ಛತ್ತೀಸ್ತಢ ರಾಜ್ಯದಲ್ಲಿ ಮೂರು ಕ್ರೈಸ್ತ ಧರ್ಮದ ಭಗಿನಿಯರನ್ನು ಬಂಧಿಸಿರುವ ಘಟನೆ ಅತ್ಯಂತ ದುಃಖಕರ ಹಾಗೂ ಖಂಡನೀಯವಾಗಿದೆ. ಧಾರ್ಮಿಕ ಸೇವೆಯಲ್ಲಿ ನಿರತರಾಗಿದ್ದ ಈ ಮಹಿಳೆಯರನ್ನು ಕಾನೂನು ಪ್ರಕ್ರಿಯೆಯ ಹೊರಗೆ ಬಂಧಿಸಿರುವುದರಿಂದ, ಧಾರ್ಮಿಕ ಸ್ವಾತಂತ್ರ್ಯ ಹಾಗೂ ಮಾನವ ಹಕ್ಕುಗಳ ಮೇಲೆ ಗಂಭೀರವಾದ ಪ್ರಶ್ನೆಗಳು ಎದ್ದಿವೆ.
ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆ ಈ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತದೆ. ಕೇಂದ್ರ ಸರ್ಕಾರ ಕೂಡಲೇ ಬಂಧಿತ ಕ್ರೈಸ್ತ ಧರ್ಮಭಗಿನಿಯರಿಗೆ ಸೂಕ್ತ ರಕ್ಷಣೆ ನೀಡಲು ಛತ್ತಿಸ್ಕಡ್ ಸರ್ಕಾರಕ್ಕೆ ನಿರ್ದಶ್ರನ ನೀಡಬೇಕು ಮತ್ತು ಈ ಪ್ರಕರಣದಲ್ಲಿ ತಕ್ಷಣ ನ್ಯಾಯ ಒದಗಿಸಿ ಬಂಧಿತ ಕ್ರೈಸ್ತಧರ್ಮಸೇವಕರನ್ನು ಶೀಘ್ರ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು.
ಧರ್ಮ, ಸಂಸ್ಕೃತಿ ಮತ್ತು ನಂಬಿಕೆಗಳು ನಮ್ಮ ದೇಶದ ಬಹುಮೂಲ್ಯ ಆಸ್ತಿಯಾಗಿವೆ. ಇವುಗಳ ರಕ್ಷಣೆಗೆ ಪ್ರತಿಯೊಬ್ಬರೂ ಬದ್ಧರಾಗಬೇಕು. ಇಂತಹ ಪ್ರಕರಣಗಳು ದೇಶದ ಧರ್ಮನಿರಪೇಕ್ಷತೆ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ಧಕ್ಕೆಯನ್ನುಂಟು ಮಾಡಬಾರದು ಎಂದು ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.