ಸೊರಬ ತಾಲ್ಲೂಕಿನ ಓಟೂರು ಗ್ರಾಮದಲ್ಲಿ ಗುರುವಾರ ಕೋಣ ತಿವಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಗ್ರಾಮದ ಮಂಚಪ್ಪ (60)ಸಾವಿಗೀಡಾದವರು.
ಸಾಕಿದ್ದ ಕೋಣವನ್ನು ಮೇಯಿಸಲು ಹೊಲಕ್ಕೆ ಹೋಗಿದ್ದಾಗ ಅದು ತಿವಿದಿದ್ದು, ಮಂಚಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೋಣವನ್ನು ಅವರು ಬುಧವಾರ ಮಾರಾಟ ಮಾಡಿದ್ದರು.
ಖರೀದಿದಾರರು ಹಣ ನೀಡಿರಲಿಲ್ಲ. ಹೀಗಾಗಿ ಗುರುವಾರ ಮೇಯಿಸಲು ಹೊಲಕ್ಕೆ ಹೋಗಿದ್ದರು. ಆಗ ಕೋಣ ತಿವಿದಿದೆ. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ ಎಂಬ ಮಾಹಿತಿಯಾಗಿದೆ.