ಉಡುಪಿ | ಜಿಲ್ಲೆಯಲ್ಲಿ 70,971 ಮನೆಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪೂರ್ಣ

Date:

Advertisements

ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ 2025-26ನೇ ಸಾಲಿನಲ್ಲಿ ಉಡುಪಿ ಜಿಲ್ಲಾದ್ಯಾಂತ ವಿದ್ಯುತ್ ಸಂಪರ್ಕ ಪಡೆದ ಒಟ್ಟು ಸುಮಾರು 3.55 ಲಕ್ಷ ಮನೆಗಳಿಗೂ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷೆ ಮಾಡುವ ಸಂಬಂಧ ಈಗಾಗಲೇ ಮೆಸ್ಕಾಂ ಇಲಾಖೆ ವತಿಯಿಂದ ಆರ್.ಆರ್.ನಂಬರ್ ಹೊಂದಿರುವ ಮನೆಗಳಿಗೆ ಜಿಯೋ ಟ್ಯಾಗ್ ಸ್ಟಿಕರ್ ಅಳವಡಿಸಲಾಗಿರುತ್ತದೆ.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025 ರ ಮನೆ ಮನೆ ಸಮೀಕ್ಷೆಯನ್ನು ಸೆ.22 ರಿಂದ ಅ.07 ರವೆರಗೆ ಕರ್ನಾಟಕ ರಾಜ್ಯದ ನಾಗರೀಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷಾ ಕಾರ್ಯ ಕೈಗೊಂಡಿದ್ದು, ಗಣತಿದಾರರು ಜಿಲ್ಲೆಯ ನಾಗರೀಕ ಮನೆಗಳಿಗೆ ಭೇಟಿ ನೀಡಿದ ಸಮಯದಲ್ಲಿ ಕುಟುಂಬದ ಪಡಿತರ ಚೀಟಿ, ಆಧಾರ್ ಸಂಖ್ಯೆ, ವಿಶೇಷ ಚೇತನರು ಕುಟುಂಬದಲ್ಲಿದ್ದರೆ ಯು.ಡಿ.ಐ.ಡಿ ಸಂಖ್ಯೆಯನ್ನು ಗಣತಿದಾರರಿಗೆ ನೀಡಬೇಕಾಗಿರುತ್ತದೆ. ಪ್ರತಿ ಕುಟುಂಬದ ಸದಸ್ಯರ ಆಧಾರ್ ಕಾರ್ಡ್ಗಳು ಮೊಬೈಲ್ ನಂಬರ್‌ಗಳಿಗೆ ಲಿಂಕ್ ಆಗಿರುವುದನ್ನು ಖಚಿತಪಡಿಸಿಕೊಳ್ಳುವುದು ಅಗತ್ಯವಾಗಿರುತ್ತದೆ ಹಾಗೂ ಸಮೀಕ್ಷೆ ವೇಳೆ ಇ-ಕೆವೈಸಿ ಆಧಾರ್ ಪ್ರಕ್ರಿಯೆಗಾಗಿ ಒ.ಟಿ.ಪಿ. ಸಂಖ್ಯೆ ಆ ಸದಸ್ಯರ ಆಧಾರ್ ನಂಬರ್‌ಗೆ ಜೋಡಣೆ ಆಗಿರುವ ಮೊಬೈಲ್ ಸಂಖ್ಯೆಗೆ ಬರುತ್ತದೆ. ಒಂದು ವೇಳೆ ಆ ಸದಸ್ಯರು ಮನೆಯಲ್ಲಿಲ್ಲದಿದ್ದರೆ ಕುಟುಂಬದ ಪರವಾಗಿ ಉತ್ತರ ನೀಡುತ್ತಿರುವ ಸದಸ್ಯರ ಫೋನ್ ಮೂಲಕ ಒ.ಟಿ.ಪಿ. ಸಂಖ್ಯೆಯನ್ನು ನೀಡಬೇಕು.

Samikshe photo 11zon

ಈಗಾಗಲೇ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸಂಬಂಧ ಜಿಲ್ಲೆಯ ನಾಗರೀಕರಿಗೆ ಸಿಬ್ಬಂದಿಗಳ ಮೂಲಕ ಮಾದರಿ ನಮೂನೆಯೊಂದಿಗೆ ಮನೆ ಮನೆಗೆ ತೆರಳಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ. ಅದರಂತೆ, ಸಮೀಕ್ಷೆಯನ್ನು ಸೆ.22 ರಿಂದ ಪ್ರಾರಂಭಿಸಿದ್ದು, ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ಈ ಕೆಳಕಂಡಂತೆ ಸಮೀಕ್ಷೆ ಮಾಡಲಾಗಿರುತ್ತದೆ.

ಉಡುಪಿ ತಾಲೂಕಿನಲ್ಲಿ 97,918 ಕುಟುಂಬಗಳು, 844 ಬ್ಲಾಕ್‌ಗಳು, 7,497 ಮನೆಗಳ ಸಮೀಕ್ಷೆ, ಕುಂದಾಪುರ ತಾಲೂಕಿನಲ್ಲಿ 65,791 ಕುಟುಂಬಗಳು, 621 ಬ್ಲಾಕ್‌ಗಳು, 15,341 ಮನೆಗಳ ಸಮೀಕ್ಷೆ, ಕಾರ್ಕಳ ತಾಲೂಕಿನಲ್ಲಿ 57,740 ಕುಟುಂಬಗಳು, 531 ಬ್ಲಾಕ್‌ಗಳು, 12,612 ಮನೆಗಳ ಸಮೀಕ್ಷೆ, ಕಾಪು ತಾಲೂಕಿನಲ್ಲಿ 43,834 ಕುಟುಂಬಗಳು, 403 ಬ್ಲಾಕ್‌ಗಳು, 6,519 ಮನೆಗಳ ಸಮೀಕ್ಷೆ, ಹೆಬ್ರಿ ತಾಲೂಕಿನಲ್ಲಿ 12,939 ಕುಟುಂಬಗಳು, 121 ಬ್ಲಾಕ್‌ಗಳು, 4703 ಮನೆಗಳ ಸಮೀಕ್ಷೆ, ಬ್ರಹ್ಮಾವರ ತಾಲೂಕಿನಲ್ಲಿ 51,139 ಕುಟುಂಬಗಳು, 465 ಬ್ಲಾಕ್‌ಗಳು, 15,513 ಮನೆಗಳ ಸಮೀಕ್ಷೆ ಹಾಗೂ ಬೈಂದೂರು ತಾಲೂಕಿನಲ್ಲಿ 26,410 ಕುಟುಂಬಗಳು, 246 ಬ್ಲಾಕ್‌ಗಳು, 8,786 ಮನೆಗಳ ಸಮೀಕ್ಷೆ, ಮಾಡಲಾಗಿದ್ದು, ಜಿಲ್ಲೆಯಲ್ಲಿ ಇದುವರೆಗೆ 70,971 ಮನೆಗಳ ಸಮೀಕ್ಷೆ ಕಾರ್ಯ ಪೂರ್ಣಗೊಂಡಿರುತ್ತದೆ. ಸಮೀಕ್ಷಾ ಕಾರ್ಯಕ್ಕಾಗಿ 3,158 ಗಣತಿದಾರರನ್ನು ನೇಮಿಸಲಾಗಿದೆ.

ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸೆಪ್ಟಂಬರ್ 22 ರಿಂದ ಜಿಲ್ಲೆಯಾದ್ಯಂತ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಸಮೀಕ್ಷಾ ಕಾರ್ಯವನ್ನು ಕೈಗೊಳ್ಳಲು ಯಡಮೊಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿಯೋಜನೆಗೊಂಡಿದ್ದ ಮಲ್ಲೇಶ್ ರವರು ತಮಗೆ ವಹಿಸಿದ್ದ ಸಮೀಕ್ಷಾ ಕರ್ತವ್ಯವನ್ನು ಕೇವಲ ಮೂರು ದಿನಗಳ ಒಳಗಾಗಿ ಪೂರ್ಣಗೊಳಿಸಿದ್ದು, ಅವರಿಗೆ ಜಿಲ್ಲಾಧಿಕಾರಿಗಳಾದ ಸ್ವರೂಪ ಟಿ.ಕೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಸಮೀಕ್ಷೆ ಕಾರ್ಯವನ್ನು ನಾಗರಿಕರು ತಾವೇ ನೇರವಾಗಿ ಅಥವಾ ಗ್ರಾಮ ಪಂಚಾಯತ್ ಮಟ್ಟದಲ್ಲಿ ಏರ್ಪಡಿಸುವ ಶಿಬಿರದಲ್ಲಿ ಭಾಗವಹಿಸುವ ಮೂಲಕ https://kscbcselfdeclaration.karnataka.gov.in/ ನಲ್ಲಿ ಲಾಗಿನ್ ಆಗಿ ಸಮೀಕ್ಷಾ ಕಾರ್ಯದಲ್ಲಿ ದಾಖಲು ಮಾಡಿಕೊಳ್ಳಬಹುದಾಗಿದ್ದು, ಇದರ ಸದುಪಯೋಗಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ರೈಲು ಹತ್ತುವ ಭರದಲ್ಲಿ ಬ್ಯಾಗ್‌ ಬಿಟ್ಟು ಹೋದ ಪ್ರಯಾಣಿಕ ; ಬ್ಯಾಗ್‌ ಒಪ್ಪಿಸಿದ ಸಿಬ್ಬಂದಿಗಳು

ಶಿವಮೊಗ್ಗ, ರೈಲು ಹತ್ತುವ ಭರದಲ್ಲಿ ಪ್ರಯಾಣಿಕರೊಬ್ಬರು ಶಿವಮೊಗ್ಗ ನಿಲ್ದಾಣದ ಪ್ಲಾಟ್‌ಫಾರಂನಲ್ಲೇ ಮರೆತು...

ಬೀದರ್‌ ಜಿಲ್ಲೆಯಲ್ಲಿ ಪ್ರವಾಹ : ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ

ಬೀದರ ಜಿಲ್ಲೆಯಲ್ಲಿ ಸುರಿದ ಅತಿವೃಷ್ಟಿ ಹಾಗೂ ಮಾಂಜ್ರಾ ನದಿ ಮತ್ತು ಕಾರಂಜಾ...

ಉಡುಪಿ | ಜನಸಾಮಾನ್ಯರ ಆರೋಗ್ಯ ಕಾಪಾಡುತ್ತಿರುವ ಔಷಧ ತಜ್ಞರ ಸೇವೆ ಶ್ಲಾಘನೀಯ : ಪಿ.ವಿ ಭಂಡಾರಿ

ಜನಸಾಮಾನ್ಯರ ದೃಷ್ಟಿಯಲ್ಲಿ ವೈದ್ಯರಾಗಿ, ನಿರಂತರ ಸೇವೆ ಸಲ್ಲಿಸುತ್ತಾ ಜನರ ಅರೋಗ್ಯ ಹಾಗೂ...

ವಿಜಯಪುರ | ವಿದ್ಯಾರ್ಥಿಗಳ ಹೋರಾಟಕ್ಕೆ ಸಂದ ಜಯ; ಅತಿಥಿ ಉಪನ್ಯಾಸಕರ ನೇಮಕಾತಿಗೆ ಸರ್ಕಾರ ಅಸ್ತು

ರಾಜ್ಯದಲ್ಲಿ ಪದವಿ ಕಾಲೇಜುಗಳು ಆರಂಭವಾಗಿ ತಿಂಗಳುಗಳು ಕಳೆದರೂ ಅತಿಥಿ ಉಪನ್ಯಾಕರ ನೇಮಕಾತಿ...

Download Eedina App Android / iOS

X