ಶಿವಮೊಗ್ಗ ನಗರದ ಸೂಳೆಬೈಲು ವೃತ್ತದಲ್ಲಿ 32 ವರ್ಷದ ಯುವಕನೊರ್ವನಿಗೆ ಬರ್ಬರವಾಗಿ ಹಲ್ಲೆ ಮಡಲಾಗಿದ್ದು ಆತನನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನ ಶಬ್ಬೀರ್ (32) ವರ್ಷದ ವ್ಯಕ್ತಿಯೆಂದು ಗುರುತಿಸಲಾಗಿದ್ದು, ಪ್ರೀತಿ ಪ್ರೇಮದ ವಿಚಾರದಲ್ಲಿ ಹಲ್ಲೆ ನಡೆದಿದೆ ಎಂಬ ಮಾಹಿತಿಯಾಗಿದೆ.
ಉರಗಡೂರಿನ ತುಂಗಾನಗರ ಪಿ.ಎಸ್. ವ್ಯಾಪ್ತಿಯಲ್ಲಿ ವೈಯಕ್ತಿಕ ಕಾರಣಗಳಿಗಾಗಿ ಈ ಒಂದು ಘಟನೆ ನಡೆದಿದೆ ಎಂಬ ಮಾಹಿತಿಯಾಗಿದೆ.ಫರ್ದೀನ್ ಮತ್ತು ಆತನ ಸಹೋದರ ಮತ್ತು ಸ್ನೇಹಿತನ ಮೇಲೆ ಆರೋಪಗಳಿವೆ..ಅವರು ಶಬ್ಬೀರ್ ಮತ್ತು ಶಬಾಜ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಫರ್ದೀನ್ ಶಬ್ಬೀರ್ ಅವರ ಸಹೋದರಿ ಸಲ್ಮಿಯಾ ಅವರನ್ನು ಮದುವೆಯಾಗಿದ್ದಾರೆ.ಆದ್ದರಿಂದ ಫರ್ದೀನ್ ತನ್ನ ಸ್ವಂತ ಮಾವನ ಮೇಲೆ ಹಲ್ಲೆ ಮಾಡಲಾಗಿದೆ. ಈ ಘಟನಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
ಫರ್ದೀನ್ ಮತ್ತು ಸಲ್ಮಿಯಾ ಕೆಲವು ವರ್ಷಗಳ ಹಿಂದೆ ವಿವಾಹವಾಗಿದ್ದರು.ಇದು ಪ್ರೇಮ ವಿವಾಹವಾಗಿತ್ತು ಮತ್ತು ಹುಡುಗಿಯ ಕುಟುಂಬವು ಇದನ್ನು ವಿರೋಧಿಸುತ್ತಿತ್ತು ಎಂಬುದು ಮಾಹಿತಿ.
ಫರ್ದೀನ್ ಮತ್ತು ಸಲ್ಮಿಯಾ ಕೆಲವು ವರ್ಷಗಳಿಂದ ಕೆಲವು ವಿವಾದಗಳಿಂದಾಗಿ ಒಟ್ಟಿಗೆ ವಾಸಿಸುತ್ತಿರಲಿಲ್ಲ.ಶಬ್ಬೀರ್ ಮತ್ತು ಶಬಾಜ್ ಮತ್ತು ಆತನ ಸಹೋದರ ಫರ್ದೀನ್ ಅವರನ್ನು ಯಾವಾಗಲೂ ಬೆದರಿಸುತ್ತಿದ್ದರು.
ಆದ್ದರಿಂದ ಈ ಅಪರಾಧ ಸಂಭವಿಸಿದೆ ಎಂಬುದು ಮಾಹಿತಿ. ಈ ಘಟನೆಯಲ್ಲಿ ಇಬ್ಬರೂ ಗಾಯಗೊಂಡಿದ್ದಾರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿತ್ತಿದ್ದಾರೆ ಎಂದು ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಮಾಹಿತಿ ತಿಳಿಸಿದ್ದಾರೆ..
ಪ್ರಕರಣ ಸಂಬಂಧ ಸ್ಥಳಕ್ಕೆ ಎಸ್ಪಿ ಮಿಥುನ್ ಕುಮಾರ್, ಅಡಿಷನಲ್ ಎಸ್ಪಿ ಕಾರ್ಯಪ್ಪ, ತುಂಗ ನಗರ ಪೊಲೀಸ್ ಠಾಣೆಯ ಪಿಐ ಗುರುರಾಜ್ ಮತ್ತಿತರೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.