ಶಿವಮೊಗ್ಗ ನಗರದ ಸರ್ಕಾರಿ ಹಾಗೂ ಖಾಸಗಿ ಬಸ್ಸು ನಿಲ್ದಾಣದಲ್ಲಿ ಸಾಕಷ್ಟು ಭಿಕ್ಷುಕರು, ನಿರಾಶಿತರು ಮಾನಸಿಕ ಅಸ್ವಸ್ಥರು ಹಾಗೂ ಮದ್ಯಪಾನಿಗಳಿಗೆ ವಾಸ ಸ್ಥಳವಾಗಿದೆ ಎಂದು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಗೆ ದೂರವಾಣಿ ಕರೆಗಳ ಮೂಲಕ ಹಾಗೂ ಮೌಖಿಕವಾಗಿ ದೂರಿನ ಅನ್ವಯ ದಿನಾಂಕ 27 -9 -2025 ರಂದು ಸಮಯ ಸುಮಾರು ರಾತ್ರಿ 9:30 ರಿಂದ 11 ಗಂಟೆವರೆಗೆ ಸ್ಥಳ ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ಸ್ಥಳೀಯರು ಹಾಗೂ ಅಲ್ಲಿನ ಸಿಬ್ಬಂದಿಗಳಿಂದ ಆಘಾತಕಾರಿ ವಿಷಯಗಳು ಕೂಡ ಹೊರ ಬಿದ್ದಿದೆ ಸುಮಾರು ನೂರಕ್ಕೂ ಅಧಿಕ ಜನ ದಿನ ರಾತ್ರಿ ಇಲ್ಲೇ ವಾಸವಾಗಿರುತ್ತಾರೆ ಕೆಲ ಖಾಸಗಿ ವ್ಯಕ್ತಿಗಳು ಬಿಕ್ಷುಕರಿಂದ ಬಡ್ಡಿ ವ್ಯವಹಾರವನ್ನು ನಡೆಸಿರುತ್ತಾರೆ ಎಂಬ ವಿಷಯ ತಿಳಿದು ಬಂದಿದೆ ಎಂಬ ಆರೋಪ ತಿಳಿಸಿದ್ದಾರೆ.

ಮಹಿಳಾ ವಿಶ್ರಾಂತಿ ಕೊಠಡಿಗಳಲ್ಲಿ ಕೆಲ ಮಹಿಳಾ ಭಿಕ್ಷಕರು ಅಲ್ಲಿಯೇ ನಿರಂತರವಾಗಿ ರಾತ್ರಿಯ ವೇಳೆ ವಾಸವಾಗಿರುವುದು ಕಂಡುಬರುತ್ತದೇ, ಇಲ್ಲಿ ಅಕ್ಕಪಕ್ಕದ ಊರಿನವರಲ್ಲದೆ ಹೊರರಾಜ್ಯಗಳಿಂದ ಕೂಡ ಬಂದು ಚಿಕ್ಕ ಮಕ್ಕಳ ಜೊತೆಗೆ ಆರೋಗ್ಯ ಸಮಸ್ಯೆ ಹೇಳಿ ಬಿಕ್ಷಾಟನೆ ಮಾಡುವುದು ಕಂಡುಬಂದಿರುತ್ತದೆ.

ಇಲ್ಲಿ ನೂರು ಜನ ಭಿಕ್ಷುಕರು ತಂಗುವುದರಿಂದ ಅಲ್ಲಿಯೇ ಊಟ ತಿಂಡಿ ಮಧ್ಯಪಾನ ತಂಬಾಕು ಸೇವನೆ ಹಾಗೂ ಅಲ್ಲಿಯೇ ಮಲಮೂತ್ರ ವಿಸರ್ಜನೆ ಮಾಡುವುದರಿಂದ ಇಲ್ಲಿಯ ಸ್ವಚ್ಛತೆ ಸಿಬ್ಬಂದಿಗಳಿಗೆ ತಲೆನೋವಿನ ಸಂಗತಿಯಾಗಿದೆ ಮತ್ತು ಶೌಚಾಲಯದ ಮುಂಭಾಗದಲ್ಲಿಯೇ ನೂರು ಜನ ಭಿಕ್ಷುಕರು ಮಧ್ಯಪಾನ ಮಾಡಿ ಮಲಗುವುದರಿಂದ ಮಹಿಳಾ ಪ್ರಯಾಣಿಕರಿಗೆ ಶೌಚಾಲಯಕ್ಕೆ ಹೋಗುವುದಕ್ಕೆ ಸಾಕಷ್ಟು ತೊಂದರೆಯಾಗುತ್ತದೆ ಎಂಬ ಆರೋಪ ಕೇಳಿ ಬಂದಿದೆ ಎಂದು ತಿಳಿಸಿದ್ದಾರೆ.
ಈ ಲೋಪ ದೋಷಗಳಿಗೆ ಮುಖ್ಯವಾಗಿ ಪೋಲಿಸ್ ಇಲಾಖೆ ಹಾಗೂ ನಗರಸಭೆಯ ಕಾರ್ಯ ವೈಫಲ್ಯವೇ ಎದ್ದು ಕಾಣಿಸುತ್ತದೇ ಎಂದು ಆರೋಪಿಸಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ (ರಿ.) ಕರ್ನಾಟಕದ ಮೀನಾ ಎಂ ಎಸ್ ಜಿಲ್ಲಾಧ್ಯಕ್ಷರು ಮಹಾನಗರ ಪಾಲಿಕೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ನೀಡುವ ಮೂಲಕ ಸಮಸ್ಯೆ ಬಗೆಹರಿಸಲು ವಿನಂತಿ ಮಾಡಿರುತ್ತಾರೆ.

ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮೀನಾ ಎಂಎಸ್, ಉಪಾಧ್ಯಕ್ಷರಾದ ಧರ್ಮ ನಾಯಕ್, ನಗರ ಘಟಕದ ಅಧ್ಯಕ್ಷರಾದ ಬಲರಾಮ, ಜಿಲ್ಲಾ ಕಾರ್ಯದರ್ಶಿಯಾದ ಭಾಗ್ಯ ಪಿ ಗೌಡ, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ಸತೀಶ್ ಅಂಗಡಿ, ಸೊರಬ ತಾಲೂಕು ಘಟಕದ ಅಧ್ಯಕ್ಷರಾದ ರಾಜೇಶ್ ಕಾನಡೆ ಹಾಗೂ ಸಹಾಯಕರಾಗಿ ಭುವನ್ ಕಾನಡೆ ಜೊತೆಗಿದ್ದರು.