ಗುಬ್ಬಿ ವೀರಣ್ಣ ಅವರ ಪರಂಪರೆ ಉಳಿಸಿ ಬೆಳೆಸಲು ಟ್ರಸ್ಟ್ ಬದ್ದ : ಬಿ.ಜಯಶ್ರೀ

Date:

ರಂಗಭೂಮಿ ಚಟುವಟಿಕೆಯನ್ನು ನಿರಂತರ ನಡೆಸಿ ನಾಟಕ ಕಂಪನಿ ಶತಮಾನ ಕಾಲ ಬೆಳೆಸಿದ ಡಾ.ಗುಬ್ಬಿ ವೀರಣ್ಣ ಅವರ ರಂಗ ಪರಂಪರೆಯನ್ನು ಉಳಿಸಿ ಬೆಳೆಸಲು ಪ್ರಾರಂಭವಾಗಿರುವ ಡಾ.ಗುಬ್ಬಿ ವೀರಣ್ಣ ಟ್ರಸ್ಟ್ ಕಳೆದ 12 ವರ್ಷಗಳಿಂದ ನಿರಂತರವಾಗಿ ನಾಟಕೋತ್ಸವ ಮಕ್ಕಳ ಬೇಸಿಗೆ ಶಿಬಿರ ಹಾಗೂ ರಂಗಗೀತೆಗಳಂತಹ ಕಾರ್ಯಕ್ರಮಗಳನ್ನು ಮಾಡುತ್ತಾ ರಂಗಕಲೆ ಉಳಿಸಲು ಬದ್ಧವಾಗಿದೆ ಎಂದು ಟ್ರಸ್ಟ್ ನ ಅಧ್ಯಕ್ಷ ರಾದ ಬಿ.ಜಯಶ್ರೀ ತಿಳಿಸಿದರು

- Advertisement -

 ಪಟ್ಟಣದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಟ್ರಸ್ಟ್ ಆಯೋಜಿಸಿದ್ದ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು ಗುಬ್ಬಿ ಪಟ್ಟಣದಲ್ಲಿ ಸಾಂಸ್ಕೃತಿಕ ಮನಸ್ಥಿತಿ ಕಡಿಮೆಯಾಗಿದ್ದು ಜನ ಹೆಚ್ಚು ಹೆಚ್ಚು ಟಿವಿ ಹಾಗೂ ಮೊಬೈಲ್ ಗಳಿಗೆ ಮಾರುಹೋಗುತ್ತಿದ್ದು ಇದು ಆತಂಕದ ವಿಷಯ ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ನಮ್ಮ ಸಂಸ್ಕೃತಿ ಪರಂಪರೆಯನ್ನು ಉಳಿಸುವ ಏಕೈಕ ಮಾಧ್ಯಮವೆಂದರೆ ಅದು ರಂಗಭೂಮಿ. ರಂಗ ಸಜ್ಜಿಕೆ ಕಲಾವಿದನ ಜೀವಾಳ. ಕಲಾವಿದರಲ್ಲಿ ಸದಾ ಇರುವ ಜೀವಂತ ಕಲೆಯನ್ನು ಪ್ರೋತ್ಸಾಹಿಸುವ ಕಾರ್ಯ ರಂಗಾಸಕ್ತರಿಂದ ಆಗಬೇಕು ಎಂದು ತಿಳಿಸಿದರು.

ಟ್ರಸ್ಟ್ ಹಿರಿಯ ಸದಸ್ಯ ಎಚ್.ಎಂ.ರಂಗಯ್ಯ ಮಾತನಾಡಿ ಗುಬ್ಬಿ ವೀರಣ್ಣನವರು ಹುಟ್ಟಿದ ಈ ಮಾಸದಲ್ಲಿ ನಾಟಕೋತ್ಸವವ ನಡೆಯುತ್ತಿರುವುದು. ಜೊತೆಗೆ ಅವರ ಹುಟ್ಟೂರು ಗುಬ್ಬಿಯಲ್ಲೇ ನಡೆಯುತ್ತಿರುವುದು ರಂಗ ಕಲಾವಿದರಿಗೆ ಹೆಮ್ಮೆಯ ವಿಷಯ. ಆದರೆ ಪ್ರೇಕ್ಷಕರ ಕೊರತೆ ಸ್ವಲ್ಪ ಸುದಾರಿಸಬೇಕಾಗಿದೆ. ಸಿನಿಮಾ ಮೊಬೈಲ್ ಹಾವಳಿಗೆ ರಂಗಭೂಮಿಯತ್ತ ಪ್ರೇಕ್ಷಕರು ಬರುತ್ತಿಲ್ಲ. ಸಮಾಜದ ಆಗು ಹೋಗುಗಳ ಚಿತ್ರಣ ಬಿಚ್ಚಿಡುವ ರಂಗಕಲೆಗೆ ಸಮುದಾಯದ ಪ್ರೋತ್ಸಾಹ ಹೆಚ್ಚು ಹೆಚ್ಚು ಸಿಗಬೇಕು ಎಂದು ತಿಳಿಸಿದರು.

ನಾಟಕೋತ್ಸವ ಸಂಚಾಲಕ ರಾಜೇಶ್ ಗುಬ್ಬಿ ಮಾತನಾಡಿ ಮೊದಲನೇ ದಿನ ಸ್ಪಂದನ ಕಲಾ ತಂಡ ಬೆಂಗಳೂರು ಇವರಿಂದ ರಂಗ ಗೀತೆಗಳ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೂರು ದಿನಗಳ ಕಾಲ ನಟನ, ಸಂಚಯ ಹಾಗೂ ಮಂಗಳೂರು ಕಲಾವಿದರಿಂದ ನಾಟಕ ಪ್ರದರ್ಶನ ಸಂಜೆ 7 ಗಂಟೆ ಯಿಂದ ಪ್ರಾರಂಭವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಗುಬ್ಬಿ ಎಚ್ಎಎಲ್ ನ ಅಧಿಕಾರಿಗಳು ಸಿಬ್ಬಂದಿ ಹಾಗೂ ಅಲ್ಲಿನ ಕಲಾ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ನೆಟ್‌ವರ್ಕ್ ಸಮಸ್ಯೆ ಬಗೆಹರಿಸಿ, ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡಿ: ಕೋಟ ಶ್ರೀನಿವಾಸ ಪೂಜಾರಿ

ಬಿ.ಎಸ್.ಎನ್.ಎಲ್. ಸಂಸ್ಥೆಯು ನೆಟ್‌ವರ್ಕ್ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಿ, ಖಾಸಗಿ ಟೆಲಿಕಾಂ ಕಂಪನಿಗಳಿಗೆ...

ಕಾರವಾರ | ಅಕ್ಟೋಬರ್ 16ರಂದು ಹಾರವಾಡದಿಂದ ಮಾಜಾಳಿವರೆಗೆ ಮೀನುಗಾರಿಕೆಗೆ ನಿರ್ಬಂಧ

ಕಾರವಾರ: ಗೌರವಾನ್ವಿತ ಉಪರಾಷ್ಟ್ರಪತಿ ಹಾಗೂ ರಾಜ್ಯಪಾಲರು ಅಕ್ಟೋಬರ್ 16ರಂದು ಉತ್ತರ ಕನ್ನಡ...

ಕೋಲಾರ | 108 ಆಂಬ್ಯುಲೆನ್ಸ್ ನೌಕರರ ನ್ಯಾಯಯುತ ಬೇಡಿಕೆ ಈಡೇರಿಸಿ: ಕೆ.ನಾರಾಯಣಗೌಡ

ಅಪತ್ಬಾಂಧವರೆಂದೇ ಕರೆಯಲಾಗುವ 108 ಆಂಬ್ಯುಲೆನ್ಸ್ ನೌಕರರ ವಿವಿಧ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ...