ತುಮಕೂರು | ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರಕ್ಕೆ ಸೌತ್ ಇಂಡಿಯಾ ಮೀಡಿಯಾ ಅವಾರ್ಡ್ಸ್ ಗರಿಮೆ

Date:

Advertisements

 ಮಾಧ್ಯಮ ಶಿಕ್ಷಣ ಕ್ಷೇತ್ರದ ಗುಣಮಟ್ಟದ ಪ್ರಗತಿ, ಆಧುನಿಕ ತಂತ್ರಜ್ಞಾನದ ಅಳವಡಿಕೆ ಮತ್ತು ಉದ್ಯಮ ಕ್ಷೇತ್ರಕ್ಕೆ ಪೂರಕವಾದ ಪಠ್ಯಕ್ರಮ ಹಾಗೂ ಪ್ರಾಯೋಗಿಕ ಕಲಿಕೆ ಅವಕಾಶ ಸೇರಿದಂತೆ ಸರ್ವಾಂಗೀಣ ಕೊಡುಗೆಗಳನ್ನು ಪರಿಗಣಿಸಿ ರಾಜ್ಯ ಅತ್ಯುತ್ತಮ ಮಾಧ್ಯಮ ಕಾಲೇಜುಗಳಲ್ಲಿ ಕರ್ನಾಟಕದಿಂದ ತುಮಕೂರಿನ ಶ್ರೀ ಸಿದ್ದಾರ್ಥ ಮಾಧ್ಯಮ ಕೇಂದ್ರಕ್ಕೆ ಪ್ರಸಕ್ತ ಸಾಲಿನ ‘ಸೌತ್ ಇಂಡಿಯಾ ಮೀಡಿಯಾ ಅವಾರ್ಡ್ಸ್-2025 ಪ್ರಶಸ್ತಿ ಸಂದಿದೆ.

ಬೆಂಗಳೂರಿನ ಅರಮನೆ ಆವರಣದಲ್ಲಿ ಇತ್ತೀಚಿಗೆ ನಟ ರಘು ಭಟ್ ನೇತೃತ್ವದಲ್ಲಿ ಆಯೋಜಿಸಲಾದ ಟಿಎನ್‌ಐಟಿ ದಕ್ಷಿಣ ಭಾರತೀಯ ಮಾಧ್ಯಮ ಪ್ರಶಸ್ತಿಗಳು ವಿತರಣಾ ಸಮಾರಂಭದಲ್ಲಿ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರಕ್ಕೆ ಪ್ರಶಸ್ತಿಯನ್ನು ಕೊಡಮಾಡಲಾಯಿತು. ಸಂಸ್ಥೆಯ ಪರವಾಗಿ ನಿರ್ದೇಶಕರಾದ ಡಾ.ಬಿ.ಟಿ.ಮುದ್ದೇಶ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು. 

ಜನಸಮುದಾಯದ ದನಿಗೆ ಧ್ವನಿಯಾಗಿರುವ ಸಿದ್ಧಾರ್ಥ ಸಮುದಾಯ ಬಾನುಲಿ, ಮಾಧ್ಯಮ ಕೇಂದ್ರದ ವಿದ್ಯಾರ್ಥಿಗಳಿಂದಲೇ ನಿರ್ಮಾಣವಾಗುತ್ತಿರುವ ಸಾಕ್ಷ್ಯ ಚಿತ್ರಗಳು ಮತ್ತು ಟೆಲಿವಿಷನ್ ಕಾರ್ಯಕ್ರಮಗಳು, ಮಾಧ್ಯಮ ಕ್ಷೇತ್ರದ ಕಲಿಕೆಗೆ ಬೇಕಾದ ಅಗತ್ಯವಾದ ಕಂಪ್ಯೂಟರ್ ಲ್ಯಾಬ್, ರೇಡಿಯೋ ಮತ್ತು ಟಿವಿ ಸ್ಟುಡಿಯೋ ಸೌಕರ್ಯಗಳನ್ನು ಹೊಂದಿರುವ ಸಂಸ್ಥೆಯ ಮೂಲಸೌಕರ್ಯಗಳನ್ನು ಪ್ರಶಸ್ತಿಯ ಮಾನದಂಡವಾಗಿ ಪರಿಗಣಿಸಲಾಗಿದೆ.

ರಾಜ್ಯದ 12 ಕಾಲೇಜುಗಳು ಆಯ್ಕೆ ಪ್ರಕ್ರಿಯೆ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು. ಟೆಲಿವಿಷನ್ ಚಾನೆಲ್‌ನ ವೃತ್ತಿಪರರು, ನಾಮ ನಿರ್ದೇಶನ ಸಮಿತಿ ಸದಸ್ಯರು ಮತ್ತು ತಜ್ಞರು ಸೇರಿ ಅಂತಿಮವಾಗಿ ತುಮಕೂರು ನಗರದ ಎಸ್‌ಎಸ್‌ಐಟಿ ಕ್ಯಾಂಪಸ್ ನಲ್ಲಿರುವ ಶ್ರೀ ಸಿದ್ದಾರ್ಥ ಮಾಧ್ಯಮ ಕೇಂದ್ರವನ್ನು ಪ್ರಶಸ್ತಿಗೆ ಘೋಷಣೆ ಮಾಡಿದ್ದಾರೆ.

1001978667

ಸಮಾರಂಭದಲ್ಲಿ ಚಿತ್ರನಟರಾದ ನಟ ಪ್ರೇಮ್, ರಾಗಿಣಿ ದ್ವಿವೇದಿ, ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು.

 ಟಿಎನ್‌ಐಟಿ ಮುಖ್ಯಸ್ಥ ರಘು ಭಟ್, ನಟ ಶೀಲಂ, ಚಲನಚಿತ್ರ ನಿರ್ದೇಶಕ ಸಿಂಪಲ್ ಸುನಿ, ರೇಡಿಯೋ ಜಾಕಿ ಅಮಿತ್, ನಿರ್ಮಾಪಕ ಆರ್ ಜೆ. ಲೋಕೇಶ್, ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು, ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೋದ ಮಾಜಿ ಕಾರ್ಯನಿರ್ವಾಹಕ ನಿರ್ಮಲಾ ಎಲಿಗರ್, ಎವಿಆರ್ ಪ್ರತಿನಿಧಿ ಶೈಲೇಶ್ ಕುಮಾರ್, ಟಿಎನ್‌ಐಟಿ ಸಂಪಾದಕಿ ಮೀರಾ ಮತ್ತು ಸುಗುಣ ರಘು ಭಟ್ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಳೆದ ಏಳು ವರ್ಷಗಳಿಂದ, ದಿ ನ್ಯೂ ಇಂಡಿಯನ್ ಟೈಮ್ಸ್ (ಟಿಎನ್‌ಐಟಿ) ಮೂಲಕ ಕರ್ನಾಟಕದಲ್ಲಿ ಟಿಎನ್‌ಐಟಿ ಮಾಧ್ಯಮ ಪ್ರಶಸ್ತಿಗಳನ್ನು ಯಶಸ್ವಿಯಾಗಿ ಆಯೋಜಿಸುತ್ತಿದ್ದಾರೆ. ಇದೇ ಪ್ರಥಮ ಬಾರಿಗೆ ಈ ವರ್ಷ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದ ಮಾಧ್ಯಮ ವೃತ್ತಿಪರರನ್ನು ಮತ್ತು ಕರ್ನಾಟಕದ ಎಲೆಕ್ಟ್ರಾನಿಕ್ ಮಾಧ್ಯಮದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುವ ವರದಿಗಾರರು, ನಿರೂಪಕರು ಎಡಿಟಿಂಗ್ ವಿಭಾಗದವರು, ಕ್ಯಾಮೆರಾಮೆನ್‌ಗಳು ಹಾಗೂ ಮಾಧ್ಯಮ ಕಾಲೇಜುಗಳನ್ನು ಗುರುತಿಸಿ ಪ್ರಶಸ್ತಿ ನೀಡಲಾಯಿತು.

ಡಾ.ಜಿ.ಪರಮೇಶ್ವರ ಪ್ರಶಂಸೆ: 

ಜನಸಮುದಾಯದಲ್ಲಿ ಸಾಮಾಜಿಕ ಜಾಗೃತಿ, ಅರಿವು ಮತ್ತು ಮಾಧ್ಯಮ ಶಿಕ್ಷಣವನ್ನು ತುಮಕೂರಿನಂತ ಪ್ರದೇಶದಲ್ಲಿ ಮಾಡಿ, ಗುರುತಿಸಿಕೊಳ್ಳಬಹುದು ಎಂಬುದಕ್ಕೆ ಮಾಧ್ಯಮ ಕೇಂದ್ರ ಸಾಕ್ಷಿಯಾಗಿದೆ. ಮಾಧ್ಯಮದ ಮೇಲಿನ ಪ್ರೀತಿ ಮತ್ತು ಇಚ್ಛಾಶಕ್ತಿಯಿಂದಾಗಿ ಮಿಡಿಯಾ ಮತ್ತು ರೇಡಿಯೋ ಕೇಂದ್ರಗಳನ್ನು ಸ್ಥಾಪಿಸಿ, ನೂರಾರು ಗ್ರಾಮೀಣ ವಿದ್ಯಾರ್ಥಿಗಳು ಮಾಧ್ಯಮ ಕ್ಷೇತ್ರದಲ್ಲಿ ಮತ್ತು ಸಿನಿಮಾ ರಂಗದಲ್ಲಿ ಕಾಣಿಸಿಕೊಳ್ಳಲು ನಮ್ಮ ಮಾಧ್ಯಮ ಸಂಸ್ಥೆ ಕಾರಣವಾಗಿದೆ ಎಂಬುದು ಖುಷಿ ಸಂಗತಿ. ದಕ್ಷಿಣ ರಾಜ್ಯಗಳ ಮಟ್ಟದಲ್ಲಿ ಗುರಿತಿಸಲ್ಪಟ್ಟಿರುವ ಶ್ರೀ ಸಿದ್ದಾರ್ಥ ಮಾಧ್ಯಮ ಸಂಸ್ಥೆ ಬದಲಾಗುತ್ತಿರುವ ಮಾಧ್ಯಮ ಜಗತ್ತಿಗೆ ಹೊಸತನದ ಶಿಕ್ಷಣದ ಕಲಿಕೆ ಮತ್ತು ವೃತ್ತಿ ನಿರೀಕ್ಷೆಗಳನ್ನು ಹೆಚ್ಚಿಸಲು ಮುಂದಾಗುತ್ತಿದೆ ಎಂದು ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮತ್ತು ಸಾಹೇ ಕುಲಾಧಿಪತಿಗಳಾದ ಡಾ.ಜಿ.ಪರಮೇಶ್ವರ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಂ ಎಸ್ ರವಿಪ್ರಕಾಶ ರವರು “ಎರಡು ದಶಕಗಳಿಂದ ಮಾಧ್ಯಮ ಕೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರವು ಮಾಧ್ಯವi ರಂಗಕ್ಕೆ ಸಾಕಷ್ಟು ಪ್ರತಿಭಾವಂತರನ್ನು ನೀಡುತ್ತಾ ಬಂದಿದ್ದು ಇಂದು ಕೂಡ ಅದೇ ದಿಕ್ಕಿನಲ್ಲಿ ನಡೆಯುತ್ತಿದೆ. ಇದನ್ನು ಗುರುತಿಸಿರುವ ‘ದಿ ನ್ಯೂ ಇಂಡಿಯನ್ ಟೈಮ್ಸ್’ ಸಂಸ್ಥೆಯು ತಾನು ನೀಡುವ ‘ಟಿ.ಎನ್.ಐ.ಟಿ. ಸೌತ್ ಇಂಡಿಯನ್ ಮೀಡಿಯಾ ಅವಾರ್ಡ್ – 2025’ ರಲ್ಲಿ ‘ಬೆಸ್ಟ್ ಜರ್ನಲಿಸಂ ಕಾಲೇಜ್ ಇನ್ ಕರ್ನಾಟಕ’ (ಕರ್ನಾಟಕದ ಅತ್ಯುತ್ತಮ ಮಾಧ್ಯಮ ಕಾಲೇಜು) ಪ್ರಶಸ್ತಿಯನ್ನು ನೀಡಿರುವುದು ನಮ್ಮ ಸಂಸ್ಥೆಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ’ ಎಂದು ಶ್ಲಾಘಿಸಿದರು. 

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ತಹಸೀಲ್ದಾರ ಕಚೇರಿಗಳಲ್ಲಿ ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರ ಆರೋಪ

"ಜಿಲ್ಲೆಯ ಎಲ್ಲಾ ತಾಲೂಕ ತಹಶೀಲ್ದಾರ್ ಕಚೇರಿ ಹಾಗೂ ಹೋಬಳಿಗಳಲ್ಲಿ ವೃಧ್ಯಾಪ್ಯ ವೇತನ,...

ಜನಮನ ಗೆದ್ದ ತುಮಕೂರು ದಸರಾ ಉತ್ಸವ : ಡಾ. ಜಿ.ಪರಮೇಶ್ವರ

 ತುಮಕೂರು ದಸರಾ ಉತ್ಸವವು ನಾಡಿನಾದ್ಯಂತ ಜನರ ಮನಸ್ಸನ್ನು ಗೆಲ್ಲುವ ಮೂಲಕ ಐತಿಹಾಸಿಕ...

ಶಿವಮೊಗ್ಗ | ಪಾಲಿಕೆಗೆ 19 ಗ್ರಾಮಗಳ ಸೇರ್ಪಡೆಗೆ ಸಿದ್ಧತೆ

ಶಿವಮೊಗ್ಗ, ನಿರೀಕ್ಷೆಯಂತೆಯೇ ತುಮಕೂರು ಮತ್ತು ಶಿವಮೊಗ್ಗ ನಗರ ಪಾಲಿಕೆಗಳ ವ್ಯಾಪ್ತಿ ವಿಸ್ತರಣೆಗೆ...

Download Eedina App Android / iOS

X