಯರ ಮನೆಗೆ ನೀರು ನುಗ್ಗಿದ್ದಲ್ಲಿ ಅನಾಹುತ ಆದರೆ ಏನು ಮಾಡಬೇಕು ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.