ಶಿವಮೊಗ್ಗದ ಪ್ರಜ್ಞಾ ಬುಕ್ ಗ್ಯಾಲರಿಯಲ್ಲಿ ದಿನಾಂಕ 26-07-25 ರಂದು ಶನಿವಾರ ಸಂಜೆ 6 ಗಂಟೆಗೆ ನವ ಲೇಖಕರಾದ ಕು. ಅಂಜುಮ್ ಬಿ. ಎಸ್, ಕು.ವಿಸ್ಮಿತ ವಿ. ಹಾಗೂ ಕು. ರಿದಾ ಅನ್ವರ್ ಇವರ ಚೊಚ್ಚಲ ಕೃತಿಗಳ ಬಗ್ಗೆ ಕಾರು ಕತೆ ನಡೆಯಲಿದೆ, ಪುಸ್ತಕಗಳ ಕುರಿತು ಡಾ. ಭಾರತಿದೇವಿ (ಸಹ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಳೆಹೊನ್ನೂರು) ಪುಸ್ತಕಗಳ ಕುರಿತು ಮಾತನಾಡಲಿದ್ದಾರೆ.
ಬಿ ಎಂ ಸುನಿಲ್ ಕುಮಾರ್ ಮತ್ತು ಡಾ. ಎಚ್.ಎಸ್ ನಾಗಭೂಷಣ ಅವರು ಉಪಸ್ಥಿತಿ ಇರಲಿದ್ದಾರೆ ಮತ್ತು ಆಗಮಿಸುವ ಓದುಗ ಬಂಧುಗಳಿಗೆ ತಮ್ಮ ಸ್ವ ರಚನೆಯ ಕವನಗಳ ವಾಚನಕ್ಕೆ ಅವಕಾಶವಿರುತ್ತದೆ.
ಆಸಕ್ತ ಓದುಗರು ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 7411272835/ 9844661726 ಸಂಪರ್ಕಿಸಬಹುದಾಗಿದೆ.