ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ನಿರ್ಮಾಣ ಹಂತದ ಮನೆಯ ಸೆಂಟ್ರಿಂಗ್ ಕೆಲಸಕ್ಕೆ ತರಿಸಲಾಗಿದ್ದ 150 ಕಬ್ಬಿಣದ ಪ್ಲೇಟ್‌ಗಳನ್ನು ರಾತ್ರೋರಾತ್ರಿ ಕಳ್ಳತನ ಮಾಡಲಾಗಿದೆ.
ಸೊರಬ ತಾಲೂಕು ಆನವಟ್ಟಿಯ ತಲ್ಲೂರು ಗ್ರಾಮದ ಶ್ರೀ ಸಾಯಿಬಾಬಾ ಬಡಾವಣೆಯಲ್ಲಿ ಘಟನೆ ನಡೆದಿದೆ.
ಸೆಂಟ್ರಿಂಗ್ ಕೆಲಸಕ್ಕೆ ಅಗತ್ಯವಿದ್ದ ಕಬ್ಬಿಣದ ದೊಡ್ಡ ಮತ್ತು ಸಣ್ಣ ಪ್ಲೇಟ್‌ಗಳನ್ನು ತರಿಸಲಾಗಿತ್ತು. ರಾತ್ರಿ ಕೆಲಸ ಮುಗಿಸಿ ಎಲ್ಲರು ಮರಳಿದ್ದಾಗ 100 ದೊಡ್ಡ ಪ್ಲೇಟ್, 50 ಸಣ್ಣ ಪ್ಲೇಟ್‌ಗಳನ್ನ ಕಳ್ಳತನವಾಗಿವೆ.
ಮನೆ ಮಾಲೀಕರು ಬೆಳಗ್ಗೆ ಸೈಟ್ ಬಳಿ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.ಸೆಂಟ್ರಿಂಗ್ ಪ್ಲೇಟ್ ಕಳ್ಳತನದಿಂದ ಸುಮಾರು ₹90,000 ನಷ್ಟವಾಗಿದೆ ಎಂದು ಆರೋಪಿಸಿ ಗುತ್ಯಪ್ಪ ಎಂಬುವವರು ದೂರು ನೀಡಿದ್ದಾರೆ. ಆನವಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ