ತುಮಕೂರು ಹಾಲು ಒಕ್ಕೂಟದಲ್ಲಿ ಹಣಕಾಸು ವಿಭಾಗದ ಅಧಿಕಾರಿ ವಿನಯ್ ಎಂಬುವವರಿಗೆ ಚೇರ್ ನೀಡಿಲ್ಲ ಎಂದು ಚೀಲದ ಮೇಲೆ ಕುಳಿತು ಕೆಲಸ ಮಾಡುವುತ್ತಿರುವುದು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ವಿನಯ್ ಅವರಿಗೆ ಸೂಕ್ತ ಚೇರು, ಟೆಬಲ್, ಕ್ಯಾಬಿನ್ ವ್ಯವಸ್ಥೆ ಮಾಡಿಕೊಡಲಾಗಿದೆ.
ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸನ್ ಮುಂದೆ ನಿಂತು ವಿನಯ್ ಅವರಿಗೆ ಸುಸಜ್ಜಿತ ಚೇಂಬರ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ವಿನಯ್ ಪರಿಸ್ಥಿತಿಯನ್ನರಿತ ತುಮುಲ್ ಎಂಡಿ ಇವತ್ತು ತಾನೇ ವಿನಯ್ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನರಿತು ವಿನಯ್ ಗೆ ಚೆನ್ನಾಗಿರುವ ಚೇಂಬರ್ ವ್ಯವಸ್ಥೆ ಮಾಡಿಸಿಕೊಟ್ಟಿದ್ದಾರೆ. ಅಲ್ಲದೇ ಬೇರೆ ಏನಾದರು ಸಮಸ್ಯೆ ಇದ್ಯಾ ಎಂದು ವಿಚಾರಿಸಿಕೊಂಡಿದ್ದಾರೆ. ಇದೊಂದು ಸಣ್ಣ ವಿಚಾರ, ಕೂತು ಬಗೆಹರಿಸಿಕೊಳ್ಳಬಹುದಿತ್ತು, ನಡೆದೋಗಿದೆ ಇನ್ನು ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ನೋಡಿಕೊಳ್ಳುತ್ತೇವೆ ಜೊತೆಗೆ ವಿನಯ್ ಗೆ ಕಿರುಕುಳ ನೀಡುತ್ತಿದ್ದಾರೆ ಎನ್ನಲಾದ ಮಂಜುನಾಥ್ ಎಂಬ ಅಧಿಕಾರಿ ವಿರುದ್ಧ ಆಡಳಿತ ಮಂಡಳಿ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು ಎಂದು ತುಮುಲ್ ಎಂಡಿ ಶ್ರೀನಿವಾಸನ್ ಈದಿನ ಡಾಟ್ ಕಾಮ್ ಗೆ ಮಾಹಿತಿ ನೀಡಿದರು.

ಈಗಾಗಲೆ ಎಂಡಿಯವರು ನನ್ನನ್ನ ಕರೆಸಿ ಮಾತನಾಡಿದ್ದಾರೆ. ನಡೆದಿದ್ದೆಲ್ಲಾ ನಮ್ಮ ಎಂಡಿ ಆವರ ಬಳಿ ಹೇಳಿದ್ದೇನೆ, ಈಗ ತಾತ್ಕಾಲಿಕವಾಗಿ ಚೇಂಬರ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ನಾಳೆ ಸಂಪೂರ್ಣವಾಗಿ ದೊಡ್ಡ ಟೇಬಲ್ ಹಾಗೂ, ಕುರ್ಚಿಗಳನ್ನು ಕೊಡುತ್ತಾರೆ ಎಂದು ವಿನಯ್ ಹೇಳಿದ್ದಾರೆ