ಉಡುಪಿ ನಗರದ ಕುಕ್ಕಿಕಟ್ಟೆ ಮಾರ್ಪಳ್ಳಿ ರೈಲು ಹಳಿಯ ಬಳಿ, ಸಾವನಪ್ಪಿರುವ ಅಪರಿಚಿತ ವ್ಯಕ್ತಿಯ ಶವವು ಗುರುವಾರ ಕಂಡುಬಂದಿದೆ. ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದೆ. ಚಲಿಸುತ್ತಿರುವ ರೈಲು ಬಡಿದ ರಭಸಕ್ಕೆ ಮೃತದೇಹ ಚರಂಡಿಗೆ ಎಸೆಯಲ್ಪಟ್ಟಿದ್ದು. ಮೃತ ವ್ಯಕ್ತಿಯ ಹೆಸರು ವಿಳಾಸ ತಿಳಿದುಬಂದಿಲ್ಲ.
ಸಮಾಜಸೇವಕ ನಿತ್ಯಾನಂದ ಒಳಕಾಡುವರು, ಮೃತ ದೇಹವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ತಮ್ಮ ಅಂಬುಲೆನ್ಸ್ ವಾಹನದಲ್ಲಿ ಸಾಗಿಸಿ ರಕ್ಷಿಸಿಡುವ ವ್ಯವಸ್ಥೆಗೊಳಿಸಿದ್ದಾರೆ. ಮೃತ ವ್ಯಕ್ತಿಯ ವಾರಸುದಾರರು, ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರ ಅಥವಾ ನಗರ ಪೋಲಿಸ್ ಠಾಣೆಯನ್ನು ಸಂಪರ್ಕಿಸವಂತೆ ಸೂಚಿಸಲಾಗಿದೆ.

ರೈಲ್ವೇ ಆರ್ ಪಿ ಎಫ್ ಸುಧೀರ್ ಶೆಟ್ಟಿ, ಆರ್ ಪಿ ಎಫ್ ಅಪರ್ಣಾ, ನಗರ ಪೋಲಿಸ್ ಠಾಣೆಯ ಎಸ್ ಐ ನಾರಾಯಣ್, ಮುಖ್ಯ ಆರಕ್ಷಕ ಸಂತೋಷ್‌ಶೆಟ್ಟಿ ಘಟನಾ ಸ್ಥಳದಲ್ಲಿದ್ದು ಮಹಜರು ಪ್ರಕ್ರಿಯೆ ನಡೆಸಿದ್ದಾರೆ.