ಮೈಸೂರು ಕಿರುರಂಗಮಂದಿರದಲ್ಲಿ ‘ಕರ್ವಾಲೊ–50 : ತೇಜಸ್ವಿ ಮತ್ತು ಪರಿಸರ‘ ವಿಶೇಷ ಕಾರ್ಯಕ್ರಮ ನಡೆಯಿತು. ಅಭಿರುಚಿ ಪ್ರಕಾಶನ, ಮೈಸೂರು ಪುಸ್ತಕ ಪ್ರಕಾಶನ ಹಾಗೂ ಮೈಸೂರು ಅಮಲು ಅವರ ಸಹಯೋಗದಲ್ಲಿ, ಪ್ರಗತಿಪರ ಸಂಘಟನೆಗಳ ಒಕ್ಕೂಟ, ಮಾನವ ಮಂಟಪ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ದಲಿತ ಸಂಘರ್ಷ ಸಮಿತಿ ಮತ್ತು ನಿರಂತರ ಫೌಂಡೇಷನ್ ಸಂಯುಕ್ತವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಬೆಳಿಗ್ಗೆ 10 ಗಂಟೆಗೆ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಜೀವನ ಮತ್ತು ಚಿಂತನೆಗಳ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನದೊಂದಿಗೆ ಕಾರ್ಯಕ್ರಮ ಆರಂಭವಾಯಿತು.

ಕಾರ್ಯಕ್ರಮದ ಉದ್ಘಾಟನೆ ಮತ್ತು ಆಶಯ ನುಡಿಯನ್ನು ಖ್ಯಾತ ವಿಮರ್ಶಕರು ಮತ್ತು ಬರಹಗಾರರಾದ ಪ್ರೊ. ರಾಜೇಂದ್ರ ಚೆನ್ನಿ (ಶಿವಮೊಗ್ಗ) ಅವರು ನಿರ್ವಹಿಸಿ, ತೇಜಸ್ವಿಯ ಸಾಹಿತ್ಯ, ಪರಿಸರ ಚಿಂತನೆ ಮತ್ತು ಅವರ ಜೀವನ ತತ್ವಗಳ ಬಗ್ಗೆ ಮನದಟ್ಟು ಮಾಡಿಕೊಟ್ಟರು.
ಕುಪ್ಪಳ್ಳಿಯ ಕುವೆಂಪು ಪ್ರತಿಷ್ಠಾನ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಅವರು ‘ಕೃಷಿ, ಹೋರಾಟ, ಛಾಯಾಗ್ರಾಹಣ ಮತ್ತು ಪರಿಸರ’ ಎಂಬ ವಿಷಯವಾಗಿ ತೇಜಸ್ವಿಯ ಜೀವನದ ವಿವಿಧ ಆಯಾಮಗಳನ್ನು ಚರ್ಚಿಸಿದರು.
ಕೃಷಿಕರಾದ ಮಳವಳ್ಳಿಯ ಎಂ. ವಿ. ಕೃಷ್ಣ ಅವರು ‘ತೇಜಸ್ವಿ ಅವರ ಒಡನಾಟ’ ಕುರಿತು ತಮ್ಮ ಆತ್ಮೀಯ ಅನುಭವಗಳನ್ನು ಹಂಚಿಕೊಂಡರು. ಈ ಕಾರ್ಯಕ್ರಮವನ್ನು ರಾಘವೇಂದ್ರ ಪುಸ್ತಕ ಮುದ್ರಣಾಲಯ, ಮೂಡಿಗೆರೆ ಸಹಭಾಗಿತ್ವದಲ್ಲಿ ಯಶಸ್ವಿಯಾಗಿ ನೆರವೇರಿಸಲಾಯಿತು.

‘ಕರ್ವಾಲೊ–50’ ಕಾರ್ಯಕ್ರಮದ ಅಂಗವಾಗಿ ತೇಜಸ್ವಿ ಅವರ ಪರಿಸರ ಚಿಂತನೆ, ರೈತ ಹೋರಾಟ, ಹಾಗೂ ಅವರ ಸೃಜನಶೀಲತೆ ಕುರಿತಾದ ಚರ್ಚೆಗಳು ಭಾಗವಹಿಸಿದ ಎಲ್ಲರಿಗೂ ಪ್ರೇರಣಾದಾಯಕವಾಗಿತ್ತು.
ಈ ಸುದ್ದಿ ಓದಿದ್ದೀರಾ? ಮೈಸೂರು | ನಂಜನಗೂಡು ತಹಶೀಲ್ದಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ
ಕಾರ್ಯಕ್ರಮದಲ್ಲಿ ವಿಮರ್ಶಕರು ಹಾಗೂ ಬರಹಗಾರರಾದ ಪ್ರೊ. ರಾಜೇಂದ್ರ ಚಿನ್ನಿ, ರಾಘವೇಂದ್ರ, ವನ್ಯಜೀವಿ ಛಾಯಾಗ್ರಾಹಕ ಕೃಪಾಕರ ಸೇನಾನಿ, ತೇಜಸ್ವಿ ಒಡನಾಡಿ ಪ್ರೊ. ಬಿ. ಎನ್. ಶ್ರೀರಾಮ ಸೇರಿದಂತೆ ಇನ್ನಿತರರು ಇದ್ದರು.