ತುಮಕೂರು : ಚಳವಳಿಯ ಪ್ರಜ್ಞೆ ಮತ್ತು ಸಾಹಿತ್ಯ ಪ್ರಜ್ಞೆ ಪರಸ್ಪರ ಬೇರೆಯಲ್ಲ : ಬರಗೂರು ರಾಮಚಂದ್ರಪ್ಪ

Date:

ಸಾಹಿತಿಗಳಿಗೆ ಚಳವಳಿಯ ಸಂಬಂಧ ಇದ್ದರೆ ಅಂತಹ ಸಾಹಿತ್ಯ ಸೃಜನಶೀಲವಾಗಿ ಸೊರಗುತ್ತಾ ಹೋಗುತ್ತದೆ ಎನ್ನುವ ಭಾವನೆ ಇಟ್ಟುಕೊಂಡಿರುವ ಒಂದು ವಿಮರ್ಶಕ ವಲಯ ಇದೆ. ಆದರೆ ಜಗತ್ತಿನಲ್ಲಿ ಚಳವಳಿಯ ಜೊತೆ ಸಂಬಂಧ ಇಟ್ಟುಕೊಂಡ ಅನೇಕರು ಬಹಳ ಅದ್ಬುತವಾದಂತಹ ಕೃತಿಗಳನ್ನು ಕೊಟ್ಟಿದ್ದಾರೆ. ಚಳವಳಿಯ ಪ್ರಜ್ಞೆ ಮತ್ತು ಸಾಹಿತ್ಯ ಪ್ರಜ್ಞೆ ಪರಸ್ಪರ ಬೇರೆಯಲ್ಲ ಎನ್ನುವ ತಿಳುವಳಿಕೆ ನಮಗೆ ಬಹಳ ಅಗತ್ಯವಿದೆ ಎಂದು ಹಿರಿಯ ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು

- Advertisement -

ಬಂಡಾಯ ಸಂಘಟನೆ ತುಮಕೂರು ಘಟಕದಿಂದ ತುಮಕೂರಿನಲ್ಲಿ ಹಮ್ಮಿಕೊಂಡಿದ್ದ ‘ಚಳವಳಿಯ ಸಂಗಾತಿಯಾಗಿ ಕನ್ನಡ ಸಾಹಿತ್ಯ’  ಎಂಬ ವಿಷಯ ಕುರಿತು ರಾಜ್ಯಮಟ್ಟದ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಳವಳಿಯಲ್ಲಿ ಭಾಗವಹಿಸಿದ ಕೂಡಲೇ ನಮ್ಮ ಸೃಜನಶೀಲ ಸ್ವಾತಂತ್ರ್ಯ ಕಳೆದುಹೋಗುತ್ತದೆ. ಸೃಜನಶೀಲ ತತ್ವಕ್ಕೆ ಧಕ್ಕೆ ಬರುತ್ತದೆ ಅಂತಾ ಆಗಲಿ ಭಾವಿಸಿಕೊಳ್ಳುವುದು ಒಂದು ಸಾಂಸ್ಕೃತಿಕ ಮೂಢನಂಬಿಕೆ. ಅನೇಕರು ಅದನ್ನು ಸಾಧಿಸಿ ತೋರಿಸಿದ್ದಾರೆ. ಹಾಗಾಗಿ ಒಂದು ಸಾಮಾಜಿಕ ಜವಾಬ್ದಾರಿಯಿಂದ, ಬದ್ದತೆಯಿಂದ ಬರೆಯುತ್ತಿರುವವರು ಯಾರು ಇದ್ದಾರೆ, ಅವರು ಚಳವಳಿಯ ಜೊತೆಯಲ್ಲಿ ಗುರುತಿಸಿಕೊಂಡ ಕೂಡಲೇ ಅವರ ಸೃಜನಶೀಲ ಸ್ವಾತಂತ್ರ್ಯ ಮತ್ತು ಅದರ ತತ್ವ ಅದು ಕುಗ್ಗಿಹೋಗಿಲ್ಲ ಎನ್ನುವ ವಿಚಾರವನ್ನು ನಾವು 1979ರಿಂದ ಮಾತನಾಡುತ್ತಲೇ ಬರುತ್ತಿದ್ದೇವೆ ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಒಂದು ಪರಂಪರೆಯ ಪ್ರಜ್ಞೆಯಲ್ಲೇ ಒಂದು ಚಳವಳಿಯಿದೆ. ಕನ್ನಡ ಸಾಹಿತ್ಯ ಪರಂಪರೆಯನ್ನು ನೋಡುತ್ತಾ ಬಂದರೆ, ಅದರ ಒಳಗಡೆ ಸಹ ಚಳವಳಿ ಇದೆ. ಹಾಗಾದರೆ ಚಳವಳಿಯ ಪ್ರಜ್ಞೆ ಹೇಗಿರಬಹುದು ಎಂಬುದನ್ನು ನೋಡಿದರೆ ಸಾಹಿತ್ಯವೇ ಒಂದು ಚಳವಳಿಯಾಗಬಹುದು. ಅದು ಒಂದು ಮಾದರಿ. ಇನ್ನೊಂದು ಸಾಹಿತ್ಯೇತರ ಚಳವಳಿಗಳಿಂದ ಸಾಹಿತ್ಯ ಪ್ರಭಾವಕ್ಕೆ ಒಳಗಾಗಬಹುದು. ಸಾಹಿತ್ಯೇತರ ಚಳವಳಿ ಅಂದರೆ ಅದು ರೈತ, ದಲಿತ, ಮಹಿಳೆ ಚಳವಳಿ ಹೀಗೆ ವಿವಿಧ ರೀತಿಯ ಚಳವಳಿಗಳೇನಿದೆ ಆ ಚಳವಳಿಗಳಿಂದ ಸಾಹಿತ್ಯ ಪ್ರಭಾವಿತವಾಗುವುದು ಇನ್ನೊಂದು ವಿಧಾನ ಇದೆ ಎಂದರು.

1001797901

ಇನ್ನೊಂದು ಸಾಹಿತಿಗಳೇ ನೇರವಾಗಿ ಚಳವಳಿಗಳಲ್ಲಿ ಗುರುತಿಸಿಕೊಳ್ಳುವುದು, ಹೀಗೆ ಬೇರೆ ಬೇರೆ ರೀತಿಯಲ್ಲಿ ಅಂದಿನಿಂದ ಇಂದಿನವರೆಗು ಅಭಿವ್ಯಕ್ತಗೊಳ್ಳುತ್ತಲೇ ಬರುತ್ತಿವೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅನೇಕರು ನೇರವಾಗಿ ಚಳವಳಿಗಳಲ್ಲಿ ಭಾಗವಹಿಸಿದವರೂ ಇದ್ದಾರೆ. ಅವರೂ ಕೂಡ ಒಳ್ಳೆಯ ಸಾಹಿತ್ಯವನ್ನೇ ಬರೆದಿದ್ದಾರೆ. ಆದರೆ ಅದನ್ನು ನೋಡುವ ಕಣ್ಣು ಇದೆಯಲ್ಲ ಅದು ಬಹಳ ಮುಖ್ಯವಾದುದು. ಕೆಲವರು ಚಳವಳಿಗಳಲ್ಲಿ ಭಾಗವಹಿಸಿರುವುದಿಲ್ಲ. ಆದರೆ ಆವರ ಸಾಹಿತ್ಯದ ಒಳಗಡೆ ಚಳವಳಿ ಇರುತ್ತದೆ ಎಂದು ವಿವರಿಸಿದರು.

ಪಂಪ ಮತ್ತು ಬಸವಣ್ಣ ಆಧುನಿಕಪೂರ್ವ ಸಾಹಿತ್ಯದಲ್ಲಿ ಇವರಿಬ್ಬರನ್ನು ಸಾಂಕೇತಿಕವಾಗಿ ಉದಾಹರಿಸುತ್ತೇನೆ. ಪಂಪ ನೇರವಾಗಿ ಚಳವಳಿಯನ್ನು ಕಟ್ಟಲಿಲ್ಲ ನಿಜ. ಆದರೆ ಬಸವಣ್ಣನವರು ನೇರವಾಗಿ ಒಂದು ಚಳವಳಿಗೆ ಕಾರಣರಾದರು. ಪಂಪನ ಕೃತಿಗಳು ಇಡೀ ಕನ್ನಡ ಸಾಹಿತ್ಯದಲ್ಲಿ, ಇಡೀ ಕರ್ನಾಟಕದ ಒಳಗಡೆ ಕುಲಪದ್ದತಿಯನ್ನು ವಿರೋಧಿಸಿ ಮೊದಲು ಮಾತನಾಡಿದ ಕವಿ ಎಂದರೆ ಪಂಪನೇ. ಆದರೆ ಆ ಪಂಪನನ್ನು ಇಂದು ಗೌಣವಾಗಿಸಿದ್ದಾರೆ. ಪಂಪ ಮಾಡಿದ ಚಳವಳಿ ಪ್ರಭುತ್ವದ ಜೊತೆ ನಾವು ಹೇಗಿರಬೇಕು. ಸೃಜನಶೀಲ ಸ್ವಾತಂತ್ರ್ಯವನ್ನು ಬಿಟ್ಟುಕೊಡದೆ ಪ್ರಭುತ್ವದ ಜೊತೆ ಮುಖಾಮುಖಿಯಾಗುವುದು ಹೇಗೆ ಹೇಳಿಕೊಟ್ಟಿದ್ದಾನೆ ಎಂದರು.

1001797902

ಬಸವಣ್ಣನವರು ಹೊಸ ಹುಟ್ಟಿಗೆ ಕಾರಣರಾದವರು, ಬಸವಣ್ಣನವರು ನೇರವಾಗಿ ಚಳವಳಿಗೆ ಪ್ರೇರಣೆ ಒದಗಿಸಿಕೊಟ್ಟವರು. ಇಡೀ ಕನ್ನಡ ಸಾಹಿತ್ಯದಲ್ಲಿ ಕಥನವಿಲ್ಲದ ಕಾವ್ಯವನ್ನು ಕೊಟ್ಟದ್ದು ವಚನ ಸಾಹಿತ್ಯ ಎಂಬುದನ್ನು ನಾವು ಮರೆಯಬಾರದು ಪಂಪ, ಕುವೆಂಪು, ಬೇಂದ್ರೆ, ಕಾರಂತರಂಥವರು ನೇರವಾಗಿ ಚಳವಳಿಗೆ ಇಳಿಯಲಿಲ್ಲ. ಘೋಷಣೆ ಕೂಗಲಿಲ್ಲ. ಆದರೆ ಅವರ ಕೃತಿಗಳ ಒಳಗಡೆ ಮನಾತ್ಮಕ ಚಳವಳಿ ಇದೆ. ಬಸವಣ್ಣನವರ ನಂತರ ಬಂದ ಎಲ್ಲಾ ಚಳವಳಿಗಳೂ ಕ್ರಿಯಾತ್ಮಕ ಚಳವಳಿಗಳು ಎಂದು ನುಡಿದರು.

ಕನ್ನಡದ ಒಟ್ಟು ಸಾಹಿತ್ಯ ಪರಂಪರೆಯಲ್ಲಿ ಯಾವುದು ಗಟ್ಟಿಯಾಗಿ ಉಳಿದುಕೊಂಡು ಬಂದಿದೆ ಅಂದರೆ ಅದು ಮನಾತ್ಮಕ ಚಳವಳಿ. ಇದನ್ನು ಪಂಪನಲ್ಲಿ ನೋಡಬಹುದು, ಕುವೆಂಪು ಅವರಲ್ಲಿ ನೋಡಬಹುದು. ಬೇಂದ್ರೆ, ಕಾರಂತ, ಕುಮಾರವ್ಯಾಸನಲ್ಲಿ ನೋಡಬಹುದು. ಅಂದರೆ ನಾವು ಬದುಕುತ್ತಿರುವ ಸಾಮಾಜಿಕ ಸನ್ನಿವೇಶಕ್ಕೆ, ಪ್ರಭುತ್ವದ ಸನ್ನಿವೇಶಕ್ಕೆ ಮುಖಾಮುಖಿಯಾಗುತ್ತ, ಅನುಸಂಧಾನವನ್ನು ನಡೆಸುತ್ತಾ ತಮ್ಮ ಸೃಜನಶೀಲ ಸಾಹಿತ್ಯವನ್ನು ಉಳಿಸಿಕೊಳ್ಳುತ್ತಾ ಸಾಮಾಜಿಕ ಅನಿಷ್ಠಗಳ ವಿರುದ್ಧವಾಗಿ ಮಾತನಾಡಿದವರು ಇದ್ದಾರಲ್ಲ ಅವರಲ್ಲಿ ಅನೇಕರು ಕನ್ನಡ ಸಾಹಿತ್ಯದಲ್ಲಿದ್ದು ಮನಾತ್ಮಕ ಚಳವಳಿಗಾರರು. ಹಾಗಾಗಿ ಕನ್ನಡ ಸಾಹಿತ್ಯದಲ್ಲಿ ಮನಾತ್ಮಕ ಚಳವಳಿಯೂ ಇದೆ. ಕ್ರಿಯಾತ್ಮಕ ಚಳವಳಿಯೂ ಇದೆ. ಇದು ನವೋದಯದಿಂದ ಹಿಡಿದು, ದಲಿತ ಬಂಡಾಯದವರೆಗೂ ನಡೆದುಕೊಂಡು ಬಂದಿದೆ ಎಂದರು.

ಸಾಹಿತಿ ಡಾ.ಕರೀಗೌಡ ಬೀಚನಹಳ್ಳಿ ಮಾತನಾಡಿದರು. ಜನಪರ ಚಿಂತಕ ಕೆ.ದೊರೈರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾದಂಬರಿಕಾರ ಡಾ.ಓ.ನಾಗರಾಜ್ ಪ್ರಾಸ್ತಾವಿಕ ಮಾತನಾಡಿದರು. ಡಾ. ನಾಗಭೂಷಣ ಬಗ್ಗನಡು ನಿರೂಪಿಸಿದರು

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಾರ್ಮಿಕರು ಹಕ್ಕು ಮತ್ತು ಸೌಲಭ್ಯಗಳಿಂದ ವಂಚಿತರಾಗದಂತೆ ನೋಡಿಕೊಳ್ಳಿ: ಟಿ.ಎಂ. ಶಾಹಿದ್ ತೆಕ್ಕಿಲ್

ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುವುದರೊಂದಿಗೆ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ...

ಬಾಗೇಪಲ್ಲಿಯಲ್ಲಿ ರಸ್ತೆ ಅಪಘಾತ:ರೈತ ನಂಜಪ್ಪ ಸಾವು

ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ದ್ವಿಚಕ್ರ ವಾಹನದಲ್ಲಿ ಹೊಲಕ್ಕೆ ತೆರಳುತ್ತಿದ್ದ ನಡಂಪಲ್ಲಿ...

ಮಂಗಳೂರು | ಕೊಳ್ತಮಜಲು ರಹ್ಮಾನ್ ಹತ್ಯೆ ಪ್ರಕರಣ: ಆರೋಪಿಗಳ ಜಾಮೀನು ರದ್ದುಪಡಿಸಿದ ಸುಪ್ರೀಂ ಕೋರ್ಟ್

ಕೊಳ್ತಮಜಲು ರಹ್ಮಾನ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳಿಗೆ ಇತ್ತೀಚೆಗೆ ನ್ಯಾಯಾಲಯ ಜಾಮೀನು ನೀಡಿತ್ತು....

ಕೋಲಾರ | ಚೈನಾ ಶಾಂಘೈನಲ್ಲಿ ಕನ್ನಡದ ಮೊದಲ ಜಾನಪದ ಕಾರ್ಯಕ್ರಮ: ಗೋ.ನಾ. ಸ್ವಾಮಿ ಭಾಗಿ

ಚೈನಾ ದೇಶದ ಶಾಂಘೈನಲ್ಲಿ ಕನ್ನಡಿಗರ ಸಂಘದ ವತಿಯಿಂದ ಆಯೋಜಿಸಿದ್ದ ಕನ್ನಡದ ಮೊದಲ...