ಉಡುಪಿ | ನ.28 (ನಾಳೆ) ಬೆಳಗ್ಗೆ 7 ರಿಂದ ಮಧ್ಯಾಹ್ನ 3 ರ ವರೆಗೆ ಉಡುಪಿ ನಗರಕ್ಕೆ ಪ್ರವೇಶ ನಿರ್ಬಂಧ

Date:

ಭಾರತದ ಮಾನ್ಯ ಪ್ರಧಾನ ಮಂತ್ರಿಯವರು ನವೆಂಬರ್ 28 ರಂದು ಉಡುಪಿ ಜಿಲ್ಲೆಯ ಶ್ರೀ ಕೃಷ್ಣ ಮಠದಲ್ಲಿ ಹಮ್ಮಿಕೊಂಡಿರುವ ಕರ‍್ಯಕ್ರಮದಲ್ಲಿ ಭಾಗವಹಿಸಲಿರುವ ಹಿನ್ನೆಲೆ, ಸರ‍್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಉಡುಪಿ ನಗರ ವ್ಯಾಪ್ತಿಯಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಮೋಟಾರು ವಾಹನ ಕಾಯ್ದೆ 1988 ರ ನಿಯಮ 115 ಹಾಗೂ ರ‍್ನಾಟಕ ಮೋಟಾರು ವಾಹನಗಳ ನಿಯಾಮವಳಿಗಳು 1989ರ ನಿಯಮ 221(ಎ)(2) & (5) ರನ್ವಯ ನವೆಂಬರ್ 28 ರಂದು ಬೆಳಗ್ಗೆ 6 ಗಂಟೆಯಿಂದ ಅಪರಾಹ್ನ 3 ಗಂಟೆಯ ವರೆಗೆ ಈ ಕೆಳಕಂಡಂತೆ ವಾಹನಗಳ ಸಂಚಾರ ನಿಷೇಧಿಸಿ ಮತ್ತು ಬದಲಿ ಮಾರ್ಗದಲ್ಲಿ ಸಂಚರಿಸುವ ಕುರಿತು ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಅದೇಶಿಸಿರುತ್ತಾರೆ.

- Advertisement -

ಕಾರ್ಯಕ್ರಮಕ್ಕೆ ಬರುವ ವಾಹನಗಳು: ಕುಂದಾಪುರದಿಂದ ಬರುವ ವಾಹನಗಳು ಸಿಲಾಸ್ ಶಾಲೆಯ ಪರ‍್ಕಿಂಗ್ ಸ್ಥಳದಲ್ಲಿ ಪಾರ್ಕ್‌ ಮಾಡಬೇಕು. ಕುಂದಾಪುರದಿಂದ ಬರುವ ವಾಹನಗಳು ಗುಂಡಿಬೈಲು ಹತ್ತಿರ ಜನರನ್ನು ಇಳಿಸಿ ಯು ಟರ್ನ್ ಆಗಿ ಎಂಜಿಎಂ ಮೈದಾನಕ್ಕೆ ಹೋಗಬೇಕು. ಕಾರ್ಕಳ ಬೆಳ್ವೆ ಮಾರ್ಗವಾಗಿ ಉಡುಪಿಗೆ ಬರುವ ವಾಹನಗಳು ಕ್ರಿಶ್ಚಿಯನ್ ಹೈಸ್ಕೂಲ್, ಪಿಯು ಕಾಲೇಜ್ ಮತ್ತು ಬೈಲೂರು ಮುದ್ದಣ ಎಸ್ಟೇಟ್ ನಲ್ಲಿ ಪರ‍್ಕ್ ಮಾಡಿ ರೋಡ್ ಶೋ ಗೆ ತೆರಳಬೇಕು. ಮಂಗಳೂರು ಕಡೆಯಿಂದ ರೋಡ್ ಶೋ ಗೆ ಬರುವ ವಾಹನಗಳು ಬೈಲೂರು ಮುದ್ದಣ್ಣ ಎಸ್ಟೇಟ್ ನಲ್ಲಿ ಪಾರ್ಕ್ ಮಾಡಬೇಕು.
‌
ಮಲ್ಪೆ ಕಡೆಯಿಂದ ರೋಡ್ ಶೋ ಗೆ ಬರುವ ವಾಹನಗಳು ಶಾಮೀಲಿ ಎದುರು ಗ್ರೌಂಡ್ ನಲ್ಲಿ ಪಾರ್ಕ್ ಮಾಡಬೇಕು. ಕಾರ್ಕಳ ಹೆಬ್ರಿ ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ವಾಹನಗಳು ಶಾರದಾ ಕಲ್ಯಾಣ ಮಂಟಪ ಮಾರ್ಗವಾಗಿ ಬೀಡಿನಗುಡ್ಡೆಯಲ್ಲಿ ಪಾರ್ಕ್ ಮಾಡಬೇಕು. ಮಲ್ಪೆ ಕಡೆಯಿಂದ ರೋಡ್ ಶೋ ಗೆ ಬರುವ ಜನರು ವಾಹನಗಳನ್ನು ವಿವೇಕಾನಂದ ಸ್ಕೂಲ್ ಪರ‍್ಕಿಂಗ್ ನಲ್ಲಿ ಪಾರ್ಕ್ ಮಾಡಬೇಕು.
‌
ಬಸ್ಸುಗಳು ಮತ್ತು ಕಾರುಗಳು: ಕೆ.ಎಸ್.ಆರ್.ಟಿ.ಸಿ ಮತ್ತು ಪ್ರೈವೇಟ್ ಬಸ್‌ಗಳು ಉಡುಪಿ ಬಸ್ ಸ್ಟ್ಯಾಂಡ್‌ಗೆ ಬರುವಂತಿಲ್ಲ. ಅವುಗಳು ನೇರವಾಗಿ ಅಂಬಾಗಿಲು ಮಾರ್ಗವಾಗಿ ಮಣಿಪಾಲ ಅಲೆವೂರು ಮಾರ್ಗವಾಗಿ ಕೊರಂಗ್ರಪಾಡಿ ಮಾರ್ಗವಾಗಿ ಬಲೈಪಾದೆಯಾಗಿ ಚಲಿಸಬೇಕು. ಮಲ್ಪೆಯಿಂದ ಮಂಗಳೂರು ಕಡೆಗೆ ಹೋಗುವ ವಾಹನಗಳು ಪಡುಕೆರೆ ಪಿತ್ರೋಡಿ, ಉದ್ಯಾವರ ಮರ‍್ಗವಾಗಿ ಚಲಿಸಬೇಕು. ಮಲ್ಪೆಯಿಂದ ಕುಂದಾಪುರ ಹೋಗುವ ವಾಹನಗಳು ಸಂತೆಕಟ್ಟೆ ಮತ್ತು ನೇಜಾರು ಮುಖೇನಾ ಚಲಿಸಬೇಕು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ತಿಪಟೂರು | ಕೊಬ್ಬರಿ ವ್ಯಾಪಾರದಲ್ಲಿ ಅಂಡರ್ ಬಿಲ್ಲಿಂಗ್ ಆಟ;...

ತಿಪಟೂರು ಕೊಬ್ಬರಿ ವ್ಯಾಪಾರದಲ್ಲಿ ಅಂಡರ್ ಬಿಲ್ಲಿಂಗ್ ಆಟ ಜೋರಿದೆ. ಟೆಂಡರ್ ದರ ಒಂದಾದರೆ, ಸುತ್ತಮುತ್ತಲಿನ ಮಾರುಕಟ್ಟೆಗಳಲ್ಲಿ ನೇರ ಖರೀದಿ (URD) ಮತ್ತು ರವಾನೆ ಕೊಬ್ಬರಿ ಖರೀದಿಗೆ ಮತ್ತೊಂದು ಬೆಲೆ ನಿಗದಿಯಾಗಿದೆ. ಅಂಡರ್ ಬಿಲ್ಲಿಂಗ್...

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

ಮಂಗಳೂರಿನಿಂದ ಕುಂದಾಪುರ ಕಡೆಗೆ : ಕಟಪಾಡಿಯಿಂದ-ಮಣಿಪುರ-ದೆಂದೂರಕಟ್ಟೆ ರಾಂಪುರ-ಅಲೆವೂರು, ಗುಡ್ಡೆ ಅಂಗಡಿ-ಮಣಿಪಾಲ-ಆರ್‌ಎಸ್‌ಬಿ ಸಭಾಭವನ-ಸಿಂಡಿಕೇಟ್ ಸರ್ಕಲ್‌, ಕಾಯಿನ್ ಸರ್ಕಲ್-ಪೆರಂಪಳ್ಳಿ-ಅಂಬಾಗಿಲು ಪೆರಂಪಳ್ಳಿ ಕ್ರಾಸ್- ಅಂಬಾಗಿಲು ಓಊ 66 ಮುಖಾಂತರ ಚಲಿಸಬೇಕು. ಕಟಪಾಡಿ ಉದ್ಯಾವರ ಕಡೆಯಿಂದ ಬಂದ ವಾಹನಗಳು-ಬಲೈಪಾದೆ-ಗುಡ್ಡೆ ಅಂಗಡಿ ಕೊರಂಗ್ರಪಾಡಿ ಕ್ರಾಸ್-ಕೊರಂಗ್ರಪಾಡಿ-ಕುಕ್ಕಿಕಟ್ಟೆ- ಜೋಡು ರಸ್ತೆ ಅಲೆವೂರು ಗುಡ್ಡೆ, ಅಂಗಡಿ-ಮಣಿಪಾಲ- ಸಭಾ ಭವನ-ಸಿಂಡಿಕೇಟ್ ಸರ್ಕಲ್‌ -ಕಾಯಿನ್ ರ‍್ಕಲ್-ಪೆರಂಪಳ್ಳಿ-ಅಂಬಾಗಿಲು ಪೆರಂಪಳ್ಳಿ ಕ್ರಾಸ್-ಅಂಬಾಗಿಲು ಓಊ 66 ಮುಖಾಂತರ ಚಲಿಸಬೇಕು.

ಕುಂದಾಪುರದಿಂದ-ಮಂಗಳೂರು ಕಡೆಗೆ : ಅಂಬಾಗಿಲು ಎನ್ ಹೆಚ್ 66- ಅಂಬಾಗಿಲು ಪೆರಂಪಳ್ಳಿ ಕ್ರಾಸ್- ಪೆರಂಪಳ್ಳಿ- ಕಾಯಿನ್ ರ‍್ಕಲ್- ಸಿಂಡಿಕೇಟ್ ರ‍್ಕಲ್-ಮಣಿಪಾಲ ಸಭಾ ಭವನ-ಅಲೆವೂರು ಗುಡ್ಡೆ ಅಂಗಡಿ-ರಾಂಪುರ-ದೆಂದುರ್‌ಕಟ್ಟೆ-ಮಣಿಪುರ-ಕಟಪಾಡಿ ಮುಖಾಂತರ ಚಲಿಸಬೇಕು.

ಮಂಗಳೂರಿನಿಂದ ಮಲ್ಪೆ ಕಡೆಗೆ : ಓಊ 66 ಕಿಯಾ ಶೋ ರೂಂ ಉದ್ಯಾವರ ಜಂಕ್ಷನ್-ಉದ್ಯಾವರ ಪೇಟೆ-ಪಿತ್ರೋಡಿ-ಸಂಪಿಗೆ ನಗರ ಕುತ್ಪಾಡಿ-ಕಡೆಕಾರು-ಕಿದಿಯೂರು-ಮಲ್ಪೆ ಮುಖಾಂತರ ಚಲಿಸಬೇಕು. ಅಂದು ಬೆಳಿಗ್ಗೆ 07.00 ಗಂಟೆಯಿಂದ ಮದ್ಯಾಹ್ನ 03.00 ಗಂಟೆಯವರೆಗೆ ಯಾವುದೇ ವಾಹನಗಳು ಕರಾವಳಿ ಕಡೆಯಿಂದ ಉಡುಪಿ ಸಿಟಿ ಬಸ್ ನಿಲ್ದಾಣ ಮತ್ತು ಉಡುಪಿ ಸಿಟಿ ಕಡೆಗೆ ಬರುವಂತಿಲ್ಲ ಎಂದು ಜಿಲ್ಲಾಧಿಕಾರಿಗಳ ಕಛೇರಿ ಪ್ರಕಟಣೆಯಲ್ಲಿ ತಿಳಿಸಿದೆ.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಜಿಲ್ಲಾ ಶೋಟೊಕಾನ್ ಕರಾಟೆ ಪಟುಗಳು ರಾಜ್ಯಮಟ್ಟಕ್ಕೆ ಆಯ್ಕೆ

ಶಿವಮೊಗ್ಗ ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಮತ್ತು...

ರೈತರ ಬೆನ್ನಿಗೆ ರಾಜ್ಯ ಸರ್ಕಾರ: ಸಚಿವ ಚಲುವರಾಯಸ್ವಾಮಿ ಭರವಸೆ

ರೈತರ ಸಮಸ್ಯೆಗಳಿಗೆ ಸ್ಪಂದಿಸುವುದರಿಂದ ರಾಜ್ಯ ಸರ್ಕಾರ ಹಿಂದೆ ಸರಿಯುವುದಿಲ್ಲ. ರೈತರ ಹಿತ...

ಬಾಗಲಕೋಟೆ | 77 ಪ್ರಕರಣ ದಾಖಲು, 53 ವಾಹನ ಜಪ್ತಿ; 104 ಆರೋಪಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ

ಬಡವರು ಮತ್ತು ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ತಲುಪಬೇಕಾದ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ...

ಹಾವೇರಿ | ಬರಪೀಡಿತ ಜಿಲ್ಲೆಯ ರೈತರಿಗೆ ಎಕರೆಗೆ ₹30,000 ಪರಿಹಾರ ನೀಡಲು ರೈತರು ಆಗ್ರಹ

"ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಗಾರು ಮಳೆ ಕೈಕೊಟ್ಟಿದ್ದರಿಂದ, ಹಿಂಗಾರು ಬಿತ್ತನೆಯೂ ಕಷ್ಟವಾಗಿದೆ....