ಬೈಂದೂರು ಕುಂದಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಖಾಸಗಿ ಬಸ್ ಇಲ್ಲದ ಮಾರ್ಗಗಳಲ್ಲಿ ಓಡಿಸಬೇಕು ಎಂದು ಹೋರಾಟ ನಡೆದು ಕೆಲವು ಮಾರ್ಗಗಳಿಗೆ ಪರವಾನಿಗೆ ನೀಡಿದರೂ ಖಾಸಗಿ ಬಸ್ ಮಾಲಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದೆ ಸಾರಿಗೆ ಪ್ರಾಧಿಕಾರ ಈ ಬಗ್ಗೆ ತೆರವುಗೊಳಿಸಲು ಕ್ರಮವಹಿಸಿಲ್ಲ ಎಂದು ಬೈಂದೂರು ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ರಾಜೀವ ಪಡುಕೋಣೆ ಹೇಳಿದರು.
ನ್ಯೂ ಕಂಪ್ರೆನ್ಸಿವ್ ಏರಿಯಾ ಸ್ಕ್ರೀಮ್ 07.03.2019 ರಂತೆ ರಾಜ್ಯ ರಸ್ತೆ ಸಾರಿಗೆಯವರು ರಾಷ್ಟ್ರೀಕೃತ ಯೋಜನೆ ಪರ್ಮಿಟಿಗಾಗಿ ಅರ್ಜಿ ಸಲ್ಲಿಸಿದಾಗ ಸಂಬಂಧಿತ ಪ್ರಾಧಿಕಾರಿಗಳು ಪರವಾನಿಗೆಯನ್ನು ಕಡ್ಡಾಯವಾಗಿ ವಿತರಿಸಬೇಕು ಎಂದು ನ್ಯೂ ಕಂಪ್ರೇಸಿವ್ ಏರಿಯಾ ಸ್ಕ್ರೀಮ್ ನಲ್ಲಿ ದ್ರಡೀಕರಿಸಲಾಗಿದೆ ಆದುದರಿಂದ ಕುಂದಾಪುರ ಬೈಂದೂರು ಗ್ರಾಮೀಣ ಪ್ರದೇಶಗಳಲ್ಲಿ ಕೆಎಸ್ಸಾರ್ಟಿಸಿ ಬಸ್ ಓಡಿಸಲು ಜಿಲ್ಲಾಧಿಕಾರಿಗಳು ಕ್ರಮ ವಹಿಸಬೇಕು ಕಳೆದ ಒಂದು ವರ್ಷದಿಂದ ಅಧಿಕೃತವಾಗಿ ಸಾರಿಗೆ ಪ್ರಾಧಿಕಾರ ಸಭೆ ನಡೆಸಿಲ್ಲ ಆದುದರಿಂದ ಸಾರಿಗೆ ಪ್ರಾಧಿಕಾರ ನಮ್ಮ ಸಂಘಟನೆ ಜೊತೆ ಜಂಟಿ ಸಭೆ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.

ಧರಣಿಯನ್ನುದ್ದೇಶಿಸಿ ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ ಕೆಎಸ್ಸಾರ್ಟಿಸಿ ಬಸ್ ಓಡಿಸಲು ಕಳೆದ ವರ್ಷದಿಂದ ಗ್ರಾಮೀಣ ಭಾಗಗಳಲ್ಲಿ ಸ್ಥಳೀಯವಾಗಿ ಹೋರಾಟಗಳನ್ನು ನಡೆಸಿದರೂ ಪ್ರಾಧೀಕಾರ ಕಡೆಗಣಿಸಿದೆ.
ಜನಪ್ರತಿನಿಧಿಗಳು, ಅಧಿಕಾರಿಗಳು,ಖಾಸಗಿ ಬಸ್ ಮಾಲಕರು ಒಂದಾಗಿ ಅಪವಿತ್ರ ಮೈತ್ರಿಯಿಂದ ಸರಕಾರಿ ಬಸ್ ಓಡಿಸದೇ ಮಹಿಳೆಯರಿಗೆ,ವಿದ್ಯಾರ್ಥಿನಿಯರಿಗೆ ಶಕ್ತಿ ಯೋಜನೆಯಿಂದ ವಂಚಿಸಿದ್ದಾರೆ ಎಂದು ಹೇಳಿದರು. ಖಾಸಗೀ ಬಸ್ ಗಳಲ್ಲಿ ವಿದ್ಯಾರ್ಥಿನಿಯರನ್ನು ಕೊನೆಯಲ್ಲಿ ಬಸ್ ಹತ್ತುವಂತೆ, ಸೀಟುಗಳನ್ನು ಕೊಡದೇ ಸತಾಯಿಸಿಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧರಣಿಯನ್ನುದ್ದೇಶಿಸಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ವಿ ಉಡುಪಿ ಜಿಲ್ಲಾ ಹಂಚು ಕಾರ್ಮಿಕರ ಸಂಘದ ಕಾರ್ಯದರ್ಶಿ ಎಚ್ ನರಸಿಂಹ, ಕ್ರಷಿಕೂಲಿಕಾರ ಸಂಘಟನೆ ನಾಗರತ್ನ ನಾಡ, ಜನವಾದಿ ಮಹಿಳಾ ಸಂಘಟನೆಯ ಶೀಲಾವತಿ, ಡಿವೈಎಫ್ಐ ಕಾರ್ಯದರ್ಶಿ ನಿಸರ್ಗ, ರಾಜೇಶ್ ಪಡುಕೋಣೆ,ದಲಿತ ಹಕ್ಕುಗಳ ಸಮಿತಿ ಮುಖಂಡರಾದ ಸಂಜೀವ ಬಳ್ಕೂರು, ಬಳ್ಕೂರು ಶೋಭ, ನಾಗರತ್ನ ಆರ್, ರೊನಾಲ್ಡ್ ರಾಜೇಶ್ ಕ್ವಾಡ್ರಸ್, ಉಮೇಶ್ ಕುಂದರ್, ನಳಿನಿ ಮೊದಲಾದವರಿದ್ದರು.

ಸ್ಥಳಕ್ಕೆ ಮಾನ್ಯ ಅಪಾರ ಜಿಲ್ಲಾಧಿಕಾರಿ, ಸಾರಿಗೆ ಇಲಾಖೆಯ (RTO) ಅಧಿಕಾರಿಗಳು, KSRTC ಪ್ರಾಧಿಕಾರದ ಅಧಿಕಾರಿಗಳು, ಮನವಿ ಸ್ವೀಕರಿಸಿ ಮಾತಾನಾಡಿ ಅಕ್ಟೋಬರ್ 15 ರಂದು ಸಾರಿಗೆ ಪ್ರಾಧಿಕಾರದ ಜಂಟಿ ಸಭೆಯನ್ನು ನಿಗದಿ ಮಾಡಿ ಹೋರಾಟಗಾರರ ಮುಖಂಡರಿಗೆ ಅಹ್ವಾನ ನೀಡಿದರು ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ ಹಾಗೂ ಗ್ಯಾರಂಟಿ ಯೋಜನೆಯ ಜಿಲ್ಲಾ ಅಧ್ಯಕ್ಷ ರಾದ ಅಶೋಕ್ ಕೊಡವೂರು ಮತ್ತು ಉಪಾಧ್ಯಕ್ಷ ರಾದ ಪ್ರಶಾಂತ್ ಜತ್ತನ್ನ ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿ ಮಾತನಾಡಿದರು.
ಬೈಂದೂರು, ಪಡುಕೋಣೆ, ಆಲೂರು, ಗುಲ್ವಾಡಿ, ಮೊವಾಡಿ, ಹಕ್ಲಾಡಿ, ಕುಂದಬಾರಂದಾಡಿ ಗ್ರಾಮದ ಜನರು, ವಿದ್ಯಾರ್ಥಿಗಳು, ಕಟ್ಟಡ ಕಾರ್ಮಿಕರು, ಹಂಚು ಕಾರ್ಮಿಕರು ಭಾಗವಹಿಸಿದ್ದರು.