ತುಮಕೂರು | ಜಿಟಿಟಿಸಿಯಿಂದ ಯುವಜನರಿಗೆ ಉದ್ಯೋಗ ಖಾತ್ರಿ : ಮುರುಳೀಧರ ಹಾಲಪ್ಪ

Date:

ಶಿಕ್ಷಣದ ಜೊತೆಗೆ ಉದ್ಯೋಗ ಖಾತ್ರಿಯೂ ಇರುವ ಜಿಟಿಟಿಸಿಯ ನೀಡುತ್ತಿರುವ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್‌ ಕೋರ್ಸ್ ಗಳಿಗೆ ಗ್ರಾಮೀಣ ಯುವಜನರು ಸೇರ್ಪಡೆಗೊಳ್ಳುವ ಮೂಲಕ ತಮ್ಮ ಭವಿಷ್ಯವನ್ನು ಉಜ್ವಲ ಗೊಳಿಸಿಕೊಳ್ಳುವಂತೆ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಕೌಶಲ್ಯಾಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದರು.

- Advertisement -

ತುಮಕೂರು ಹಿರೇಹಳ್ಳಿ ಕೈಗಾರಿಕಾ ಪ್ರದೇಶದಲ್ಲಿಇರುವ ಸರಕಾರಿಟೂಲ್ಸ್ಅಂಡ್‌ಟ್ರೈನಿಂಗ್ ಸೆಂಟರ್‌ನಲ್ಲಿ 2025-26ನೇ ಸಾಲಿನ ಪ್ರಥಮ ವರ್ಷದ ಜಿಟಿಟಿಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಲ್ಲಿನ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದಅವರು,

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

JNU ವಿದ್ಯಾರ್ಥಿ ‘ನಜೀಬ್’ ನಾಪತ್ತೆಗೆ 10 ವರ್ಷಗಳು: ಉತ್ತರ...

ತನಿಖಾ ಸಂಸ್ಥೆಗಳು ಕಡತವನ್ನು ಮುಚ್ಚಿದ ಮಾತ್ರಕ್ಕೆ ಒಬ್ಬ ತಾಯಿಯ ಹುಡುಕಾಟವನ್ನಾಗಲಿ ಅಥವಾ ಅಮಾಯಕ ವಿದ್ಯಾರ್ಥಿಯೊಬ್ಬನ ನಾಪತ್ತೆ ಕುರಿತ ಪ್ರಶ್ನೆಗಳನ್ನಾಗಲಿ ಅಳಿಸಿಹಾಕಲು ಸಾಧ್ಯವಿಲ್ಲ. ನಜೀಬ್ ಅಹ್ಮದ್ ಅವರನ್ನು ಕೇವಲ ಒಂದು ಪ್ರತಿಭಟನೆಯ ಸಂಕೇತವಾಗಿ ನೆನೆಯುವ...

 ಎಸ್.ಎಸ್.ಎಲ್.ಸಿ ಪಾಸಾದ ವಿದ್ಯಾರ್ಥಿಗಳು ಜಿಟಿಟಿಸಿ ಕೋರ್ಸುಗಳನ್ನು ಆಯ್ಕೆ ಮಾಡಿಕೊಂಡರೆ ಶೇ 100 ರಷ್ಟುಉದ್ಯೋಗವನ್ನು ಪಡೆಯಬಹುದು.ಇದು ಹೆಮ್ಮೆಯ ವಿಚಾರ ಎಂದರು.

ಜಿಟಿಟಿಸಿ ಸರಕಾರದ ತಾಂತ್ರಿಕ ಮತ್ತು ಕೌಶಲ್ಯಾಭಿದ್ದಿ ಇಲಾಖೆಯ ಅಡಿಯಲ್ಲಿ ನಡೆಯುತ್ತಿದ್ದು, ಆರು ತಿಂಗಳಿನಿಂದ ನಾಲ್ಕುವರೆ ವರ್ಷಗಳ ವರೆಗಿನ ಕೋರ್ಸುಗಳಿದ್ದು, ಇಲ್ಲಿನ ಕೋರ್ಸುಗಳಿಗೆ ಹೊರರಾಜ್ಯದ, ಹೊರಜಿಲ್ಲೆಯ ವಿದ್ಯಾರ್ಥಿಗಳು ಬಂದು ಪ್ರವೇಶ ಪಡೆಯುತ್ತಿದ್ದಾರೆ. ಆದರೆ ತುಮಕೂರಿನ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಹಾಗಾಗಿ ಸ್ಥಳೀಯ ವಿದ್ಯಾರ್ಥಿಗಳು ಇದರ ಸೌಲಭ್ಯ ಪಡೆದುಕೊಳ್ಳಬೇಕು.ಎಸ್.ಎಸ್.ಎಲ್,ಸಿ, ಪಿಯುಸಿ, ಪದವಿ ಪಡೆದ ಮಕ್ಕಳಿಗೆ ಇಲ್ಲಿ ವಿವಿಧ ಕೋರ್ಸುಗಳಿದ್ದು,ಇಲ್ಲಿ ಕಲಿತವರಿಗೆ ಭಾರತದಲ್ಲಿಯೇ ಅಲ್ಲ, ವಿದೇಶಗಳಲ್ಲಿಯೂ ಒಳ್ಳೆಯ ಬೆಲೆ ಇದೆಎಂದು ಮುರುಳೀಧರ ಹಾಲಪ್ಪ ನುಡಿದರು. 

ಜಿಟಿಟಿಸಿ ಪ್ರಾಂಶುಪಾಲ ಜಯಪ್ರಕಾಶ್.ಜೆ.ಕೆ. ಮಾತನಾಡಿ,ಯುವ ಪಿಳೀಗೆಗೆ ಇಂದು ಬೇಕಾಗಿರುವುದು ಕೇವಲ ಪದವಿ ಸರ್ಟಿಪಿಕೇಟ್‌ಅಲ್ಲ,ಬದಲಿಗೆಉದ್ಯೋಗ. ಹಾಗಾಗಿ ಶಿಕ್ಷಣದ ಜೊತೆಗೆಉದ್ಯೋಗವನ್ನು ದೊರಕಿಸಿಕೊಡುವ ಇಂತಹ ಕೋರ್ಸುಗಳನ್ನು ಯುವಜನತೆಆಯ್ಕೆ ಮಾಡಿಕೊಂಡರೆ ಶೇ100 ರಷ್ಟುಉದ್ಯೋಗ ಪಡೆಯಬಹುದು.ನಮ್ಮಲ್ಲಿ ಸೇರ್ಪಡೆಯಾಗುವ ವಿದ್ಯಾರ್ಥಿಗಳಲ್ಲಿ ಕ್ಯಾಟಗರಿಯೇ ಮೇಲೆ ಯಾವುದೇ ಶುಲ್ಕ ರಿಯಾಯಿತಿಇಲ್ಲ. ಬದಲಿಗೆ, ಇಂಡಸ್ತಿç ತರಬೇತಿಗೆ ಹೋದಂತಹ ಸಂದರ್ಭದಲ್ಲಿಅಲ್ಲಿದೊರೆಯುವ ಶಿಷ್ಯವೇತನದಿಂದಲೇ ನಾಲ್ಕು ವರ್ಷಗಳ ಕಾಲ ಕಟ್ಟಿರುವ ಶುಲ್ಕವನ್ನು ವೇತನದರೂಪದಲ್ಲಿ ಪಡೆಯುಬಹುದು.ಒಂದುರೀತಿಯಲ್ಲಿ ಶೂನ್ಯದಲ್ಲಿಡಿಪ್ಲಮೋ ವಿದ್ಯಾಭ್ಯಾಸ ಮಾಡಿದಂತಾಗುತ್ತದೆ. ಕರ್ನಾಟಕದ 33 ಕಡೆಗಳಲ್ಲಿ ಜಿಟಿಟಿಸಿ ಟ್ರೖನಿಂಗ್ ಸೆಂಟರ್‌ ಇದ್ದು, ಹೊಸ ಹೊಸ ಕೋರ್ಸುಗಳನ್ನು ಅಳವಡಿಸಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರುತಮ್ಮ ಹತ್ತಿರದ ಜಿಟಿಟಿಸಿ ಸೆಂಟರ್‌ಗೆ ಭೇಟಿ ನೀಡಿ ಖುದ್ದು ಪರಿಶೀಲಿಸುವ ಮೂಲಕ ತಮಗಿರುವ ಸೌಲಭ್ಯಗಳನ್ನು ಬಳಕೆ ಮಾಡಿಕೊಳ್ಳಬಹುದು ಎಂದರು.

ವೇದಿಕೆಯಲ್ಲಿ ಕೌಶಲ್ಯಾಭಿವೃದ್ದಿ ಇಲಾಖೆಯ ಅಧಿಕಾರಿ ಅಂಜನಮೂರ್ತಿ,ಶಿಕ್ಷಕರಾದ ಗಂಗಾಧರ್.ಜಿ.ಹೆಚ್, ಕಿಶೋರ್‌ಕುಮಾರ್,ಸಿಡಾಕ್ ಜಂಟಿ ನಿರ್ದೇಶಕರಾದ ಶೋಭಾಶ್ರೀ ಮತ್ತಿತರರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಬಲೇಶ್ವರ ನಾಕಾ ರಸ್ತೆ ಕಾಮಗಾರಿ ವಿಳಂಬಕ್ಕೆ ಆಪ್ ಆಕ್ರೋಶ; ಪಾಲಿಕೆಗೆ ಒಂದು ವಾರ ಗಡುವು

ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ಬಬಲೇಶ್ವರ ನಾಕಾದಿಂದ ನಾಯರಾ ಪೆಟ್ರೋಲ್ ಪಂಪ್‌ವರೆಗಿನ ರಸ್ತೆಯ...

ಕೋಲಾರ | ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ್ ಪರ ಮತ ಯಾಚನೆ

ಮುಂಬರುವ ಜಿ.ಪಂ,‌ ತಾ.ಪಂ. ಗ್ರಾ.ಪಂ.ಗೆ ಈ ಚುನಾವಣೆಯೇ ಪ್ರಮುಖ ದಾರಿ. ನಂತರ...

ತುಮಕೂರು | ಬಣ್ಣದ ಚಿತ್ತಾರದಲ್ಲಿ ಅರಳಿದ ಮಹಿಳೆಯರ ಸೃಜನಶೀಲತೆ ; ಮಹಿಳಾ ದಸರಾಗೆ ಡಾ.ಜಿ.ಪರಮೇಶ್ವರ್ ಚಾಲನೆ

 ಬಣ್ಣಬಣ್ಣದ ರಂಗೋಲಿ ಚಿತ್ತಾರ, ಕ್ರೀಡಾ ಸ್ಪರ್ಧೆಗಳ ಸಂಭ್ರಮ, ಮಹಿಳೆಯರ ಉತ್ಸಾಹದ ಪಾಲ್ಗೊಳ್ಳುವಿಕೆ....

ಯುವಜನತೆ ದುಶ್ಚಟಗಳಿಂದ ದೂರವಿದ್ದು ಉತ್ತಮ ನಾಗರಿಕರಾಗಬೇಕು: ಹಜ್ರತ್ ಎಂ.ಪಿ. ಮುಜಮ್ಮಿಲ್ ಸಾಹೇಬ್ ಕರೆ

ಮೈಸೂರಿನ ಗೌಸಿಯಾ ನಗರದ ಉಸ್ಮಾನಿಯಾ ಬ್ಲಾಕ್‌ನ ನೌಜವಾನ್ ಕಮಿಟಿ ವತಿಯಿಂದ ಪ್ರತಿವರ್ಷದಂತೆ...