ತುಮಕೂರು ಮೆಟ್ರೋ ಯೋಜನೆ ಡಿಪಿಆರ್​ಗೆ ಬಿಡ್ ಕರೆದ ಬಿಎಂಆರ್‌ಸಿಎಲ್

Date:

ಬೆಂಗಳೂರಿನ ನಮ್ಮ ಮೆಟ್ರೋ ಮೊದಲ ಬಾರಿಗೆ ಅಂತರಜಿಲ್ಲೆ ಸಂಪರ್ಕದತ್ತ ಹೆಜ್ಜೆಯಿಡುತ್ತಿದ್ದು, 59.6 ಕಿಮೀ ಹಸಿರು ಮಾರ್ಗ ವಿಸ್ತರಣೆಯ ವಿಸ್ತ್ರತ ಯೋಜನಾ ವರದಿ ತಯಾರಿಸಲು ಬಿಎಂಆರ್‌ಸಿಎಲ್ ಬಿಡ್ ಆಹ್ವಾನಿಸಿದೆ.

- Advertisement -

ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಿರುವ ಈ ಯೋಜನೆಗೆ ನೋಂದಾಯಿಸಿಕೊಳ್ಳುವ ಕಂಪನಿಗಳು 4.5 ಲಕ್ಷ ರೂ ಠೇವಣಿ ಇಡಬೇಕಿದೆ. ಬಿಡ್ ಸಲ್ಲಿಸಲು ನವೆಂಬರ್ 20ರವರೆಗೆ ಗಡುವಿದ್ದು, ನವೆಂಬರ್ 21ರಂದು ಟೆಂಡರ್ ತೆರೆಯುವ ಸಾಧ್ಯತೆಯಿದೆ. ಡಿಪಿಆರ್ ತಯಾರಿಕೆಗೆ ಐದು ತಿಂಗಳ ಅವಧಿ ಕೊಡಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ದಿವಾಳಿ ಕಂಪನಿಗಳ ಬಿಡ್‌ನಲ್ಲಿ ಅದಾನಿಯದ್ದೇ ಮೇಲುಗೈ; ಸಾಲಗಾರರಿಗೆ ₹97,700...

ಭಾರತದ ದಿವಾಳಿ ಹಂತದಲ್ಲಿದ್ದ ಕಂಪನಿಗಳ ಬಿಡ್‌ ಪ್ರಕ್ರಿಯೆಗಳಲ್ಲಿ ಅದಾನಿ ಗ್ರೂಪ್‌ನ ಅಸಾಧಾರಣ ಯಶಸ್ಸಿನ ಹಿಂದೆ ರಹಸ್ಯವೊಂದಿದೆ! ಪ್ರತಿ ಐದರಲ್ಲಿ ಮೂರು ಬಿಡ್‌ಗಳನ್ನು ಗೆದ್ದು, ದೇಶದ ಅತಿ ದೊಡ್ಡ ಕಾರ್ಪೊರೇಟ್ ಸ್ವಾಧೀನದಾರನಾಗಿ ಹೊರಹೊಮ್ಮಿರುವ ಅದಾನಿ...

ಮಾದಾವರ (ಬಿಐಇಸಿ)–ತುಮಕೂರು ಮಾರ್ಗವು ನೆಲಮಂಗಲ, ದಾಬಸ್‌ಪೇಟೆ ಮತ್ತು ಕ್ಯಾತಸಂದ್ರ ಮೂಲಕ ಹಾದು ಹೋಗಲಿದ್ದು, ಯೋಜನೆಯ ಮೊದಲ ಹಂತಕ್ಕೆ 20,649 ಕೋಟಿ ರೂ.ವೆಚ್ಚವಾಗುವ ಅಂದಾಜು ಇದೆ. ಈ ಯೋಜನೆ 2024–25ರ ಕರ್ನಾಟಕ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದ ಪ್ರಮುಖ ಸಾರಿಗೆ ಯೋಜನೆಗಳಲ್ಲಿ ಒಂದಾಗಿದೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಇದು ಆತ್ಮಾವಲೋಕನದ ಕಾಲ ಮಾತ್ರವಲ್ಲ, ಪ್ರಬಲವಾಗಿ ಸಜ್ಜುಗೊಳ್ಳುವ ಸಮಯ!

ಮೆಟ್ರೋ ಲೈನ್ ವಿಸ್ತರಣೆಯಾದಲ್ಲಿ ಒಂದು ದಿಕ್ಕಿನಲ್ಲಿ ಪ್ರತೀ ಗಂಟೆಗೆ ಸುಮಾರು 15 ಸಾವಿರ ಪ್ರಯಾಣಿಕರು ಸಂಚರಿಸುವ ನಿರೀಕ್ಷೆಯಿದೆ. ಮಾದವಾರದ ಬಿಐಇಸಿಯಿಂದ ತುಮಕೂರುವರೆಗೆ ಪ್ರಮುಖವಾಗಿ 26 ಮೆಟ್ರೋ ನಿಲ್ದಾಣಗಳನ್ನು ಬರಲಿದ್ದು, ಎಲ್ಲವೂ ಎಲೆವೆಟೆಡ್‌ ಮಾದರಿಯ ನಿಲ್ದಾಣಗಳಾಗಿವೆ.

ಬೆಂಗಳೂರು – ತುಮಕೂರು ಮೆಟ್ರೋ ಮಾರ್ಗದ ಸಂಭಾವ್ಯ ನಿಲ್ದಾಣಗಳು :

  • ಮಾದಾವರ
  • ಮಾಕಳಿ
  • ದಾಸನಪುರ
  • ನೆಲಮಂಗಲ
  • ವೀವರ್ ಕಾಲೋನಿ
  • ನೆಲಮಂಗಲ ವಿಶ್ವೇಶ್ವರಪುರ
  • ನೆಲಮಂಗಲ ಟೋಲ್‌ಗೇಟ್
  • ಬೂದಿಹಾಳ್
  • ಟಿ. ಬೇಗೂರು
  • ತಿಪ್ಪಗೊಂಡನಹಳ್ಳಿ
  • ಕುಲವನಹಳ್ಳಿ
  • ಮಹಿಮಾಪುರ
  • ಬಿಲ್ಲನ್‌ಕೋಟೆ
  • ಸೋಂಪುರ ಕೈಗಾರಿಕಾ ಪ್ರದೇಶ
  • ದಾಬಸ್‌ಪೇಟೆ
  • ನಲ್ಲಾಯನಪಾಳ್ಯ
  • ಚಿಕ್ಕಹಳ್ಳಿ
  • ಹಿರೇಹಳ್ಳಿ ಕೈಗಾರಿಕಾ ಪ್ರದೇಶ
  • ಪಂಡಿತನಹಳ್ಳಿ
  • ಕ್ಯಾತ್ಸಂದ್ರ ಬೈಪಾಸ್
  • ಕ್ಯಾತ್ಸಂದ್ರ
  • ಎಸ್‌ಐಟಿ (ಸಿದ್ಧಾರ್ಥ ಕಾಲೇಜು)
  • ತುಮಕೂರು ಬಸ್ ನಿಲ್ದಾಣ
  • ಟೂಡಾ ಲೇಔಟ್
  • ನಾಗಣ್ಣ ಪಾಳ್ಯ
  • ಶಿರಾ ಗೇಟ್‌
eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿರಾ | ಭದ್ರಾ ನೀರಿಗಾಗಿ ಬೃಹತ್ ಹೋರಾಟಕ್ಕೆ ಸಿದ್ಧತೆ: ರೈತರು ಒಗ್ಗಟ್ಟಾಗಲು ಕರೆ

ಜೀವನಕ್ಕಾಗಿ ನೀರು, ನೀರಿಗಾಗಿ ನಮ್ಮ ಹೋರಾಟ ಎಂಬ ಘೋಷವಾಕ್ಯದೊಂದಿಗೆ ಶಿರಾ ತಾಲೂಕಿನಲ್ಲಿ...

ತುಮಕೂರು | ನಕಲಿ ವೈದ್ಯರ ವಿರುದ್ಧ ಕ್ರಮಕ್ಕೆ ಜನಪ್ರತಿನಿಧಿಗಳ ಸಹಕಾರ ಅಗತ್ಯ : ಆರೋಗ್ಯ ಸಚಿವ ಯು.ಟಿ. ಖದರ್

 ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.95ರಷ್ಟು ಅಗತ್ಯ ಸವಲತ್ತುಗಳು ಲಭ್ಯವಿದ್ದು, ಯಾವುದೇ ಕೊರತೆಗಳಿದ್ದರೆ...

ತುಮಕೂರು | ರೇಡಿಯೋದಿಂದ ಕ್ಯಾಮೆರಾವರೆಗೆ : ವಿದ್ಯಾರ್ಥಿಗಳ ಕೈಗೆ ಬಂದ ಮಾಧ್ಯಮದ ನೈಜ ಅನುಭವ

ಮೂರು ದಿನಗಳ ಮಾಧ್ಯಮ ಕಾರ್ಯಾಗಾರದಲ್ಲಿ ಸಂದರ್ಶನ, ರೇಡಿಯೋ ಕಾರ್ಯಕ್ರಮ ನಿರ್ಮಾಣ ಹಾಗೂ...

ಮೋಶಾ ಜೋಡಿ ಪ್ರಜಾಪ್ರಭುತ್ವದ ಹತ್ಯೆಗೆ ಸಂಚು ರೂಪಿಸಿದೆ; ಅಭಿಜೀತ್ ದೀಪ್ಕೆ

ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ಚುನಾವಣಾ ಆಯೋಗವು ಸೇರಿ ದೇಶದಲ್ಲಿ...