ಶಿವಮೊಗ್ಗ, ಜಾತಿ ಗಣತಿ ಹೆಸರಲ್ಲಿ ಮನೆಗೆ ನುಗ್ಗಿದ ದರೋಡೆಕೋರರಿಬ್ಬರು ಮಹಿಳೆಯೋರ್ವರ ಮೇಲೆ ಹಲ್ಲೆ ಮಾಡಿ ದೋಚಲು ಪ್ರಯತ್ನಿಸಿ ಸಿಕ್ಕಿಬಿದ್ದ ಘಟನೆ ಶಿವಮೊಗ್ಗದ ಆಝಾದ್ ನಗರ ಕ್ಲರ್ಕ್ ಪೇಟೆಯಲ್ಲಿ ಮಧ್ಯಾಹ್ನ 1.40ರ ಹೊತ್ತಿಗೆ ನಡೆದಿದೆ.
ಆಝಾದ್ ನಗರದ ಎರಡನೇ ತಿರುವಿನಲ್ಲಿರುವ ನವೀದ್ ಮತ್ತು ಅವರ ತಾಯಿ ದಿಲ್ ಶಾದ್ ರವರಿದ್ದ ಮನೆಗೆ ಇಬ್ಬರು ಭೇಟಿ ನೀಡಿ, ತಾವು ಜಾತಿ ಗಣತಿ ಮಾಡಲು ಬಂದಿದ್ದೇವೆ. ಆಧಾರ್ ಕಾರ್ಡ್ ತನ್ನಿ ಎಂದಿದ್ದಾರೆ. ಆಧಾರ್ ಕಾರ್ಡ್ ತರಲೆಂದು ಮನೆಯೊಳಗೆ ಹೋದಾಗ ಇಬ್ಬರು ಏಕಾಏಕಿ ಮನೆಯೊಳಗೆ ನುಗ್ಗಿ ದರೋಡೆಗೆ ಯತ್ನಿಸಿದರೆಂದು ತಿಳಿಸಿದ್ದಾರೆ.
ತಸ್ಲಿಮಾ ಮತ್ತು ಅಸ್ಲಂರವರಿಬ್ಬರೂ ಜಾತಿಗಣತಿ ಮಾಡುವವರೆಂದು ಮನೆಗೆ ನುಗ್ಗಿ ತಾಯಿ ದಿಲ್ ಶಾದ್ ಮೇಲೆ ಹಲ್ಲೆ ಮಾಡಿದರು.
ಹೆದರಿದ ದಿಲ್ ಶಾದ್ ಕೂಡಲೇ ಬುದ್ದಿವಂತಿಕೆ ಉಪಯೋಗಿಸಿ ಮನೆಯಿಂದ ಹೊರಕ್ಕೆ ಓಡಿ ಬಂದಿದ್ದು, ಅಕ್ಕಪಕ್ಕದವರು ಸೇರಿಕೊಂಡು ಇಬ್ಬರಿಗೆ ಕೂಡಿ ಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ.