ಶಿವಮೊಗ್ಗ, ನಗರದ ಮೆಗ್ಗಾನ್ ಆಸ್ಪತ್ರೆಗೆ ಸೇರಿದ ಮೆಗ್ಗಾನ್ ನರ್ಸಿಂಗ್ ಕ್ವಾಟ್ರಸ್ನಲ್ಲಿ ಸ್ವಂತ ತಾಯಿಯೇ ತನ್ನ ಮಗಳನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆರನೇ ತರಗತಿ ಓದುತ್ತಿದ್ದ ಮಗಳ ತಲೆಗೆ ಮಚ್ಚಿನಿಂದ ಹೊಡೆದ ಸಾಯಿಸಿದ ತಾಯಿ ಬಳಿಕ ಆಕೆಯ ಮೇಲೆ ನಿಂತುಕೊಂಡ ಪ್ಯಾನ್ಗೆ ನೇಣುಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೊಲೆಯಾದ ಬಾಲಕಿ ಪೂರ್ವಿಕಾ ಹಾಗೂ ಮೃತ ಮಹಿಳೆ 38 ವರ್ಷದ ಶೃತಿ. ಶೃತಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು ನಿನ್ನೆ ರಾತ್ರಿ ತನ್ನ ಮಗಳನ್ನು ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾಳೆ.
ಬಳಿಕ ಮಗಳ ದೇಹವನ್ನು ಪ್ಯಾನಿನ ಕೆಳಗೆ ಎಳೆದು, ಮೃತದೇಹದ ಮೇಲೆ ನಿಂತು ನೇಣಿಗೆ ಶರಣಾಗಿದ್ದಾಳೆ. ಇವರು ಮೆಗ್ಗಾನ್ನಲ್ಲಿ ಕೆಲಸ ಮಾಡುವ ರಾಮಣ್ಣ ಎನ್ನುವವರ ಪತ್ನಿಯಾಗಿದ್ದು,
ಘಟನೆ ಸಂದರ್ಭದಲ್ಲಿ ಪತಿಯು ನೈಟ್ ಶಿಫ್ಟ್ ಡ್ಯೂಟಿಯಲ್ಲಿದ್ದರು. ಬೆಳಗ್ಗೆ ಡ್ಯೂಟಿ ಮುಗಿಸಿ ಕ್ವಾಟ್ರಸ್ಗೆ ಬಂದಾಗ ವಿಷಯ ತಿಳಿದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.