ತುಮಕೂರು | ಬಸನಗೌಡ ಪಾಟೀಲ್ ಯತ್ನಾಳ್ ಶಾಸಕ ಸ್ಥಾನ ವಜಾಕ್ಕೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ಒತ್ತಾಯ

Date:

Advertisements

 ತುಮಕೂರು ಪ್ರಗತಿಪರ ಸಂಘಟನೆಗಳಿಂದ ಇತ್ತೀಚೆಗೆ ತುಮಕೂರು ಗಣೇಶ ವಿಸರ್ಜನೆ ಸಂದರ್ಭದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ದಲಿತ ಹಾಗೂ ಅಲ್ಪಸಂಖ್ಯಾತ ಮಹಿಳೆಯರಿಗೆ ಅವಹೇಳಕಾರಿಯಾಗಿ ಅವಮಾನಿಸಿ ಕೋಮು ಸಂಘರ್ಷವನ್ನು ಬಿತ್ತುವ ಪ್ರಚೋಧನಕಾರಿ ಭಾಷಣ ಮಾಡುವ ಮೂಲಕ ತುಮಕೂರು ಸೌಹಾರ್ದತೆಗೆ ದಕ್ಕೆ ತರುವ ಕೆಲಸ ಮಾಡಿದ್ದಾರೆ ಹಾಗೂ 70 ಎಫ್ಐಆರ್ ಆದರು ನನನ್ನು ಕಾನೂನು ಏನು ಮಾಡಕ್ಕಾಗಲ್ಲ ಎಂದು ದುರಂಕಾರದ ನಡೆಯನ್ನು ನಡೆದುಕೊಂಡಿದ್ದು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ವಿಧಾನ ಸಭೆಯ ಸಭಾಪತಿಗಳಿಗೆ ತುಮಕೂರು ಜಿಲ್ಲಾಧಿಕಾರಿಗಳ ಮುಖಾಂತರ ಒತ್ತಾಯಿಸಿಲಾಯಿತು.

ಒಕ್ಕೂಟದ ಭಾಗವಾದ ಸ್ಲಂ ಜನಾಂದೋಲನ ಕರ್ನಾಟಕ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ ಮದ್ದೂರು ಮತ್ತು ತುಮಕೂರು ಗಣೇಶ ವಿಸರ್ಜನಾ ಸಂದರ್ಭದಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ನಾಲಿಗೆಯನ್ನು ಅರಿಬಿಟ್ಟಿದ್ದಾರೆ, ಮೈಸೂರು ದಸರಾ ಉತ್ಸವದ ಉದ್ಘಾಟನೆ ಸಂಬಂಧ ಬಾನುಮುಷ್ತಾಕ್ ಉದ್ಘಾಟಕರಾಗಿ ಆಗಮಿಸುವ ಹಿನ್ನೆಲೆಯಿಂದ ರಾಜ್ಯದ ದಲಿತ ಅಲ್ಪಸಂಖ್ಯಾತ ಮಹಿಳೆಯರು ಪುಷ್ಪ ನಮನ ಸಲ್ಲಿಸಲು ಯಾವ ಅಧಿಕಾವು ಇಲ್ಲವೆಂದು ತುಚ್ಚವಾಗಿ ಮಾತನಾಡಿದ್ದಾರೆ ಸಾಂವಿಧಾನಿಕವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಆಯ್ಕೆಯಾಗಿ ಪ್ರಮಾಣ ವಚನ ಸ್ವೀಕರಿಸಿ ಶಾಸಕ ಸ್ಥಾನ ಗಳಿಸಿದ ಯತ್ನಾಳ್ ಸದಾ ಸಮಾಜದ ಸ್ವಾಸ್ತ್ಯ ಆಳು ಮಾಡುವ ಮತ್ತು ಯುವಜನರಿಗೆ ಕೋಮು ಪ್ರಚೋದನೆ ಬಿತ್ತುವ ಪ್ರೌವೃತ್ತಿ ಬಿಡಬೇಕು, ಸಮಾಜಕ್ಕೆ ಉದ್ರೇಕಕಾರಿ ಹೇಳಿಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ವಿಧಾನಸಭೆಯ ಸಭಾಪತಿಗಳು ಶಾಸಕ ಸ್ಥಾನದಿಂದ ಯತ್ನಾಳ್ ರನ್ನು ವಜಾಗೊಳಿಸಲು ಮುಂದಗಾಬೇಕೆಂದು ಒತ್ತಾಯಿಸಿದರು.

ನಂತರ ಸಿಐಟಿಯು ಸಂಘಟನೆಯ ಜಿಲ್ಲಾಧ್ಯಕ್ಷ ಸೈಯದ್ಮುಜೀಬ್ ಮಾತನಾಡಿ ಆಚಾರವಿಲ್ಲದ ನಾಲಿಗೆ ನೀಚ ಬುದ್ದಿಯ ಬಿಡು ನಾಲಿಗೆ, ನುಡಿದರೇ ಮಾಣೀಕ್ಯದ ದೀಪ್ತಿಯಂತಿರಬೇಕು ಯಾತ್ನಾಳ್ ರವರು ನಾಲಿಗೆಯ ನೀಚ ಬುದ್ದಿಯನ್ನು ಬಿಡಬೇಕು ಅವರು ಶರಣ ಚಳುವಳಿಯ ಪರಂರಪರೆಯಿಂದ ಬಂದಂತಹವರು ಎಲ್ಲವನ್ನು ವೈದಿಕ ಪರಂಪರೆಗೆ ಗುಲಾಮರಾಗಿ ನಡೆದುಕೊಳ್ಳುವುದನ್ನು ಬಿಟ್ಟು ಸಂವಿಧಾನದತ್ತವಾಗಿ ಮಾಡಿರುವ ಪ್ರಮಾಣವಚನಕ್ಕೆ ಬದ್ದರಾಗಿ ನಡೆದುಕೊಳ್ಳಬೇಕು.ಇಲ್ಲವಾದರೆ ಶಾಸಕ ಸ್ಥಾನದಿಂದ ಹೊರಗುಳಿಯಬೇಕು ಎಂದರು.  

 ರೈತ ಸಂಘಟನೆಯ ಬಿ.ಉಮೇಶ್ ಮಾತನಾಡಿ ಸಾಂಸ್ಕೃತಿಕ ಹಬ್ಬಗಳಲ್ಲಿ ಎಲ್ಲಾರು ಒಂದು ಗೂಡಿ ಆಚರಿಸುವ ಸಂದರ್ಭಗಳಲ್ಲಿ ದ್ವೇಷ ಹರಡುವುದು ಒಬ್ಬ ಶಾಸಕರ ನಡೆಯಾಗಬಾರದು, ಯತ್ನಾಳ್ ರವರ ಮಾನಸೀಕ ಅಸ್ವಸ್ತತೆಗೆ ಸಭಾಪತಿಗಳು ವೈದ್ಯಕಿಯ ಚಿಕಿತ್ಸೆ ಕೊಡಿಸಲಿ, ಹಿಂದೂ ಮುಸ್ಲಿಂ, ದಲಿತರೆಲ್ಲರು ಸೌಹಾರ್ಧತೆಯಿಂದ ಕೂಡಿರುವ ನಾಡಿನಲ್ಲಿ ಜಾತಿ, ಧರ್ಮದ ವೈಶಮ್ಯದ ಪ್ರಧೋನೆ ನೀಡುವುದು ಜವಾಬ್ದಾರಿಯುತ ಶಾಸಕರಿಗೆ ಸರಿಯಾದುದ್ದಲ್ಲ. ಕಾನೂನು ಕ್ರಮಗಳನ್ನು ಲೆಕ್ಕಿಸದೇ ದ್ವೇಷವನ್ನು ಹರಡುವ ಮೂಲಕ ತಮ್ಮ ಮಾನಸೀಕ ಅಸ್ವಸ್ತತೆಯನ್ನು ಯತ್ನಾಳ್ ಹೊರಹಾಕುತ್ತಿದ್ದಾರೆ. ತುಮಕೂರು ಕಲ್ಪತರ ನಾಡು ಶಾಂತಿಯನ್ನು ಬಯಸುವ ಎಲ್ಲರು ಯತ್ನಾಳ್ರವರನ್ನು ಶಾಸಕ ಸ್ಥಾನದಿಂದ ಕೈಬಿಡಬೇಕಂದು ಸ್ಪೀಕರ್ ರವರನ್ನು ಒತ್ತಾಯಿಸುತ್ತೇವೆ ಎಂದರು

ಇದೇ ಸಂದರ್ಭದಲ್ಲಿ ಸಿಐಟಿಯು ಸಂಘಟನೆಯ ಕಾರ್ಯದರ್ಶಿ ಸುಬ್ರಮಣ್ಯ, ಜನಸಂಗ್ರಾಮ ಪರಿಷತ್ ನ ಸಿ.ಯತಿರಾಜ್, ಪಿಯುಸಿಎಲ್ ಸಂಘಟನೆಯ ಅರುಣ್, ಎಪಿಸಿಆರ್ ನಗರ ಸಂಚಾಲಕರಾದ ತಾಜುದ್ದೀನ್ ಷರೀಫ್, ಅಫ್ತರ್ ಖಾನ್, ಎಐಟಿಯುಸಿ- ಕಂಬೇಗೌಡ, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೋಂಡಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಅಂಬೇಡ್ಕರ್ ಓದು ; ಭಾರತವನ್ನು ಅರಿಯುವ ದಾರಿ : ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯ

ಶಿವಮೊಗ್ಗ ಮಾನವತಾವಾದಿ ಅಂಬೇಡ್ಕರ್ ಅವರನ್ನು ಓದುವುದು ಎಂದರೆ ಭಾರತವನ್ನು ನೈಜವಾಗಿ ಅರಿಯುವುದು,...

ಬಿಜೆಪಿಯ ಆತ್ಮವಂಚನೆ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

ಧಾರವಾಡ | ಹಿಂದುಳಿದ ವರ್ಗಗಳ ಸಮೀಕ್ಷೆ; ಸಬ್‌ಜೈಲ್ ಸುತ್ತ ಪ್ರದೇಶಗಳಲ್ಲಿ ನೆಟವರ್ಕ್ ಸಮಸ್ಯೆ

ಧಾರವಾಡ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿಯಲ್ಲಿದ್ದು,...

ವಿಜಯಪುರ | ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಶಂಕರಗೌಡ ಸೋಮನಾಳ

ಪರಿಸರಕ್ಕೆ ಹಾನಿ ಮಾಡದಂತಹ ತಂತ್ರಜ್ಞಾನಗಳನ್ನು ನಾವು ಪ್ರೋತ್ಸಾಹಿಸಬೇಕು. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ...

Download Eedina App Android / iOS

X