ಕಾಂತರಾಜ್ ಆಯೋಗದ ವರದಿಯ ಜಾಗೃತಿ ಅಂಗವಾಗಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ವತಿಯಿಂದ ಏ.12ರಂದು ಬೆಳಗ್ಗೆ 10 ಗಂಟೆಗೆ ಸರಿಯಾಗಿ ಶಿವಮೊಗ್ಗ ನಗರದ ಪತ್ರಿಕಾ ಭವನದಲ್ಲಿ ವಿಚಾರ ಸಂಕಿರಣ-ಸಾರ್ವಜನಿಕ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್ ಕಾಂತರಾಜ್ ಇರಲಿದ್ದಾರೆ.

ನಿಮ್ಮ ಈದಿನ ಡಾಟ್ ಕಾಮ್ ಮತ್ತೊಂದು ಹೊಸ ಪ್ರಯತ್ನ ಮಾಡಿದೆ. ಕನ್ನಡದಲ್ಲಿ ಮೊತ್ತಮೊದಲ ಬಾರಿಗೆ ಡಾ.ಬಿ.ಆರ್. ಅಂಬೇಡ್ಕರರ ಮಹತ್ವದ ಕೃತಿಗಳ ಸಾರಸಂಗ್ರಹವನ್ನು ಒಂದೇ ಪುಸ್ತಕದಲ್ಲಿ ಹಿಡಿದಿಡುವ ವಿನೂತನ ಪ್ರಯೋಗ ನಡೆಸಿದೆ. ಈ ವಿಶೇಷ ಸಂಚಿಕೆಯನ್ನು ಎಚ್ ಕಾಂತರಾಜ ಅವರು ಬಿಡುಗಡೆ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಶಾಸಕ ಆರ್ ಕೆ ಸಿದ್ದರಾಮಣ್ಣ, ಹಿಂದುಳಿದ ಜಾತಿಗಳ ಒಕ್ಕೂಟದ ಶಿವಮೊಗ್ಗ ಅಧ್ಯಕ್ಷ ವಿ ರಾಜು, ಹಿಂದುಳಿದ ಜನ ಜಾಗೃತಿ ವೇದಿಕೆ ಅಧ್ಯಕ್ಷ ತಿ ನ ಶ್ರೀನಿವಾಸ್, ಹಿಂದುಳಿದ ಜನ ಜಾಗೃತಿ ಮಹಿಳಾ ಘಟಕದ ಸಂಚಾಲಕಿ ಎಸ್ ವಿ ರಾಜಮ್ಮ, ಅಖಿಲ ಕರ್ನಾಟಕ ಹಿಂದುಳಿದ ವರ್ಗಗಳ ಮತ್ತು ಅತೀ ಹಿಂದುಳಿದ ವರ್ಗಗಳ ಜನ ಜಾಗೃತಿ ವೇದಿಕೆ ಶಿವಮೊಗ್ಗದ ಸಂಚಾಲಕ ಆರ್ ಮೋಹನ್, ಅಣ್ಣಪ್ಪ ಆಯನೂರ್ ಕೋಟೆ ಮಿಲಿಂದ ಅಧ್ಯಕ್ಷರು ಸಂಸ್ಕೃತಿಕ ಸಂಸ್ಥೆ ಶಿವಮೊಗ್ಗ, ಸೋಲಿಡಾರಿಟಿ ಯೂಥ್ ಮೂವ್ಮೆಂಟ್ ನ ಅಧ್ಯಕ್ಷರಾದ ಹಬೀಬುಲ್ಲ ಹಾಗೂ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಪ್ರೊ. ರಾಚಪ್ಪ ಇರಲಿದ್ದಾರೆ.

ಇದೊಂದು ಅತ್ಯುತ್ತಮ ಪುಸ್ತಕವಾಗಿದ್ದು ಖರೀದಿಸಬೇಕಾಗಿ ಹಾಗೂ ಜಿಲ್ಲೆಯ ಎಲ್ಲಾ ಹಿಂದುಳಿದ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಕ ಸಂಕಿರಣದ ಪ್ರಯೋಜನ ಪಡೆಯಬೇಕಾಗಿ ಹಿಂದುಳಿದ ಜನ ಜಾಗೃತಿ ವೇದಿಕೆಯ ಜಿಲ್ಲಾ ಸಂಚಾಲಕ ಆರ್ ಟಿ ನಟರಾಜ್ ವಿನಂತಿಸಿದ್ದಾರೆ.