ಶಿವಮೊಗ್ಗ, ಲಕ್ಕವಳ್ಳಿಯಲ್ಲಿರುವ ಭದ್ರಾ ಡ್ಯಾಮ್ಗೆ ಹೊಸದಾಗಿ ಈಗ ಈ ಗೇಟ್ನ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದೆ. ಈ ಮೂಲಕ ಕಾಲುವೆಗೆ ನೀರು ಹರಿಸುವ ಕೆಲಸವೂ ಆರಂಭವಾಗಿದೆ.
ಮೇ ತಿಂಗಳಿನಲ್ಲಿ ಆರಂಭವಾಗಿದ್ದ ಭದ್ರಾ ಜಲಾಶಯದ ಎಡದಂಡೆ ನಾಲೆಗೆ ಹೊಸ ಗೇಟ್ ಅಳವಡಿಸುವ ಕಾಮಗಾರಿ, ಮೊನ್ನೆ ಮಂಗಳವಾರ ಕಾಮಗಾರಿ ಪೂರ್ಣಗೊಂಡಿದೆ. ಸಂಪೂರ್ಣಗೊಂಡಿದೆ.
4 ತಿಂಗಳ ಕಾಮಗಾರಿ ಬಳಿಕ ಹಿಂದಿನ ತಾತ್ಕಾಲಿಕ ಗೇಟ್ನ್ನ ತೆಗೆದು ಇದೀಗ ಹೊಸ ಗೇಟ್ನ ಮೂಲಕ ಕಾಲುವೆ ನೀರು ಹರಿಸಲಾಗುತ್ತಿದೆ.
ಅಪಾರ್ ಕಂಪನಿ ಭಾರತೀಯ ಉಕ್ಕುಪ್ರಾಧಿಕಾರದ ಮೂಲಕ ಉಕ್ಕನ್ನ ಪಡೆದು ಈ ಗೇಟ್ನ್ನ ತಯಾರಿಸಿದೆ.ಸದ್ಯ ಈ ಗೇಟ್ ಅಳವಡಿಕೆಯಿಂದಾಗಿ ನೀರಿನ ಸೋರಿಕೆಯು ತಡೆದಂತಾಗಿದ್ದು, ಕಾಲುವೆ ಸರಾಗವಾಗಿ ನೀರು ಹರಿಯುವಂತಾಗಿದೆ.