ತುಮಕೂರು | ರಾಜ್ಯದಲ್ಲಿ ಯುವಜನ ಆಯೋಗ ರಚನೆಯಾಗಬೇಕು : ಸಾಹಿತಿ ಜನಾರ್ದನ್ ಕೆಸರಗದ್ದೆ

Date:

ಯುವಜನರು ತಮ್ಮ ಅಭಿಪ್ರಾಯಗಳನ್ನು ಹೇಳುವುದು ಬಹಳ ಮುಖ್ಯವಾಗಿದೆ, ಅದು ಸರಿಯಿರಲಿ ಅಥವಾ ತಪ್ಪಾಗಲಿ ಮಾತನಾಡುವುದು ಇಂದಿನ ಅಗತ್ಯವಾಗಿದೆ. ರಾಜ್ಯದಲ್ಲಿ ಯುವಜನ ಆಯೋಗ ರಚನೆಯಾಗಬೇಕು ಎಂದು ಸಾಹಿತಿ ಜನಾರ್ದನ್ ಕೆಸರಗದ್ದೆ ಒತ್ತಾಯಿಸಿದರು

- Advertisement -

ತುಮಕೂರು ವಿವಿಯ ಸರ್.ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಮತ್ತು ತುಮಕೂರು ವಿಶ್ವವಿದ್ಯಾಲಯದ ವಿಜ್ಞಾನ ಕಾಲೇಜೀನ ಕನ್ನಡ ವಿಭಾಗದ  ಸಂಯುಕ್ತಾಶ್ರಯದಲ್ಲಿ ಮನ-ಮನೆಗೂ ಸಂವಿಧಾನ  ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಸಾಂಸ್ಕೃತಿಕ ಆಯಾಮದಲ್ಲಿ ಯುವಜನರು ಸಂಘಟಿತರಾಗಬೇಕು, ಸ್ವಾತಂತ್ರ್ಯದ ಮಹತ್ವ ಅರಿವಾದಾಗ ಮಾತ್ರ ನಾವು ದೇಶದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಾಣಲು ಸಾಧ್ಯವಾಗುತ್ತದೆ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರೊ. ಪ್ರಕಾಶ್ ಎಂ ಸೇಟ್, ರವರು ಇಂದು ಸಂವಿಧಾನ ಜಾರಿಯಾಗಿದ್ದರು ಕೊಳಗೇರಿಗಳಿರುವುದು ಮತ್ತು ಬಡತನವಿರುವುದು ವಿಪಯರ್ಾಸ ತಳಹಂತದಲ್ಲಿರುವ ಸಮುದಾಯಗಳಿಗೆ ಇನ್ನೂ ಸಂವಿಧಾನದ ಹಕ್ಕುಗಳು ದಕ್ಕಬೇಕಿದೆ, ಮನೆ-ಮನೆಗೂ ಸಂವಿಧಾನ ತಲುಪಿಸಿದ್ದರು, ದೇಶದ ನಾಗರೀಕರ ಮನಸ್ಸುಗಳಿಗೆ ಸಂವಿಧಾನ ತಲುಪಿಲ್ಲ ಇಂತಹ ಕೆಲಸವನ್ನು ಈ ಸಂಘಟನೆಗಳು ಮಾಡುತ್ತಿರುವುದು ಶ್ಲಾಘನೀಯ ಎಂದರು

1002407457

ದೇಶ ಕಟ್ಟುವ ಕ್ರಮವೇ ಸಂವಿಧಾನ ಭಾರತವನ್ನು ಮುಂದೆ ಹೇಗೆ ಕಟ್ಟಬೇಕೆಂದು ಇಂದಿನ ಯುವಜನರು ಕನಸ್ಸು ಕಾಣಬೇಕು.ಹವಮಾನ ಬದಲಾವಣೆ, ಸಾಮಾಜಿಕ ನ್ಯಾಯದಂತಹ ವಿಷಯಗಳು ನಿರುದ್ಯೋಗ, ಮೌಲ್ಯಯುತ ಸಮಾನ ಶಿಕ್ಷಣದ ಬಗ್ಗೆ ಜನರೇಶನ್ ಜಡ್ ಕನಸ್ಸು ಕಾಣಬೇಕು ಇಂದು ಜಗತ್ತಿನಲ್ಲಿ ಯುವಜನರು ಝೆನ್ ಜಡ್ನ ಸಂಘಟಿತರಾಗಿ ತಮ್ಮ ಭವಿಷ್ಯದ ಪ್ರಶ್ನೆಗಳನ್ನು ಪ್ರತಿಪಾಧಿಸುತ್ತಿದ್ದಾರೆ ಇಂದಿನ ಯುವಜನರು ಜಗತ್ತನ್ನು ಮತ್ತು ಭಾರತವನ್ನು ಕಟ್ಟಬೇಕಾಗಿದೆ. ಈ ಮೌಲ್ಯಗಳನ್ನೇ ಸಂವಿಧಾನ ಹೇಳುತ್ತದೆ, ಹಾಗಾಗಿ ಭಾರತದ ಸೌಂದರ್ಯವಿರುವುದು ನಮ್ಮ ಸಂವಿಧಾನದಲ್ಲಿ ಎಂದು ಪ್ರತಿಪಾದಿಸಿದರು.

ಡಾ.ವೆಂಕಟ ರೆಡ್ಡಿ ರಾಮರೆಡ್ಡಿ ಮಾತನಾಡಿ ಎಚ್ಚರ ಮತ್ತು ಅರಿವನ್ನು ಸಂವಿಧಾನ ಹೇಳುತ್ತದೆ, ನಾವು ಸಂವಿಧಾನ ಹೇಳಿದಂತೆ ಬದುಕಬೇಕು ಅದರಂತೆ ನಡೆಯಬೇಕು, ಸಂವಿಧಾನ ಹೇಳುವ ಸರ್ವಧರ್ಮವನ್ನು ಗೌರವಿಸಬೇಕು ಹಾಗಾದರೇ ಮಾತ್ರ ಜಾತ್ಯಾತೀರಾಗುತ್ತೇವೆ. ಸಂವಿಧಾನದ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಪಾಲಿಸಬೇಕು. ಅಂದಾಗ ಮಾತ್ರ ಉತ್ತಮ ನಾಗರೀಕರಾಗಲು ಸಾಧ್ಯವಾಗುತ್ತದೆ ಎಂದರು. 

1002407458

 ಡಾ.ನಾಗಭೂಷಣ್ ಬಗ್ಗನಡು ಮಾತನಾಡಿ ಸಂವಿಧಾನದ ಅಡಿಯಲ್ಲಿ ನಾವು ಬದುಕುತ್ತಿದ್ದೇವೆ. ಭಾರತವೆಂದರೇ ಭೂಪಟವಲ್ಲ 325 ಭಾಷೆಗಳು, 4328 ಜನಸಮುದಾಯಗಳು, ಹಲವಾರು ಧರ್ಮಗಳು, ಹಾಗೂ 3600 ಜಾತಿಗಳನ್ನು ಹೊಂದಿರುವ ಬಹುತ್ವದ ವಿಭಿನ್ನ ಸಂಸ್ಕೃತಿ ಆಚಾರ ವಿಚಾರಗಳನ್ನು ಹೊಂದಿರುವ ದೇಶವಾಗಿದೆ ಭಾರತದಲ್ಲಿ ಶ್ರೇಣಿಕರಣ ವ್ಯವಸ್ಥೆಯಿದ್ದರೂ ಬಹುತ್ವದ ವಿಭಿನ್ನ ಸಂಸ್ಕೃತಿಯಲ್ಲಿ ಬದುಕುತ್ತಿದ್ದೇವೆ. ಸ್ವಾತಂತ್ರ್ಯ ಪೂರ್ವದಲ್ಲಿ ಹಲವಾರು ದೇಶಗಳಿಂದ ಬಂದಂತಹ ಆರ್ಯರು ಪರ್ಷಿಯನ್ನರು, ಮಂಗೋಲಿಯನ್ನರು, ಬ್ರಿಟಿಷರು ಭಾರತವನ್ನು ಆಳ್ವಿಕೆ ಮಾಡಿದರು, ಇದಕ್ಕೂ ಮುಂಚೆ ಸಾವಿರಾರು ವರ್ಷಗಳಿಂದ ಅಲಿಖಿತವಾದ ಮನುಸ್ಮೃತಿ ನಮ್ಮ ಸಮಾಜದ ಸಂವಿಧಾನವಾಗಿತ್ತು ಸ್ವಾತಂತ್ರ್ಯ ನಂತರದಲ್ಲಿ ನಾವು ಸಂವಿಧಾನ ರಚನೆ ಮಾಡಿ ಅದರಡಿಯಲ್ಲಿ ನಾವು ಜೀವಿಸುತ್ತಿದ್ದೇವೆ, ಈ ಕಾಲಘಟ್ಟದಲ್ಲಿ ಹಲವಾರು ಬದಲಾವಣೆಗಳಾಗಿದ್ದು ಭಾರತ ಮಾತನಾಡಬೇಕಾದರೆ ಯುವಜನರು ಪ್ರಶ್ನೆ ಮಾಡಬೇಕಿದೆ ಎಂದರು. 

ಅಧ್ಯಕ್ಷತೆಯನ್ನು ತುಮಕೂರು ಸ್ಲಂ ಸಮಿತಿಯ ಎ.ನರಸಿಂಹಮೂರ್ತಿ ವಹಿಸಿದ್ದರು, ವೇದಿಕೆಯಲ್ಲಿ ಸಂವಿಧಾನ ಸ್ನೇಹಿ ಬಳಗದ ಪೂರ್ಣರವಿಶಂಕರ್, ಅಶ್ವಿನಿಬೋದ್ ಉಪಸ್ಥಿತರಿದ್ದರು, ಅರುಣ್ ಮತ್ತು ತಂಡದವರಿಂದ ಸಂವಿಧಾನ ಗೀತೆಗಳನ್ನು ಹಾಡಲಾಯಿತು, 

ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ಮೇಘನ, ವಿನೀತ್ ಕುಮಾರ್, ಶಿವಕುಮಾರ್, ನಡೆಸಿಕೊಟ್ಟರು,

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಾರ್ಮಿಕರು ಹಕ್ಕು ಮತ್ತು ಸೌಲಭ್ಯಗಳಿಂದ ವಂಚಿತರಾಗದಂತೆ ನೋಡಿಕೊಳ್ಳಿ: ಟಿ.ಎಂ. ಶಾಹಿದ್ ತೆಕ್ಕಿಲ್

ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುವುದರೊಂದಿಗೆ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ...

ಬಾಗೇಪಲ್ಲಿಯಲ್ಲಿ ರಸ್ತೆ ಅಪಘಾತ:ರೈತ ನಂಜಪ್ಪ ಸಾವು

ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ದ್ವಿಚಕ್ರ ವಾಹನದಲ್ಲಿ ಹೊಲಕ್ಕೆ ತೆರಳುತ್ತಿದ್ದ ನಡಂಪಲ್ಲಿ...

ಮಂಗಳೂರು | ಕೊಳ್ತಮಜಲು ರಹ್ಮಾನ್ ಹತ್ಯೆ ಪ್ರಕರಣ: ಆರೋಪಿಗಳ ಜಾಮೀನು ರದ್ದುಪಡಿಸಿದ ಸುಪ್ರೀಂ ಕೋರ್ಟ್

ಕೊಳ್ತಮಜಲು ರಹ್ಮಾನ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳಿಗೆ ಇತ್ತೀಚೆಗೆ ನ್ಯಾಯಾಲಯ ಜಾಮೀನು ನೀಡಿತ್ತು....

ಕೋಲಾರ | ಚೈನಾ ಶಾಂಘೈನಲ್ಲಿ ಕನ್ನಡದ ಮೊದಲ ಜಾನಪದ ಕಾರ್ಯಕ್ರಮ: ಗೋ.ನಾ. ಸ್ವಾಮಿ ಭಾಗಿ

ಚೈನಾ ದೇಶದ ಶಾಂಘೈನಲ್ಲಿ ಕನ್ನಡಿಗರ ಸಂಘದ ವತಿಯಿಂದ ಆಯೋಜಿಸಿದ್ದ ಕನ್ನಡದ ಮೊದಲ...