ತುಮಕೂರು | ಹಸುಗೂಸು, ಬಾಣಂತಿಯರನ್ನು ಮನೆಗೆ ಸೇರಿಸಿದ ನ್ಯಾಯಾಧೀಶೆ

Date:

ಗೊಲ್ಲರ ಹಟ್ಟಿಗಳಲ್ಲಿ ಬಾಣಂತಿ ಹಾಗೂ ಹಸುಗೂಸನ್ನು ಊರ ಹೊರಗಿನ ಗುಡಿಸಿಲಿನಲ್ಲಿರಿಸಿ, ಶಿಶು ಸಾವನ್ನಪ್ಪಿದ್ದ ಘಟನೆಯ ಬಳಿಕವೂ, ಮೌಢ್ಯಾಚರಣೆ ಮುಂದುವರೆದಿದೆ. ಇಂದಿಗೂ ತಮಕೂರು ಜಿಲ್ಲೆಯಲ್ಲಿ ಗೊಲ್ಲ ಸಮುದಾಯವು ಬಾಣಂತಿ ಮತ್ತು ಶಿಶುಗಳನ್ನು ಊರ ಹೊರಗಿನ ಗುಡಿಸಲಿನಲ್ಲಿ ಇರಿಸಲಾಗುತ್ತಿದೆ. ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ತುಮಕೂರು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶೆ, ಗೊಲ್ಲರಹಟ್ಟಿಗಳಿಗೆ ಪದೇ-ಪದೇ ಭೇಟಿ ನೀಡಿ, ಅಲ್ಲಿನ ಜನರನ್ನು ಅರಿವು ಮೂಡಿಸುತ್ತಿದ್ದಾರೆ. ಬಾಣಂತಿಯನ್ನು ಮನೆಗೆ ಸೇರಿಸುತ್ತಿದ್ದಾರೆ.

- Advertisement -

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಗೌರಿಪುರ, ಬಿದರೆ, ನಲ್ಲೂರು ಭಾಗದ ಗೊಲ್ಲರಹಟ್ಟಿಗಳಿಗೆ ನ್ಯಾಯಾಧೀಶರ ನೇತೃತ್ವದ ತಂಡ ಭೇಟಿ ನೀಡಿದ್ದು, ಗೌರಿಪುರದಲ್ಲಿ ಊರ ಹೊರಗಿನ ಗುಡಿಸಲಿನಲ್ಲಿದ್ದ ಒಂದು ತಿಂಗಳ ಹಾಗೂ ಒಂದೂವರೆ ತಿಂಗಳ ಹಸುಗೂಸು ಹಾಗೂ ಬಾಣಂತಿಯರನ್ನು ಮನೆಗೆ ಕಳುಹಿಸಿದ್ದಾರೆ. ನಲ್ಲೂರು ಹಟ್ಟಿಯಲ್ಲಿ ಒಂದು ತಿಂಗಳ ಹಾಗೂ ಒಂದೂವರೆ ತಿಂಗಳ ಇಬ್ಬರು ಬಾಣಂತಿಯರ ಪೋಷಕರ ಮನವೊಲಿಸಿ ಆರೋಗ್ಯ ತಪಾಸಣೆ ನಡೆಸಿ ಮನೆಗೆ ಕಳುಹಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್...

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...

“ಆಧುನಿಕ ಕಾಲದಲ್ಲಿಯೂ ಜನರು ಮೂಢನಂಬಿಕೆಯನ್ನು ಪಾಲಿಸುತ್ತಿರುವುದು ದುರದೃಷ್ಟಕರ. ಬಾಣಂತಿ, ಮಕ್ಕಳಿಗೆ ಉತ್ತಮ ಆರೈಕೆಯ ಅಗತ್ಯವಿದೆ. ಯಾವುದೇ ಕಾರಣಕ್ಕೂ ಅವರನ್ನು ಊರ ಹೊರಗೆ ಬಿಡಬಾರದು. ಅಂತಹ ಯಾವುದೇ ಪ್ರಕರಣ ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ತಾಲೂಕಿನ ಯಾವುದೇ ಭಾಗದಲ್ಲಿ ಇಂತಹ ಪ್ರಕರಣ ಕಂಡುಬಂದಲ್ಲಿ ಕಾನೂನು ಸೇವಾ ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕು” ಎಂದು ನ್ಯಾಯಾಧೀಶೆ ಉಂಡಿ ಮಂಜುಳ ಶಿವಪ್ಪ ಸೂಚಿಸಿದರು.

“ಗೊಲ್ಲರಹಟ್ಟಿಯ ವಿದ್ಯಾವಂತರೂ ಮೂಢನಂಬಿಕೆಗೆ ಬಲಿಯಾಗಿರುವುದು ವಿಪರ್ಯಾಸ. ಇಂತಹ ಪದ್ಧತಿಗಳನ್ನು ತ್ಯಜಿಸಿ ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕು. ಸಂಪ್ರದಾಯವನ್ನು ಆಚರಿಸಿ, ಆದರೆ ಮೂಢನಂಬಿಕೆಗೆ ಒಳಗಾಗಿ ಹಸುಗೂಸುಗಳನ್ನು ಬಲಿ ಕೊಡಬೇಡಿ” ಎಂದು ತಹಶೀಲ್ದಾರ್ ಬಿ ಆರತಿ ಜಾಗೃತಿ ಮೂಡಿಸಿದರು.

ಈ ಸುದ್ದಿ ಓದಿದ್ದೀರಾ? ತುಮಕೂರು | ನ್ಯಾ. ಉಂಡಿ ಮಂಜುಳಾ ಶಿವಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ; ಬಾಣಂತಿ ಬಿಡುವ ಗುಡಿಸಲು ನಾಶ

“ಹೆರಿಗೆಯ ನಂತರ ಮಗು, ಬಾಣಂತಿಗೆ ಹೆಚ್ಚಿನ ಆರೈಕೆಯ ಅಗತ್ಯವಿದೆ. ಚಳಿ, ಮಳೆಗೆ ಲೆಕ್ಕಿಸದೆ ಗುಡಿಸಲಿನಲ್ಲಿ ಬಿಡುವುದು ತರವಲ್ಲ. ಇದು ಅಮಾನವೀಯ ಕೃತ್ಯ. ಸ್ಥಳೀಯರು ಜಾಗೃತಿಗೊಂಡು ಮಗು ಮತ್ತು ಬಾಣಂತಿಗೆ ಉತ್ತಮ ಆರೈಕೆ ಮಾಡುವುದರ ಜತೆಗೆ ಆಗಾಗ ಆರೋಗ್ಯ ತಪಾಸಣೆ ಮಾಡಿಸುತ್ತಿರಬೇಕು” ಎಂದು ತಾಲೂಕು ಆರೋಗ್ಯಾಧಿಕಾರಿ ಡಾ ಬಿಂದು ಮಾಧವ್ ಸಲಹೆ ನೀಡಿದರು.

ಈ ವೇಳೆ ತಾಲೂಕು ಪಂಚಾಯಿತಿ ಇಒ ಪರಮೇಶ್ ಕುಮಾರ್, ದೇವಿಕಾರಾಣಿ, ನಾಗರಾಜು, ಪವಿತ್ರ ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಬರ ಪರಿಹಾರ ಸಮೀಕ್ಷೆ: ಪಾಟ್ನಾದ ಭತ್ತದ ಅಧಿಕಾರಿ ಭೇಟಿ

ಪಾಟ್ನಾದ ಭತ್ತ ಅಭಿವೃದ್ಧಿ ಇಲಾಖೆಯ ನಿರ್ದೇಶಕ ಮಾನಸಿಂಗ್ ಅವರ ನೇತೃತ್ವದ ಅಧಿಕಾರಿಗಳ...

161 ಕಾಮಗಾರಿಗಳಿಗೆ ಶಂಕುಸ್ಥಾಪನೆ-ಉದ್ಘಾಟನೆ; ಜನಕಲ್ಯಾಣವೇ ಸರ್ಕಾರದ ಸಂಕಲ್ಪ: ಸಿದ್ದರಾಮಯ್ಯ

ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ವೇಗ ನೀಡಲಾಗಿದ್ದು, ದಾಸನೂರು...

ಸಾಗರ | ತಾಲೂಕು ಮಟ್ಟದ ಪ್ರಜಾಸೇವೆ ಸಭೆ; 500ಕ್ಕೂ ಹೆಚ್ಚು ಅರ್ಜಿಗಳ ಸ್ವೀಕಾರ

ಸಾಗರ ತಾಲೂಕಿನಲ್ಲಿ ಮನೆ ಬಾಗಿಲಿಗೆ ಬಂತು ಸರ್ಕಾರ–ಸೇವೆಗೆ ಇರಲಿದೆ ಸಹಕಾರ ಎಂಬ...

ವಿಜಯಪುರ | ರಾಮಾನಂದ ತೀರ್ಥರ ಜನ್ಮದಿನ ಸರ್ಕಾರಿ ಜಯಂತಿಯಾಗಲಿ: ವಿನೋದ ಖೇಡ

ಹೈದ್ರಾಬಾದ್ ವಿಮೋಚನಾ ಚಳವಳಿಗೆ ನೇತೃತ್ವ ವಹಿಸಿ, ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಅಮೋಘ...