ಉಡುಪಿ ನಗರದ ರಾಷ್ಟ್ರೀಯ ಹೆದ್ದಾರಿ 66 ರ ಸಂತೆಕಟ್ಟೆ ಬಳಿ ಖಾಸಗಿ ಬಸ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದ್ದು. ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಉಡುಪಿ ಕಡೆಯಿಂದ ದಾವಣಗೆರೆಗೆ ಕುಂದಾಪುರ ಮಾರ್ಗವಾಗಿ ಹೋಗುತ್ತದೆ ಖಾಸಗಿ ಬಸ್, ಸಂತೆಕಟ್ಟೆಯ ರೋಬೋಸಾಪ್ಟ್ ಬಳಿ ಇರುವ ಡಿವೈಡರ್ ಗೆ ಯೂ ಟರ್ನ್ ಮಾಡುತ್ತಿದೆ ಕ್ರಿಸ್ಟ ಫಾರ್ಚೂನರ್ ಕಾರ್ ಗೆ ನಡುವೆ ಡಿಕ್ಕಿ ಸಂಭವಿಸಿದೆ. ಘಟನೆಯಿಂದ ಕಾರು ಮತ್ತು ಬಸ್ ಜಖಂ ಗೊಂಡಿದ್ದು, ಕಾರಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಎಸ್ ಐ ಪ್ರಕಾಶ್ ಎಸ್ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.