ಬದಲಾಗುತ್ತಿರುವ ಜಗತ್ತಿನ ತಂತ್ರಜ್ಞಾನಕ್ಕೆ ಪೂರಕವಾಗಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಮಲೆನಾಡಿನ ಶೈಕ್ಷಣಿಕ ಕೇಂದ್ರ ಶಿವಮೊಗ್ಗ ಮತ್ತೊಂದು ಐತಿಹಾಸಿಕ ಮೈಲಿಗಲ್ಲಿಗೆ ಸಾಕ್ಷಿಯಾಗಿದೆ. ನಗರದ ಪ್ರತಿಷ್ಠಿತ ಓಪನ್ ಮೈಂಡ್ಸ್ ವರ್ಲ್ಡ್ ಸ್ಕೂಲ್, ಲಂಡನ್ ಮೂಲದ ಸೂಪರ್ ಇಂಟೆಲಿಜೆನ್ಸ್ ಸಂಶೋಧನಾ ಸಂಸ್ಥೆಯಾದ CHIAC ASI ಜೊತೆ ಕೈಜೋಡಿಸಿದ್ದು, ಭಾರತದಲ್ಲೇ ಮೊದಲ ಬಾರಿಗೆ K-12 (ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ) ವಿದ್ಯಾರ್ಥಿಗಳಿಗಾಗಿ ‘ಸೂಪರ್ ಇಂಟೆಲಿಜೆನ್ಸ್ ವರ್ಲ್ಡ್ ಕ್ಯಾರಿಕುಲಂ’ (Superintelligence World Curriculum) ಅನ್ನು ಪರಿಚಯಿಸುತ್ತಿದೆ.
ಕೃತಕ ಬುದ್ಧಿಮತ್ತೆ (AI) ಕೇವಲ ಆರಂಭಿಕ ಹಂತದಿಂದ ಈಗ ‘ಸೂಪರ್ ಇಂಟೆಲಿಜೆನ್ಸ್’ ಎಂಬ ಅತ್ಯುನ್ನತ ಹಂತಕ್ಕೆ ವೇಗವಾಗಿ ಬೆಳೆಯುತ್ತಿದೆ. ಇಂತಹ ಸಂದರ್ಭದಲ್ಲಿ ಕೇವಲ ಕಂಠಪಾಠದ ಶಿಕ್ಷಣಕ್ಕೆ ಅಂಟಿಕೊಳ್ಳದೆ, ಭವಿಷ್ಯದ ತಾಂತ್ರಿಕ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸುವುದು ಈ ಪಠ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ಈ ಪಠ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಕೆಳಗಿನ ವಿಷಯಗಳಲ್ಲಿ ಪರಿಚಯ ನೀಡಲಾಗುತ್ತದೆ:
- ಕೃತಕ ಬುದ್ಧಿಮತ್ತೆಯ ಮೂಲತತ್ವಗಳು
- ಸೂಪರ್ ಇಂಟೆಲಿಜೆನ್ಸ್ ಮತ್ತು ಅದರ ಸಾಮಾಜಿಕ ಪರಿಣಾಮಗಳು
- ತಾರ್ಕಿಕ ಚಿಂತನೆ ಮತ್ತು ಸಮಸ್ಯೆ ಪರಿಹಾರ ಕೌಶಲ್ಯಗಳು
- ಬೌದ್ಧಿಕ ವ್ಯವಸ್ಥೆಗಳ ನೈತಿಕ ಪ್ರಶ್ನೆಗಳು
- ಭವಿಷ್ಯದ ತಂತ್ರಜ್ಞಾನಗಳಿಗೆ ಅಗತ್ಯ ಕೌಶಲ್ಯಗಳು
- ಭಾರತೀಯ ಪ್ರಾಚೀನ ಜ್ಞಾನ ಪರಂಪರೆಯಿಂದ ಆತ್ಮಜ್ಞಾನ ಹಾಗೂ ಚೇತನದ ಅರಿವು
ಈ ಪಠ್ಯಕ್ರಮವನ್ನು ಆಧುನಿಕ ಡಿಜಿಟಲ್ ಲರ್ನಿಂಗ್ ಪ್ಲಾಟ್ಫಾರ್ಮ್ ಮತ್ತು ನಿರಂತರವಾಗಿ ಅಭಿವೃದ್ಧಿಯಾಗುವ ಪಠ್ಯಗಳ ಮೂಲಕ ನೀಡಲಾಗುತ್ತದೆ.
ಯು ಕೆ ಮೂಲದ CHIAC ASI ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಮಾತನಾಡಿ, “ಸೂಪರ್ ಇಂಟೆಲಿಜೆನ್ಸ್ ಮಾನವ ಇತಿಹಾಸದಲ್ಲಿನ ಅತ್ಯಂತ ಪರಿಣಾಮಕಾರಿ ತಂತ್ರಜ್ಞಾನ ಪರಿವರ್ತನೆಗಳಲ್ಲಿ ಒಂದಾಗಿದೆ. ಇಂದಿನ AI ಮಟ್ಟಕ್ಕೆ ಮಾತ್ರ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವುದು ಸಾಕಾಗುವುದಿಲ್ಲ. ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡ ಶಿಕ್ಷಣ ಈಗ ಅಗತ್ಯವಾಗಿದೆ” ಎಂದರು.
ಈ ಸಹಭಾಗಿತ್ವದ ಕುರಿತು ಮಾತನಾಡಿದ ಶಾಲೆಯ ವ್ಯವಸ್ಥಾಪಕ ಟ್ರಸ್ಟಿ ಕಿರಣ್ ಕುಮಾರ್ ಕೆ, “ಇಂದಿನ ಶಿಕ್ಷಣದ ಗುರಿ ಕೇವಲ ಪರೀಕ್ಷೆಗಳಿಗೆ ಮಕ್ಕಳನ್ನು ಸಿದ್ಧಪಡಿಸುವುದಷ್ಟೇ ಆಗಿರಬಾರದು. ಹೆಚ್ಚು ಕಂಠಪಾಠ ಮಾಡುವವರಿಗಿಂತ ಉತ್ತಮವಾಗಿ ಚಿಂತಿಸುವವರೇ ಭವಿಷ್ಯವನ್ನು ಮುನ್ನಡೆಸುತ್ತಾರೆ. ಮಕ್ಕಳನ್ನು ಆ ಭವಿಷ್ಯದ ಯುಗಕ್ಕೆ ಸಿದ್ಧಗೊಳಿಸುವುದು ನಮ್ಮ ಅನಿವಾರ್ಯತೆ ಮತ್ತು ಹೊಣೆಗಾರಿಕೆಯಾಗಿದೆ” ಎಂದು ತಿಳಿಸಿದರು.
ಈ ಮಹತ್ವದ ಯೋಜನೆಯ ಮೊದಲ ಭಾಗವಾಗಿ ಮೇ ತಿಂಗಳ ಎರಡನೇ ವಾರದಲ್ಲಿ ʼಸೂಪರ್ ಇಂಟೆಲಿಜೆನ್ಸ್ʼ ವಿಷಯದ ಬಗ್ಗೆ ವಿಶೇಷ ಸಮ್ಮರ್ ಕ್ಯಾಂಪ್ ಆಯೋಜಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಮತ್ತು ಪೋಷಕರು ಶಾಲೆಯನ್ನು ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.
CHIAC ASI ಯುಕೆ ಮೂಲದ ಸೂಪರ್ ಇಂಟೆಲಿಜೆನ್ಸ್ ಸಂಶೋಧನಾ ಸಂಸ್ಥೆಯಾಗಿದ್ದು, ಸುರಕ್ಷಿತ ಮತ್ತು ಸಾಮಾಜಿಕವಾಗಿ ಜವಾಬ್ದಾರಿಯುತ ಬುದ್ಧಿವಂತ ವ್ಯವಸ್ಥೆಗಳ ಅಭಿವೃದ್ಧಿಗೆ ಕೆಲಸ ಮಾಡುತ್ತಿದೆ. ಜೊತೆಗೆ ಭವಿಷ್ಯದ ತಂತ್ರಜ್ಞಾನ ಬದಲಾವಣೆಗಳಿಗೆ ಸಮಾಜವನ್ನು ಸಿದ್ಧಗೊಳಿಸುವ ಶಿಕ್ಷಣ ಪರಿಷ್ಕರಣೆಗಳ ಮೇಲೂ ಗಮನಹರಿಸಿದೆ.
ಇದನ್ನೂ ಓದಿ: ಶಿವಮೊಗ್ಗ | ಜಿಲ್ಲಾಡಳಿತದಿಂದ ಉದ್ಯೋಗ ಮೇಳ; ಮಹಿಳಾ ಉದ್ಯೋಗಾಕಾಂಕ್ಷಿಗಳಿಗೆ ಆದ್ಯತೆ
ಶಿವಮೊಗ್ಗದ ಓಪನ್ ಮೈಂಡ್ಸ್ ವರ್ಲ್ಡ್ ಸ್ಕೂಲ್ ಸಮಗ್ರ ಹಾಗೂ ಭವಿಷ್ಯಮುಖಿ ಶಿಕ್ಷಣ ನೀಡುವ ಪ್ರಗತಿಪರ ಶಿಕ್ಷಣ ಸಂಸ್ಥೆಯಾಗಿದ್ದು, ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆ ಮತ್ತು ವಿದ್ಯಾರ್ಥಿ ಕೇಂದ್ರಿತ ಶಿಕ್ಷಣದ ಮೂಲಕ ಮಕ್ಕಳನ್ನು ಭವಿಷ್ಯದ ಸವಾಲುಗಳಿಗೆ ಸಿದ್ಧಗೊಳಿಸುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಕಿರಣ್ ಕುಮಾರ್ ಕೆ ಮೊ.ಸಂ 9900015255 ಅಥವಾ ಚಂದ್ರಶೇಖರ್ ನಾಗರಾಜ್ ಮೊ.ಸಂ 9980067598ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.





