ಕರ್ನಾಟಕ ಸರ್ಕಾರದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಧ್ಯಕ್ಷರನ್ನಾಗಿ ನಿಕೇತ್ ರಾಜ್ ಮೌರ್ಯ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಈಗ ನಿಗಮ ಮಂಡಳಿಗಳು ಹಾಗೂ ಪ್ರಾಧಿಕಾರಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರ ನೇಮಕ ಪ್ರಕ್ರಿಯೆ ನಡೆಯುತ್ತಿದ್ದು, ಅದರಲ್ಲಿ ಕೆಪಿಸಿಸಿ ಮುಖ್ಯ ವಕ್ತಾರರಾದ ನಿಕೇತ್ ರಾಜ್ ಮೌರ್ಯ ಅವರಿಗೆ ಬಿಎಂಟಿಸಿ ಅಧ್ಯಕ್ಷ ಪಟ್ಟ ಒಲಿದು ಬಂದಿದೆ.
ನಿಕೇತ್ ರಾಜ್ ಮೌರ್ಯ ಅವರು ಮೂಲತಃ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಮಿಡಿಗೇಶಿಯವರಾಗಿದ್ದು, ಕಾಂಗ್ರಸ್ನ ಗುಡ್ ಸ್ಪೋಕ್ ಪರ್ಸನ್ ಎಂಬ ಖ್ಯಾತಿ ಪಡೆದವರು. 2024ರಲ್ಲಿ ತುಮಕೂರು ಲೋಕಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದರು. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಪ್ರೀತಿ ಪಾತ್ರರಾಗಿ ಗುರುತಿಸಿಕೊಂಡಿದ್ದ ಅವರು, ಕೆ.ಎನ್.ರಾಜಣ್ಣನವರ ಆಪ್ತವಲಯದಲ್ಲಿದ್ದರು.
2023ರ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಜಿಲ್ಲೆಯ 11 ವಿಧಾನಸಭಾ ಮತಕ್ಷೇತ್ರಗಳಲ್ಲಿ ಕಾಂಗ್ರೆಸ್ 7 ಸ್ಥಾನ ಪಡೆಯುವಲ್ಲಿ ನಿಕೇತ್ ರಾಜ್ ಅವರು ಮಹತ್ತರ ಪಾತ್ರವಹಿಸಿದ್ದರು.
ರಾಜ್ಯ ಮಟ್ಟದಲ್ಲಿ ಕಾಂಗ್ರಸ್ ಪಕ್ಷವನ್ನು ಮತ್ತು ಸಾಧನೆಗಳನ್ನು ಸಮರ್ಥಿಸಿಕೊಳ್ಳುವಲ್ಲಿ ಮುಂಚೂಣಿ ವಕ್ತಾರರಾಗಿದ್ದರು. ಕಾಂಗ್ರೆಸ್ನ ಸಮಾಜವಾದಿ ಮತ್ತು ಪ್ರಗತಿಪರ, ಅಭಿವೃದ್ಧಿ ಕಾರ್ಯಗಳು, ಸೌಹಾರ್ದತೆಗೆ ಕಾಂಗ್ರಸ್ ನೀಡಿದ ಕೊಡುಗೆ ಬಗ್ಗೆ ತಮ್ಮದೇ ಶೈಲಿಯಲ್ಲಿ ಪ್ರಸ್ತುತ ಪಡಿಸುತ್ತಿದ್ದ ರೀತಿ ಕೋಮುವಾದಿಗಳನ್ನು ಹಾಗೂ ಬಿಜೆಪಿ ಪಕ್ಷವನ್ನು ನಿದ್ದೆಗೆಡಿಸಿತ್ತು.
ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ರಾಜ್ಯಾದ್ಯಂತ ಸಂಚರಿಸಿ ಪಕ್ಷ ಸಂಘಟನೆಗೆ ನಿರಂತರವಾಗಿ ಶ್ರಮಿಸಿದ್ದರು. ನಿಕೇತ್ ರಾಜ್ ಅವರ ಈ ಶ್ರಮಕ್ಕೆ ಕಾಂಗ್ರೆಸ್ ನಿಂದ ಬುಹುಮಾನ ದೊರೆತಂತಾಗಿದೆ. ತುಮಕೂರು ಜಿಲ್ಲೆಯ ಯುವಜನರ ಮನಸ್ಸಿನಲ್ಲಿ ಸಂತಸದ ಸಂಚಲನ ಮೂಡಿದೆ.