ಶಿವಮೊಗ್ಗದ ತಿಲಕ್ ನಗರದಲ್ಲಿ ಅನವಶ್ಯಕವಾಗಿ 7 ರಿಂದ 8 ಆಸ್ಪತ್ರೆಗಳು ಆಗಿದೆ, ಅದರೊಟ್ಟಿಗೆ ಎಲ್ಲೆಂದರಲ್ಲಿ ಆಸ್ಪತ್ರೆ ಪಕ್ಕಕ್ಕೆ ಆಟೋ ನಿಲ್ದಾಣ ಅಂತ ಮಾಡುತ್ತಿದ್ದಾರೆ.
ಹಾಗೆಯೆ ನಾನು ತಿಲಕ್ ನಗರ ಮೊದಲನೇ ತಿರುವಿನಲ್ಲಿ ವಾಸ ಮಾಡುತ್ತಿದ್ದು ಎಂದು ರಾಜೇಂದ್ರ ಅವರು ತಿಳಿಸಿದ್ದು, ನಮ್ಮ ಮನೆ ಎದುರಿಗೆ ಸನ್ ಸ್ಪೆಷಲಿಟಿ ಆಸ್ಪತ್ರೆ ಆಗಿದೆ.
ಈಗ ನೋಡಿದರೆ ಇದ್ದುಕಿದ್ದಂಗೆ ಆಟೋ ನಿಲ್ದಾಣ ಅಂತ ಆಸ್ಪತ್ರೆ ಹೆಸರಲ್ಲಿ ಬೋರ್ಡ್ ಹಾಕಿದ್ದಾರೆ ಯಾವ ಪರ್ಮಿಷನ್ ತಗೊಂಡಿಲ್ಲ ಹಾಗೂ ಇಂದು ಒಂದಷ್ಟು ಆಟೋಗಳು ಬಂದು ಆಯುಧ ಪೂಜೆ ಮಾಡಿ ಹೋಗಿದ್ದಾರೆ.

ಇದಷ್ಟೇ ಅಲ್ಲದೆ ನಮ್ಮ ಈ ರಾಘವೇಂದ್ರ ಸ್ವಾಮಿ ಮಠದ ರಸ್ತೆಯಲ್ಲಿ ಎರಡು ಬದಿಯಲ್ಲಿ ವಾಹನ ಪಾರ್ಕಿಂಗ್ ಮಾಡುತ್ತಾರೆ ನಮ್ಮ ವಾಹನ ತೆಗೆಯುವುದಕ್ಕೆ ತುಂಬಾ ಕಷ್ಟಕರವಾಗಿದೆ ಎಂದರು.
ನಾವು ಈ ಸಂಬಂಧ ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತ ಬಂದಿದ್ದೇವೆ, ಆದರೆ ಇಲ್ಲಿವರೆಗೂ ಟ್ರಾಫಿಕ್ ಪೊಲೀಸ್ ಇಲಾಖೆ ಹಾಗೂ ಸಂಬಂಧ ಪಟ್ಟವರು ನಮ್ಮ ಧ್ವನಿ ಆಲಿಸುತ್ತಿಲ್ಲ ಹೀಗಾಗಿ ನಿಮ್ಮ ಮಾಧ್ಯಮ ಮುಖಾಂತರವಾದರೂ ನಮಗೆ ಪರಿಹಾರ ಒದಗಿಸಿ ಎಂದು ರಾಜೇಂದ್ರ ಅವರು ಮನವಿ ಮಾಡಿಕೊಂಡರು.

ಇದ್ದುಕಿದ್ದಂಗೆ ಆಸ್ಪತ್ರೆ ಪಕ್ಕ ರಸ್ತೆಯಲ್ಲಿ ಆಟೋ ನಿಲ್ದಾಣಕ್ಕೆ ಪರ್ಮಿಷನ್ ಕೊಟ್ಟಿರುವ ಅಧಿಕಾರಿ ಯಾರು?
ಹಾಗೂ ಪರ್ಮಿಷನ್ ಕೊಟ್ಟಿಲ್ಲವೆಂದರೆ ಅನಧಿಕೃತವಾಗಿ ಈ ರೀತಿ ಆಗಿದ್ದಲ್ಲಿ ಈ ಆಟೋದವರ ಮೇಲೆ ಕ್ರಮ ಏನು ಎಂದು ಪ್ರಶ್ನೆ ಮಾಡಿದ್ದಾರೆ?
ಆಟೋದವರು ಆಸ್ಪತ್ರೆ ಹೆಸರಲ್ಲಿ ಆಟೋ ನಿಲ್ದಾಣ ಬೋರ್ಡ್ ಹಾಕಿದ್ದಾರೆ, ಇದಕ್ಕೆ ಆಸ್ಪತ್ರೆ ಅವರ ಸಾಥ್ ಇದ್ದೀಯ? ಈ ಎಲ್ಲಾ ಗೊಂದಲಗಳಿಗೆ ಏನು ಕ್ರಮ ಆಗಲಿದೆ ಎಂಬುದು ತಿಲಕ್ ನಗರದ ನಿವಾಸಿಗಳ ಪ್ರಶ್ನೆಗೆ ಉತ್ತರ ಸಿಗಬೇಕಿದೆ.
ಅಧಿಕಾರಿಗಳು ಹಾಗೂ ಆಡಳಿತ ವ್ಯವಸ್ಥೆಯ, ಅವ್ಯವಸ್ಥೆಯು ನಗರದಲ್ಲಿ ಅಧಿಕಾರಿಗಳ ಹಾಗೂ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ, ಜೊತೆಗೆ ಆಡಳಿತ ವ್ಯವಸ್ಥೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಬಗ್ಗೆ ಇವರಿಗೆಲ್ಲ ಯಾವ ಭಯ ಇಲ್ಲದಂತೆ ಆಗಿದೆ ಅಂದರೆ ತಪ್ಪಾಗಲಾರದು ಎಂಬುದು ಜನಸಾಮಾನ್ಯರ ಮಾತಾಗಿದೆ.