ಅಸಮಾನತೆಯನ್ನೇ ತನ್ನ ಆಂತರ್ಯದಲ್ಲಿರಿಸಿಕೊಂಡಿರುವ ಬಿಜೆಪಿ ಮುಖವಾಡ ದಸರಾ ಉದ್ಘಾಟಕರ ಆಯ್ಕೆಯ ವಿಷಯದಲ್ಲಿ ಅನಾವರಣವಾಗಿದೆ ಎಂದು ಕಾಂಗ್ರೆಸ್ ಮುಖಂಡ ಮಂಜುನಾಥ್ ಹೆತ್ತೇನಹಳ್ಳಿ ಹೇಳಿದರು.
ಕನ್ನಡದ ಘಮಲನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಪಸರಿಸಿರುವ ಬಾನು ಮುಷ್ತಾಕ್
ಅವರ ಸಾಧನೆಗೆ ಧಕ್ಕೆ ಬರುವಂತೆ ಬಿಜೆಪಿ ನಡೆದು ಕೊಳ್ಳುತ್ತಿದೆ. ಮಹಿಳೆಯರು ಮತ್ತು ಕನ್ನಡ ನಾಡಿಗೆ ಸೇವೆ ಸಲ್ಲಿಸಿದವರ ಬಗೆಗಿನ ಬಿಜೆಪಿಯ ಕೊಳಕು ಮನಸ್ಥಿತಿ ಈಗ ಅನಾವರಣವಾಗಿದೆ. ಮುಸ್ಲಿಮರನ್ನು ದ್ವೇಷಿಸಲು ಹೋಗಿ ಬಹುಜನರ ಆಹಾರ ಪದ್ಧತಿಯಬಗ್ಗೆ ಅವಹೇಳನ ಮಾಡುತ್ತಿರುವುದು ಖಂಡನೀಯ. ಬಿಜೆಪಿಗೆ ಈಗ ಸ್ಪಷ್ಟನೆ ನೀಡುವ ಸವಾಲೊಂದು ಎದುರಾಗಿದೆ. ಮಹಿಳಾ ವಿರೋಧಿ, ಮಾಂಸಹಾರ ವಿರೋಧಿ ಹೇಳಿಕೆಯನ್ನು ಬಿಜೆಪಿ ನೇರವಾಗಿ ನೀಡುವ ಮೂಲಕ ತಮ್ಮ ನಿಲುವನ್ನು ಸಾಭೀತುಪಡಿಸಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಸರ್ವರಿಗೂ ಘನತೆಯಿಂದ ಬದುಕುವ ಹಕ್ಕು ನೀಡಿರುವ ಸಂವಿಧಾನದ ವಿರೋಧಿ ಹೇಳಿಕೆ ನೀಡಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿಕೆ ಖಂಡನೀಯ. ಅವರ ಸ್ಥಾನಕ್ಕೆ ಘನತೆ ಬರುವಂತೆ ಅವರು ನಡೆದುಕೊಳ್ಳಬೇಕು ಎಂದರು.
ಸಿದ್ದರಾಮಯ್ಯ ನವರ ಆಯ್ಕೆ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದಿದೆ. ಈ ಬಾರಿ ದಸರಾ ಉದ್ಘಾಟಕರನ್ನಾಗಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡುವ ಮೂಲಕ ನಾಡಹಬ್ಬವನ್ನು ಅರ್ಥಪೂರ್ಣ ಹಬ್ಬವನ್ನಾಗಿ ಮಾಡಿದ ಸಿದ್ದರಾಮಯ್ಯನವರಿಗೆ ಅಭಿನಂದನೆಗಳು ಎಂದು ಮಂಜುನಾಥ್ ಹೆತ್ತೇನಹಳ್ಳಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ