ಶ್ರೀರಂಗಪಟ್ಟಣ ರೋಟರಿ ಸಂಸ್ಥೆ ಉತ್ತಮವಾದಂತಹ ಸಮಾಜಮುಖಿಯಾಗಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದು, ನಿಮಿಷಾಂಬ ದೇವಸ್ಥಾನದ ಆವರಣದಲ್ಲಿ ಹಾಲುಣಿಸಲು ಪ್ರತ್ಯೇಕ ಶಿಶು ಸ್ತನ್ಯಪಾನ ಕೇಂದ್ರದ ವ್ಯವಸ್ಥೆ ಮಾಡಿರುವುದು ತುಂಬಾ ಸಂತೋಷವಾಗಿದೆ ಎಂದು ಪುರಸಭೆಯ ಅಧ್ಯಕ್ಷ ದಿನೇಶ್ ಶ್ಲಾಘಿಸಿದರು.
ಶಿಶು ಸ್ತನ್ಯಪಾನ ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ರೋಟರಿ ಸಂಸ್ಥೆ ಅಧ್ಯಕ್ಷ ಡಾ. ರಾಘವೇಂದ್ರ ಮಾತನಾಡಿ, “ನಿಮಿಷಾಂಬ ದೇವಸ್ಥಾನಕೆ ಚಿಕ್ಕ ಮಕ್ಕಳನ್ನು ಕರೆದುಕೊಂಡು ಬರುವ ತಾಯಂದಿರು ಯಾವುದೇ ಮುಜುಗರವಿಲ್ಲದೆ ಹಾಲುಣಿಸುವ ಮೂಲಕ ತಮ್ಮ ಮಗುವಿನ ಹಸಿವನ್ನು ನೀಗಿಸಬಹುದೆಂಬ ಉದ್ದೇಶದಿಂದ ಪ್ರತ್ಯೇಕ ಶಿಶು ಸ್ತನ್ಯಪಾನ ಕೇಂದ್ರದ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ತಾಯಿಂದರು ಇದನ್ನು ಸಪರ್ಪಕವಾಗಿ ಬಳಸಿಕೊಳ್ಳಬೇಕು” ಎಂದು ವಿನಂತಿಸಿದರು.
ಈ ಸುದ್ದಿ ಓದಿದ್ದೀರಾ? ಗೋಲ್ಡ್ ಬುಕ್ ಆಫ್ ರೆಕಾರ್ಡ್ ದಾಖಲಾಗಲು ಸತತ 228 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶಿಸಲಿರುವ ಹಾಸನಿ
ನಿಮಿಷಾಂಬ ದೇವಸ್ಥಾನದ ಅಧ್ಯಕ್ಷರು ಹಾಗೂ ಪುರಸಭೆ ಸದಸ್ಯರಾದ ದಯಾನಂದ್, ಆಡಳಿತ ಮಂಡಳಿಯ ನಿರ್ದೇಶಕರು ಸದಸ್ಯರುಗಳು, ದೇವಸ್ಥಾನದ ಪ್ರಧಾನ ಅರ್ಚಕ ಸೂರ್ಯನಾರಾಯಣ, ರೋಟರಿ ಕ್ಲಬ್ ಕಾರ್ಯದರ್ಶಿ ನಾಗೇಂದ್ರ, ರಮೇಶ್, ರಘು, ವಿನಯ್ ಸೇರಿದಂತೆ ಇತರರು ಇದ್ದರು.