ತೀರ್ಥಹಳ್ಳಿ, ಶಾಲಾ ಕಟ್ಟಡ ಕುಸಿಯುತ್ತಿರುವ ಬಗ್ಗೆ,ತೀರ್ಥಹಳ್ಳಿ ತಾಲೂಕಿನ ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ತೆಮ್ಮಮನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ತಮ್ಮೆಮನೆಯಲ್ಲಿ 2025-26 ವೇ ಸಾಲಿನಲ್ಲಿ 1 ರಿಂದ 7 ನೇ ತರಗತಿಯ ವರೆಗೆ 30 ಮಕ್ಕಳು ವ್ಯಾಸಂಗ ಮಾಡುತ್ತಿದ್ದು ಇಲ್ಲಿ ಒಟ್ಟು 9 ತರಗತಿ 2000ನೆ ಇಸವಿಯಲ್ಲಿ (25 ವರ್ಷದ) ಹಳೆ ಕೋಣೆಗಳಿದ್ದು,
ಈ ಕಟ್ಟಡವು KPTCL ವತಿಯಿಂದ ನಿರ್ಮಾಣಗೊಂಡಿದ್ದು ಕಟ್ಟಡದ ಎಲ್ಲಾ ತರಗತಿ ಕೋಣೆಗಳ ಹಾಗೂ ಕಾರಿಡರ್ ನೆಲಹಾಸು ಕಿತ್ತು ಹೋಗಿದ್ದು, ಮೇಲ್ಮಾವಣಿ ಕುಸಿದು ಬೀಳುತ್ತಿದ್ದು ಕಟ್ಟಡದ ಗಾರೆ ತುಂಡುಗಳು ಮಕ್ಕಳ ಮೇಲೆ ಬೀಳುವ ಅಪಾಯದಲ್ಲಿದ್ದು ಎಲ್ಲಾ ಪೋಷಕರು ಮಕ್ಕಳ ವರ್ಗಾವಣೆ ಪತ್ರಕಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ.

ಈ ಕಾರಣದಿಂದಾಗಿ ಶಾಲೆ ಮುಚ್ಚುವ ಸಾಧ್ಯತೆ ಇದೆ. ಈ ಶಾಲೆಯು ಬಡ ವಿದ್ಯಾರ್ಥಿಗಳು ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಶಾಲೆಯಾಗಿದ್ದು ಬೇರೆ ಶಾಲೆಗೆ ಹೋಗಲು 7ಕಿ.ಮೀಗಳ ಅಂತರವಿರುತ್ತದೆ ಎಂದು ತಿಳಿಸಿದ್ದಾರೆ.
ಆದ್ದರಿಂದ ಶೇಘ್ರವೇ ಸಮಸ್ಯೆಯನ್ನು ಬಗೆಹರಿಸಿಕೊಡಬೇಕಾಗಿ ಈ ಮೂಲಕ ಶಿಕ್ಷಣ ಸಚಿವರಿಗೆ ಮನವಿ ಪತ್ರವನ್ನು ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಎಸ್ ಡಿ ಎಂ ಸಿ ಸದಸ್ಯರುಗಳು ತೀರ್ಥಹಳ್ಳಿ ಕಾಂಗ್ರೆಸ್ ಮುಖಂಡರಾದ ಆದರ್ಶ್ ಹುಂಚದಕಟ್ಟೆ ಅವರ ಮೂಲಕ ತಿಳಿಸಿರುತ್ತಾರೆ.
Nimali Stringer recruitment ideya, idre heli