ಶಿವಮೊಗ್ಗ | ಆ.1 ರಿಂದ ಬಹುಮಹಡಿ ಕಟ್ಟಡದಲ್ಲಿ ಪಾರ್ಕಿಂಗ್ ವ್ಯವಸ್ಥೆ ಆರಂಭ

Date:

Advertisements

ಶಿವಮೊಗ್ಗ, ಎರಡು ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮತ್ತು ಸಾರ್ವಜನಿಕರ ವಲಯದಲ್ಲಿ ಬಹಳ ಚರ್ಚೆಗೆ ಒಳಪಟ್ಟಿದ್ದ ಬಹುಮಹಡಿ ಕಟ್ಟಡದಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಮುಹೂರ್ತ ಫಿಕ್ಸ್ ಆಗಿದೆ.

ಶಿವಮೊಗ್ಗದ ಹಳೆ ಹೂವಿನ‌ಮಾರುಕಟ್ಟೆಯಲ್ಲಿ ಬಹುಮಹಡಿ ಕಟ್ಟಡ ನೆನೆಗುದಿಗೆ ಬಿದ್ದಿತ್ತು. ಕಳೆದ ಎರಡು ವರೆ ವರ್ಷದಿಂದ ಬಹುಮಹಡಿ ಕಟ್ಟಡ ನಿರ್ಮಾಣಗೊಂಡಿದ್ದರು ಅಲ್ಲಿನ‌ ಮಳಿಗೆಗಳಾಗಲಿ ಅಥವಾ ಪಾರ್ಕಿಂಗ್ ವ್ಯವಸ್ಥೆ ಆಗಲಿ ಆಗಿರಲಿಲ್ಲ. ಈಗ ಅದಕ್ಕೆ ಕಾಲ ಕೂಡಿ ಬಂದಿದೆ.

ಮಳಿಗೆ ಆರಂಭಕ್ಕೆ ಇನ್ನೂ ಮುಹೂರ್ತ ಫಿಕ್ಸ್ ಆಗಿಲ್ಲ. ಆದರೆ ಬಹುಮಹಡಿ ಕಟ್ಟಡದಲ್ಲಿ ದ್ವಿಚಕ್ರ, ಕಾರು ಮತ್ತು ತ್ರಿಚಕ್ರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಆರಂಭಗೊಂಡಿದೆ. ಆ.1 ರಿಂದ ಬಹುಮಹಡಿ ಕಟ್ಟಡದಲ್ಲಿ ಪಾರ್ಕಿಂಗ್ ವ್ಯವಸ್ಥೆ ಆರಂಭಗೊಳ್ಳಲಿದೆ. 6 ತಿಂಗಳ ಹಿಂದಷ್ಟೆ ಬಹುಮಹಡಿ ಕಟ್ಟಡ ಸ್ಮಾರ್ಟ್ ಸಿಟಿ ಯಿಂದ ನಗರ ಪಾಲಿಕೆಗೆ ಹಸ್ತಾಂತರಗೊಂಡಿದೆ. ಅದಾದ ನಂತರ ಇ ಟೆಂಡರ್ ನಡೆದಿದ್ದು ಶಿವಮೊಗ್ಗದವರಿಗೆ ಈ ಪಾರ್ಕಿಂಗ್ ಟೆಂಡರ್ ಆಗಿದೆ.

ಈಗ ಆಗಸ್ಟ್ 1 ರಿಂದ ಪಾರ್ಕಿಂಗ್ ವ್ಯವಸ್ಥೆ ಶುಭಾರಂಭಗೊಳ್ಳಲಿದೆ. ದ್ವಿಚಕ್ರ ವಾಹನಗಳಿಗೆ ಮೊದಲ ಎರಡು ಗಂಟೆಗೆ 10 ರೂ. ನಿಗದಿಯಾದರೆ, ಕಾರುಗಳಿಗೆ 20 ರೂ. ನಿಗದಿಯಾಗಿದೆ. ಎರಡು ಗಂಟೆಯ ನಂತರ ಕಾರುಗಳಿಗೆ ಪ್ರತಿ ಒಂದು ಗಂಟೆಗೆ 10 ರೂ. ನಿಗದಿಯಾದರೆ ದ್ವಿಚಕ್ರ ವಾಹನಗಳಿಗೆ 5 ರೂ. ನಿಗದಿ ಪಡಿಸಲಾಗಿದೆ. ಬೇಸ್ ಮೆಂಟ್ ನಲ್ಲಿ 80 ದ್ವಿಚಕ್ರವಾಹನಗಳನ್ನ ಪಾರ್ಕ್ ಮಾಡಬಹುದಾಗಿದೆ. ಕಟ್ಟಡದ ಎರಡು ಫ್ಲೋರ್ ಗಳಲ್ಲಿ 172 ಕಾರುಗಳನ್ನ ಪಾರ್ಕ್ ಮಾಡುವ ವ್ಯವಸ್ಥೆ ಮಾಡಲಾಗಿದೆ.

ಈಗಾಗಲೇ ದ್ವಿಚಕ್ರ ವಾಹನಗಳಿಗೆ ಅಮೀರ್ ಅಹಮದ್ ವೃತ್ತದಿಂದ ಹೂವಿನ ಮಾರುಕಟ್ಟೆಯ ವರೆಗೆ ರಸ್ತೆ ಬದಿಯ ಪಾರ್ಕಿಂಗ್ ಇಲ್ಲ. ಹಾಗಾಗಿ ವಾಹನ ಸವಾರರು ಈ ಬಹುಮಹಡಿಯಲ್ಲಿನ ಪಾರ್ಕಿಂಗ್ ವ್ಯವಸ್ಥೆ ಬಳಸಿಕೊಳ್ಳಬಹುದಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೋಜುಗಾದ ಸೂಜು ಮಲ್ಲಿಗೆ ಹುಡುಗಿ ಹಾಡು : ಇಮ್ಮಡಿಯಾದ ಪ್ರೇಕ್ಷಕರ ಉತ್ಸಾಹ

 ಕಳೆದ 10 ದಿನಗಳಿಂದ ದಸರಾ ಉತ್ಸವ ಸಂಭ್ರಮದಲ್ಲಿ ಮುಳುಗಿದ್ದ ಪ್ರೇಕ್ಷಕರ ಉತ್ಸಾಹ...

ತುಮಕೂರು ದಸರಾ : ಸಚಿವರಿಂದ ವಿಶೇಷ ಪೂಜೆ

ತುಮಕೂರು ದಸರಾ ಉತ್ಸವದ ಕಡೆಯ ದಿನವಾದ ವಿಜಯದಶಮಿಯಂದು ಗೃಹ ಹಾಗೂ ಜಿಲ್ಲಾ...

ಯುವಪರಿವರ್ತನೆ ಯಾತ್ರೆ: ಬಾಗಲಕೋಟೆಯಲ್ಲಿ ಚಾಲನೆ

ಯುವಜನರನ್ನು ರಾಜ್ಯದ ಅಭಿವೃದ್ಧಿಯತ್ತ ಚಿತ್ತಹರಿಸಲು, ಪ್ರಜೆಗಳ ಆರೋಗ್ಯ, ಶಿಕ್ಷಣ, ಸಬಲೀಕರಣ, ಉದ್ಯೋಗದ...

ಕೊಪ್ಪಳ | ಪ್ರವಾದಿ ಮಹಮ್ಮದ್‌ ಸಂದೇಶವನ್ನು ನಾವು ಪಾಲನೆ ಮಾಡಬೇಕು: ಲಾಲ್ ಹುಸೇನ್ ಕಂದ್ಗಲ್

'ಖುರಾನ್' ಬರುವ ಪ್ರವಾದಿ ಮಹಮ್ಮದ್‌ ಅವರು ಹೇಳಿದ ಸತ್ಯವನ್ನೇ ಭಾರತೀಯ ಪುರಾಣಗಳು...

Download Eedina App Android / iOS

X