ಶಿವಮೊಗ್ಗ ನಗರದಲ್ಲಿ ಕೆಲವು ತಿಂಗಳು ಹಿಂದೆ ಸೈಲೆಂಟ್ ಆಗಿದ್ದ ಸೈಲೆಂಸರ್ ಕರ್ಕಶ ಶಬ್ದ ಮತ್ತೊಮ್ಮೆ ನಗರದಲ್ಲಿ ಸದ್ದು ಮಾಡುತ್ತಿದೆ.
ಕೆಲವು ತಿಂಗಳ ಹಿಂದೆ ಎಸ್ಪಿ ನೇತೃತ್ವದಲ್ಲಿ ಕರ್ಕಶ ಸೈಲೆಂಸರ್ ಅನ್ನು ಅಳವಡಿಸಿ ಓಡಿಸುತ್ತಿದ ಪುಂಡರಿಗೆ ಬೈಕ್ ಸೈಲೆಂಸರ್ ಪುಡಿ ಪುಡಿ ಮಾಡುವ ಮೂಲಕ ಪುಂಡರಿಗೆ ಎಚ್ಚರಿಕೆ ನೀಡಿತ್ತು.
ಈಗ ಮತ್ತೊಮ್ಮೆ ಟ್ರಾಫಿಕ್ ಪೊಲೀಸರು ಫೀಲ್ಡ್ ಗೆ ಇಳಿಯೋದು ಅನಿವಾರ್ಯವಾದಂತೆ ಕಾಣಿಸುತ್ತಿದೆ.
ನಗರದಲ್ಲಿ ಹಲವು ಭಾಗ ಮತ್ತು ಕಾಲೇಜುಗಳ ಸುತ್ತಮುತ್ತಲಿನಲ್ಲಿ ಸಹಜವಾಗಿ ಕರ್ಕಶ ಸೈಲೆಂಸರ್ ಶಬ್ದ ಬೈಕ್ ಚಾಲನೆ ಕಂಡುಬರುತ್ತಿದೆ.ಅತೀ ಹೆಚ್ಚಾಗಿ ವಿದ್ಯಾನಗರ ಸಹ್ಯಾದ್ರಿ ಕಾಲೇಜು, ಸಂತೆ ಕಡೂರು, ವಿಮಾನ ನಿಲ್ದಾಣ ರಸ್ತೆಯಲ್ಲಿ ಹೆಚ್ಚಾಗಿ ಕಾಣಸಿಗುತ್ತಿದೆ.
ಈ ಪುಂಡರು ವಿಪರೀತ ಕರ್ಕಶ ಶಬ್ದ ಜೊತೆ ಜೊತೆಗೆ ಅತೀ ವೇಗ ಮತ್ತು ಅಪಾಯಕಾರಿ ಹೆಲ್ಮೆಟ್ ಧರಿಸದೆ ಚಾಲನೆ ಮಾಡುತ್ತಿದ್ದಾರೆ, ಹಾಗೂ ಕೆಲವರು ಆರ್ ಎಕ್ಸ್ ಬೈಕ್ ನಲ್ಲಿ ನಂಬರ್ ಪ್ಲೇಟ್ ಗೆ ಬಿಳಿ ಬಣ್ಣ ಬಳಿಯುವ ಮೂಲಕ ನಂಬರ್ ಸಹ ಸಿಗಬಾರದು ಎಂಬ ಬುದ್ದಿ ಓಡಿಸಿ,ಟ್ರಾಫಿಕ್ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನುಸುವ ಭಾವನೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ.
ಈ ಸಂಬಂಧ ಶಿವಮೊಗ್ಗ ನಗರ ಪ್ರಜ್ಞಾವಂತ ವಾಹನ ಸವಾರರಿಗೆ, ವಾಹನ ಚಲಾಯಿಸುವುದಕ್ಕೆ ಸಾಕಷ್ಟು ಕಿರಿ ಕಿರಿ ಹಾಗೂ ತೊಂದರೆ ಉಂಟಾಗಿರುತ್ತೆ. ಇವರುಗಳ ಪುಂಡಾಟಿಕೆಗೆ ಬೇರೆ ವಾಹನ ಸವಾರರ ಜೀವಕ್ಕೆ ತೊಂದರೆ ಆಗುವ ಮುನ್ನ ಟ್ರಾಫಿಕ್ ಪೊಲೀಸ್ ಎಚ್ಚತ್ತುಕೊಳ್ಳಬೇಕು ಎಂಬುದು ನಗರದ ವಾಹನ ಸವಾರರ ಆಗ್ರಹವಾಗಿದೆ.
ನಗರದಲ್ಲಿ ಟ್ರಾಫಿಕ್ ನಿಯಮ ಪಾಲಿಸುವಂತೆ, ಸುಲಲಿತ ಸಂಚಾರ ಮಾಡಲು ಸಾರ್ವಜನಿಕರು, ವಾಹನ ಸವಾರರಿಗೆ ಅನುಕೂಕವಾಗಲು ದಿನ ನಿತ್ಯ ಸಾಕಷ್ಟು ಪರಿಶ್ರಮ ನಡೆಸುತ್ತಿರುವ ಪೊಲೀಸ್ ಇಲಾಖೆ ಭಾರಿ ದಂಡ ವಿಧಿಸಿದರೆ ಸಂಚಾರ ನಿಯಮ ಪಾಲಿಸುತ್ತಾರೆ ಎಂದು ಭವಿಸಿದ್ದಾರೇನೋ ಈಗ ಅದು ಕೂಡ ಲೆಕ್ಕಕ್ಕೆ ಇಲ್ಲದಂತೆ ವಾಹನ ಸವಾರರು ವರ್ತಿಸುತ್ತಿರುವುದು ಕಂಡು ಬರುತ್ತಿದೆ.
ಸಾಮಾಜಿಕವಾಗಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಟ್ರಾಫಿಕ್ ಪೊಲೀಸ್ ದಿನ ನಿತ್ಯ ಎಷ್ಟೇ ಅರಿವು ನೀಡಿದರು ಸಹ ಇದು ಪ್ರಯೋಜನವಾದಂತೆ ಕಾಣಿಸುತ್ತಿಲ್ಲ. ಹಾಗೆಯೇ ಪೊಲೀಸ್ ಇಲಾಖೆ ಫೀಲ್ಡ್ ಗೆ ಇಳಿದು ಸಂಚಾರಿ ನಿಯಮದ ಅರಿವು ಮತ್ತೊಮ್ಮೆ ಮೂಡಿಸುವ ಅನಿವಾರ್ಯತೆ ಎದ್ದು ಕಾಣುತ್ತಿದೆ.
ಈ ಅರಿವಿನ ಕಾರ್ಯಕ್ರಮ ತಾತ್ಕಾಲಿಕವಾಗಿರಬಾರದು ನಿರಂತರವಾಗಿ ನಡೆಯುತ್ತಿರ ಬೇಕು ಎಂಬುದು ಜನಸಾಮಾನ್ಯರ ಆಗ್ರಹವಾಗಿದೆ.
ಇಷ್ಟೇ ಅಲ್ಲದೆ ನಗರದ ಸಿಗ್ನಲ್ ಲೈಟ್ ಗಳಲ್ಲಿ ಕ್ಯಾಮೆರಾ ಇರುತ್ತೆ ಎಂಬ ಕಾರಣಕ್ಕೆ ಹೆಲ್ಮೆಟ್ ಧರಿಸುತ್ತಿರುವುದು ಅಷ್ಟೇ. ಉಳಿದಂತೆ ನಗರದ ಬಹುಭಾಗಗಳಲ್ಲಿ ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸುತ್ತಿಲ್ಲ, ಮೊಬೈಲ್ ಬಳಸಿ ಚಾಲನೆ ಮಾಡುವುದು, ಥ್ರಿಬಲ್ ಚಾಲನೆ, ಒನ್ ವೇ ಲಿ ಸಂಚಾರ, ಹಾಗೂ ಸಂಚಾರಿ ನಿಯಮಗಳನ್ನೆಲ್ಲ ಗಾಳಿಗೆ ತೂರುವ ಮೂಲಕ ಟ್ರಾಫಿಕ್ ಪೊಲೀಸ್ ಇಲಾಖೆಗು ನಮಗೆ ಸಂಬಂಧವೇ ಇಲ್ಲದಂತೆ ಬಹಳಷ್ಟು ವಾಹನ ಸವಾರರು ವಾಹನ ಚಲಾಯಿಸುತ್ತಿರುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿರತ್ತೆ ಎಂಬುದು ಜನಸಾಮಾನ್ಯರ ಮಾತಾಗಿದೆ.
ಕೆಲವು ತಿಂಗಳ ಹಿಂದೆ ಟ್ರಾಫಿಕ್ ಪೊಲೀಸ್ ಇಲಾಖೆ ನಗರದಲ್ಲಿ ಸಂಚಾರಿ ನಿಯಮ ಪಾಲಿಸಲು ತೋರಿಸಿದ್ದ ಆಸಕ್ತಿ, ಈಗ ಕಡಿಮೆ ಆದಂತೆ ಕಾಣಿಸುತ್ತಿದೆ.
ಇದರ ಜೊತೆಗೆ ಮುಖ್ಯವಾಗಿ ಹೊಳೆ ಸ್ಟಾಪ್, ಬೆಕ್ಕಿನ ಕಲ್ಮಠ, ಎದುರಿನ ಆಸುಪಾಸಿನಲ್ಲಿ ಬೆಳಿಗ್ಗೆ ಸಮಯದಲ್ಲಿ ಕೋಟೆ ರಸ್ತೆ ಹಾಗೂ ಓಲ್ಡ್ ಬಾರ್ ಲೈನ್ ರಸ್ತೆಗೆ ಹೋಗುವವರು ಹಾಗೂ ಆ ರಸ್ತೆಯಿಂದ ಬರುವ ವಾಹನ ಸವಾರರಿಗೆ, ಕೂಲಿ ಕಾರ್ಮಿಕರು ರಸ್ತೆಯಲ್ಲಿ ಅಡ್ದಲ್ಲಾಗಿ ನಿಲ್ಲುತ್ತಿದ್ದೂ, ಇದರಿಂದ ವಾಹನ ಸವಾರರಿಗೆ ವಿಪರೀತ ಸಮಸ್ಯೆ ಎದುರಾಗುತ್ತಿದೆ, ಹೀಗಾಗಿ ಈ ಸ್ಥಳದಲ್ಲಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಲು ತಿಳಿಸಿ ಎಂದು ಹಲವು ವಾಹನ ಸವಾರರು ನಮ್ಮ ಈದಿನ ಡಾಟ್ ಕಾಮ್ ಗೆ ಮಾಹಿತಿ ನೀಡಿರುತ್ತಾರೆ. ಈ ಸಮಸ್ಯೆ ಕೂಡ ಶೀಘ್ರದಲ್ಲಿ ಬಗೆಹರಿಸಿ ಕೊಡಬೇಕಾಗಿದೆ.
ಇದೆಲ್ಲರ ಜೊತೆಗೆ ಕೆಲವು ತಿಂಗಳು ಹಿಂದೆ ಘರ್ಜಿಸುವ ಮೂಲಕ ಸೈಲೆಂಸರ್ ಗಳು ಪುಡಿ ಪುಡಿ ಆಗಿದ್ದವು ಮತ್ತದೇ ಮಾಡುತ್ತಾರ, ಹಾಗೂ ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ, ಮೊಬೈಲ್ ಹಿಡಿದು ಚಾಲನೆ ಇದುಕ್ಕೆಲ್ಲ ಶಾಶ್ವತ ಕಡಿವಾಣ ಹಾಕಲಿದ್ದಾರ ಟ್ರಾಫಿಕ್ ಪೊಲೀಸ್ ಎಂಬ ಪ್ರಶ್ನೆಗೆ, ಉತ್ತರದ ನಿರೀಕ್ಷೆಯಲ್ಲಿ ಪ್ರಜ್ಞಾವಂತ ನಾಗರಿಕರು?!

ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.