ಉಡುಪಿ | ಮತಾಂತರ ಸಂವಿಧಾನ ವಿರೋಧಿಯಲ್ಲ, ಸಂವಿಧಾನ ಬದ್ದ ಹಕ್ಕು – ಪ್ರೊ.ಫಣಿರಾಜ್

Date:

ಹಿಂದುತ್ವದ ಹೆಸರಿನಲ್ಲಿ ಮತಾಂತರವನ್ನು ಅಪರಾಧೀಕರಣಗೊಳಿಸುತ್ತಿದ್ದು ಇದು ಭಾರತದ ತಾತ್ವಿಕ ಪರಂಪರೆಗೆ ದ್ರೋಹ ಎಂದು ಚಿಂತಕ ಪ್ರೊ‌ಫಣಿರಾಜ್ ಅಭಿಪ್ರಾಯ ಪಟ್ಟರು.

- Advertisement -

ಅವರು ಇಂದು ಉಡುಪಿಯ ಅಜ್ಜರಕಾಡಿನ ಹುತಾತ್ಮ ಸ್ಮಾರಕ ಬಳಿ “ಛತ್ತೀಸ್ಗಢದಲ್ಲಿ ಕ್ರೈಸ್ತ ಧರ್ಮ ಭಗಿನಿಯರ ಮೇಲೆ ಸುಳ್ಳು ಪ್ರಕರಣ” ದಾಖಲಿಸಿ ಬಂಧಿಸಿರುವ ಕ್ರಮವನ್ನು ಖಂಡಿಸಿ ಸಾಲಿಡಾರಿಟಿ ಯೂತ್’ಮೂವ್ಮೆಂಟ್ ಉಡುಪಿ ಜಿಲ್ಲೆ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಛತ್ತೀಸ್ಗಢದಲ್ಲಿ ಕ್ರೈಸ್ತ ಭಗಿನಿಯರನ್ನು ಬಲವಂತದ ಮತಾಂತರ ಮತ್ತು ಮಾನವ ಹಕ್ಕುಗಳ ಕಳ್ಳ ಸಾಗಾಣಿಕೆ ಆರೋಪ ಹೊರಿಸಿ ಪ್ರಕರಣ ದಾಖಲಿಸಿದ ಕಾರಣಕ್ಕೆ ಮಾತ್ರ ಈ ಪ್ರತಿಭಟನೆ ನಡೆಯುತ್ತಿಲ್ಲ ಬದಲಾಗಿ ಅವರನ್ನು ಬಂಧಿಸಿರುವ ಪ್ರಕ್ರಿಯೆಯ ವಿರುದ್ಧ ಕೂಡ ನಮ್ಮ ಆಕ್ಷೇಪ ಇದೆ ಎಂದರು.

ಧಾರ್ಮಿಕ ಸ್ವಾತಂತ್ರ್ಯ ಕಾಯಿದೆ ಅಲ್ಪಸಂಖ್ಯಾತರ ನಿತ್ಯದ ಬದುಕನ್ನು ಅಪರಾಧೀಕರಣಗೊಳಿಸುವುದಕ್ಕಾಗಿ ತಂದಿರುವ ಕಾನೂನಾಗಿದೆ. ಮತಾಂತರ ಎನ್ನುವುದು ಸಂವಿಧಾನ ವಿರೋಧಿಯಲ್ಲ, ಅದು ಸಂವಿಧಾನ ಬದ್ದ ಹಕ್ಕು. ಪ್ರತಿಯೊಬ್ಬ ಭಾರತೀಯನಿಗೆ ಯಾವುದೇ ಧರ್ಮವನ್ನು ಆಚರಿಸುವ, ಭೋದಿಸುವ ಹಕ್ಕಿದೆ. ಹಿಂದುಗಳಂತೆ ಅಲ್ಪಸಂಖ್ಯಾತರಿಗೂ ಈ ಹಕ್ಕು ಸಂವಿಧಾನ ನೀಡುತ್ತದೆ. ಇದು ಯಾರ ಕರುಣೆ ಅಲ್ಲ ಇದು ಸಂವಿಧಾನ ನೀಡಿರುವ ಹಕ್ಕಾಗಿದೆ.‌ ಸಂವಿಧಾನದ ವಿಧಿ 14&15 ರಂತೆ ಕಾನೂನಿನಲ್ಲಿ ಎಲ್ಲರೂ ಸಮಾನರು. ಈ ಕಾಯಿದೆ ಭಾರತದ ವಿಧಿ 14,15&25 ನ್ನು ನೇರವಾಗಿ ಉಲ್ಲಂಘಿಸುತ್ತದೆ ಎಂದರು.

ಈ ಘಟನೆಯು ಹಿಂದುತ್ವದ ಅಜೆಂಡಾ ಹೇರುವ ಪ್ರಯತ್ನದ ಮುಂದುವರಿದ ಭಾಗವಾಗಿದೆ.ಅವರ ಅಡಿಯಲ್ಲಿ‌ಮುಸ್ಲಿಮರು ಎರಡನೇ ದರ್ಜೆ ಪ್ರಜೆಯಾಗಿರಬೇಕು ಎಂಬ ವಾದ ಅವರದ್ದಾಗಿದೆ ಈ ನಿಲುವಿನ ವಿರುದ್ದದ ನಮ್ಮ ಪ್ರತಿಭಟನೆಯಾಗಿದೆ.ಮತಾಂತರದ ಹಕ್ಕು ನಮಗೆ ಸಂವಿಧಾನ ಕೊಟ್ಟಿದೆ. ಇದು ಯಾರೂ ಕೊಟ್ಟಿದ್ದಲ್ಲ.‌ಬ್ರಾಹ್ಮಣ್ಯದಿಂದ ನಾನು ಪ್ರಜಾಪ್ರಭುತ್ವವಾದಕ್ಕೆ, ಸಂವಿಧಾನಿಕ ಮೌಲ್ಯದೆಡೆಗೆ ಮತಾಂತರಗೊಂಡಿದ್ದೇನೆ ಎಂದರು.

ಕ್ರೈಸ್ತರು ಇಲ್ಲಿನ ಶೋಷಿತರಿಗೆ ಸಾಮಾಜಿಕ ಭದ್ರತೆ, ಶಿಕ್ಷಣ ನೀಡಿದಾಗ ಸ್ವ ಇಚ್ಛೆಯಿಂದ ಮತಾಂತರಗೊಂಡರು. ಅವರು ಯಾರನ್ನೂ ಬಲವಂತವಾಗಿ ಮತಾಂತರಗೊಳಿಸಿಲ್ಲ. ಹಾಗೆ ಒಂದು ವೇಳೆ ಆಗಿದ್ದರೆ‌ ಇಲ್ಲಿ ಅವರ ಜನಸಂಖ್ಯೆ ಹೆಚ್ಚಾಗಿರಬೇಕಿತ್ತು‌ ಎಂದು ಹೇಳಿದರು.

ನಂತರ ಮಾತನಾಡಿದ ಅಲ್ಪಸಂಖ್ಯಾತ ವೇದಿಕೆಯ ಅಧ್ಯಕ್ಷರಾದ ಚಾರ್ಲ್ಸ್ ಅಂಬ್ಲೇರ್, “ಈಗಿನ ಕೇಂದ್ರ ಸರಕಾರದಿಂದ ಅಲ್ಪಸಂಖ್ಯಾತರಿಗೆ ಸಮಸ್ಯೆಯಾಗುತ್ತಿದೆ. ಕ್ರೈಸ್ತ ಸಂಸ್ಥೆಗಳ ಮೇಲೆ ಮತಾಂತರದ ಸುಳ್ಳು ಆರೋಪ ಮಾಡಲಾಗುತ್ತಿದೆ.
ಇಬ್ಬರು ಕ್ರೈಸ್ತ ಭಗಿನಿಯರನ್ನು ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಿ ಅವರನ್ನು ಬಂಧಿಸಲಾಯಿತು. ಬಜರಂಗದಳದ ಕಾರ್ಯಕರ್ತರು ಸುಳ್ಳಾರೋಪ ಹೊರಿಸಿ ಸಮಸ್ಯೆ ಸೃಷ್ಟಿಸಿದರು ಎಂದರು.

ಸರಕಾರದ ವತಿಯಿಂದ ಸಮಸ್ಯೆಗಳು ಸೃಷ್ಟಿಯಾಗಿದೆ. ಸಂವಿಧಾನವನ್ನು ಬದಿಗಿಟ್ಟು ಈ ಕೃತ್ಯಗಳನ್ನು ಎಸಗಲಾಗುತ್ತಿದೆ. ಈ ಸರ್ಕಾರ ಯಾವುದೇ ಸಾಧನೆಗೈದಿಲ್ಲ. ಕೇವಲ ಕೋಮುವಾದ ಹರಡುತ್ತಿದೆ ಎಂದು ಅಭಿಪ್ರಾಯ ಪಟ್ಟರು.

ಸಾಲಿಡಾರಿಟಿಯ ಜಿಲ್ಲಾ ಸಮಿತಿ ಸದಸ್ಯ ನಿಹಾಲ್ ಕಿದಿಯೂರು‌ ಮಾತನಾಡಿ, ” ಈ ದೇಶದ ಕಾನೂನನ್ನು ಸಾಂಸ್ಥಿಕವಾಗಿ ಹತ್ಯೆ ಮಾಡುವ ಪ್ರಕ್ರಿಯೆಗಳು ನಡೆಯುತ್ತಿದೆ. ಈ ಮುಂಚೆ ಸಾಮಾನ್ಯ ದುಷ್ಕರ್ಮಿಗಳು ಕಾನೂನಿಗೆ ವಿರುದ್ಧವಾಗಿ ವರ್ತಿಸುತ್ತಿದ್ದರು. ಇದೀಗ ಇಡಿ, ಸಿಬಿಐಗಳನ್ನು ಬಳಸಿ ದಬ್ಬಾಳಿಕೆ ನಡೆಸಲಾಗುತ್ತಿದೆ” ಎಂದರು.

“ಇಂದು ಪ್ರತಿಭಟನೆಗಳನ್ನು ನಿರ್ಬಂಧಿಸುವ ಕೆಲಸ ನಡೆಯುತ್ತಿದೆ. ಆದರೆ ನಾವು ನ್ಯಾಯಕ್ಕಾಗಿ, ಸಂವಿಧಾನ ಬದ್ಧ ಹಕ್ಕಿಗಾಗಿ ಮರ್ದಿತರ ಪರ ದನಿಯೆತ್ತುವವರಾಗಬೇಕೆಂದು” ಹೇಳಿದರು.

ಪ್ರತಿಭಟನೆಯನ್ನುದ್ದೇಶಿಸಿ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಸುಂದರ್ ಮಾಸ್ತರ್ ಮಾತನಾಡಿದರು.

ಈ ಸಂದರ್ಭದಲ್ಲಿ ಸಾಲಿಡಾರಿಟಿ ಉಡುಪಿ ಜಿಲ್ಲಾಧ್ಯಕ್ಷರಾದ ಅಫ್ವಾನ್ ಬಿ ಹೂಡೆ, ನಿಸಾರ್ ಉಡುಪಿ, ಇದ್ರಿಸ್ ಹೂಡೆ, ಅಬ್ದುಲ್ ಕಾದೀರ್ ಮೊಯ್ದಿನ್, ಜಮಿಲಾ ಸದಿದಾ, ಗೌಹರ್ ಹೂಡೆ, ಆಯಾನ್ ಹೂಡೆ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು. ಶುಐಬ್ ಮಲ್ಪೆ ನಿರೂಪಿಸಿ ಧನ್ಯವಾದವಿತ್ತರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ವಿದ್ಯುತ್ ಬಿಲ್ ಬಾಕಿ: ಅಂಬೇಡ್ಕರ್ ವಸತಿ ನಿಲಯದ ವಿದ್ಯುತ್ ಸಂಪರ್ಕ ಕಡಿತ

ರಾಯಚೂರು ನಗರದ ಮಂತ್ರಾಲಯ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ.ಆರ್....

ಉಡುಪಿ | ಗೃಹಜ್ಯೋತಿ ದಾಖಲೆ ಮರುಪರಿಶೀಲನೆಗೆ ಅ.31ರವರೆಗೆ ಕಾಲಾವಕಾಶ ವಿಸ್ತರಣೆ: ರಮೇಶ್ ಕಾಂಚನ್

ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ದಾಖಲೆಗಳ ಮರುಪರಿಶೀಲನಾ ಪ್ರಕ್ರಿಯೆಯ ಅವಧಿಯನ್ನು ಅಕ್ಟೋಬರ್ 31ರವರೆಗೆ...

ಉಡುಪಿ | ನೆಟ್‌ವರ್ಕ್ ಸಮಸ್ಯೆ ಬಗೆಹರಿಸಿ, ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡಿ: ಕೋಟ ಶ್ರೀನಿವಾಸ ಪೂಜಾರಿ

ಬಿ.ಎಸ್.ಎನ್.ಎಲ್. ಸಂಸ್ಥೆಯು ನೆಟ್‌ವರ್ಕ್ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಿ, ಖಾಸಗಿ ಟೆಲಿಕಾಂ ಕಂಪನಿಗಳಿಗೆ...