ಉಡುಪಿ | ಸಂವಿಧಾನದ ಚೌಕಟ್ಟಿನಲ್ಲಿ ಬದುಕಿ ಸಮಾಜಕ್ಕೆ ತಮ್ಮಿಂದಾಗ ಕೊಡುಗೆ ನೀಡಬೇಡಿ : ಎಸ್‌ ಪಿ ಹರಿರಾಂ ಶಂಕರ್

Date:

Advertisements

ಅಂದು ವಾಲ್ಮೀಕಿ ಮಹರ್ಷಿಗಳು ಮೇರು ಕೃತಿಯಾದ ರಾಮಾಯಣವನ್ನು ರಚಿಸಿದ್ದರೆ, ಇಂದಿನ ಕಾಲಘಟ್ಟದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ವಾಲ್ಮೀಕಿ ಮಹರ್ಷಿಗಳು ತಮ್ಮ ಪೂರ್ವಾಶ್ರಮದ ಅಸಾಮಾಜಿಕ ಕಾರ್ಯಗಳನ್ನು ತ್ಯಜಿಸಿ ಜ್ಞಾನಿಗಳಾಗಿ ಬದುಕಿ ಸಮಾಜಕ್ಕೆ ರಾಮಾಯಣವನ್ನು ನೀಡಿದಂತೆ, ಯುವಕರು ಕೂಡಾ ಅಡ್ಡದಾರಿ ಹಿಡಿಯದೆ ಸಂವಿಧಾನದ ಚೌಕಟ್ಟಿನಲ್ಲಿ ಬದುಕಿ ಸಮಾಜಕ್ಕೆ ತಮ್ಮಿಂದಾಗ ಕೊಡುಗೆ ನೀಡಬೇಕು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಹೇಳಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಸಂಘಟನೆ ಸಹಯೋಗ ದೊಂದಿಗೆ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿಗಳ ಕೋರ್ಟ್ ಹಾಲ್‌ನಲ್ಲಿ ಇಂದು ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.

ತಪ್ಪಿತಸ್ಥರಿಗೆ ಶಿಕ್ಷೆ ನೀಡುವುದಕ್ಕಿಂತಲೂ ಅವರ ವ್ಯಕ್ತಿತ್ವವನ್ನು ಪರಿವರ್ತಿಸಿ ಒಳ್ಳೆಯ ಬದುಕನ್ನು ನೀಡುವುದು ಸಂವಿಧಾನದ ಆಶಯ ಕೂಡಾ. ವಾಲ್ಮೀಕಿ ಮಹರ್ಷಿಗಳು ಪರಿವರ್ತನೆಯಿಂದ ಬದುಕಿನಲ್ಲಿ ಔನತ್ಯವನ್ನು ಏರಬಹುದು ಎಂಬುದಕ್ಕೆ ಅತ್ಯುತ್ತಮ ನಿದರ್ಶನ ಎಂದು ಹರಿರಾಂ ಶಂಕರ್ ನುಡಿದರು. ವಾಲ್ಮೀಕಿ ಜಯಂತಿಯನ್ನು ಉದ್ಘಾಟಿಸಿ, ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಶಾಸಕ ಯಶಪಾಲ್ ಸುವರ್ಣ, ಮಹರ್ಷಿ ವಾಲ್ಮೀಕಿ ವಿಶ್ವ ಕಂಡ ಶ್ರೇಷ್ಠ ಕವಿ. ತಮ್ಮ ಜ್ಞಾನದಿಂದ ಅತ್ಯಂತ ಶ್ರೇಷ್ಠ ಕಾವ್ಯವನ್ನು ರಚಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಆದಿ ಕವಿ ವಾಲ್ಮೀಕಿ ಮಹರ್ಷಿಗಳ ಜೀವನ ಎಲ್ಲರಿಗೂ ಪ್ರೇರಣಾದಾಯಕ ಎಂದರು.

Advertisements
ggga

ರಾಮಾಯಣ ರಾಮನ ಆದರ್ಶಗಳನ್ನು ಸಾರುವ ಗ್ರಂಥ. ಇಡೀ ಜಗತ್ತಿನ ಮನಸನ್ನು ಗೆದ್ದ ಮಹಾ ಕಾವ್ಯವನ್ನು ರಚಿಸಿದ ವಾಲ್ಮೀಕಿ ಮಹರ್ಷಿಗಳ ಆಚಾರ-ವಿಚಾರಗಳನ್ನು ಇಂದಿನ ಯುವಜನತೆಗೆ ತಿಳಿಸಿಕೊಡುವ ಅಗತ್ಯವಿದೆ. ವಾಲ್ಮೀಕಿ ಮಹರ್ಷಿಗಳ ಹೆಸರಿನಲ್ಲಿ ಜಾರಿಯಾಗಿರುವ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ನಡೆಯಬೇಕಾಗಿದೆ ಎಂದರು.

ಉಡುಪಿಯ ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಮಾತನಾಡಿ, ಭಾರತೀಯ ಸಮಾಜದಲ್ಲಿ ಕಂಡುಬರುವ ಸರ್ವಶ್ರೇಷ್ಠ ಗ್ರಂಥಗಳೆಂದರೆ ಅದು ರಾಮಾಯಣ ಮತ್ತು ಮಹಾಭಾರತ. ಈ ಮಹಾಕಾವ್ಯಗಳು ಜಗತ್ತಿನ ಎಲ್ಲಾ ಕಾವ್ಯಗಳಿಗೆ ಪ್ರೇರಣಾದಾಯಿಯಾಗಿವೆ. ರಾಮಾಯಣ ತ್ಯಾಗವೇ ಜೀವನ ಎನ್ನುವ ಮಹತ್ವದ ಸಂದೇಶವನ್ನು ಸಾರುತ್ತದೆ.ಈ ಗ್ರಂಥಗಳು ಆದರ್ಶಪ್ರಾಯ ವಾಗಿದ್ದು, ಇಂದಿಗೂ ಪ್ರಸ್ತುತತೆಯನ್ನು ಉಳಿಸಿಕೊಂಡಿವೆ ಎಂದರು.

ಕಾರ್ಕಳ ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಪ್ರಕಾಶ್ ನಾಯ್ಕ್ ಅವರು ಮಹರ್ಷಿ ವಾಲ್ಮೀಕಿ ಕುರಿತು ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಹಾಗೂ ಹತ್ತನೇ ತರಗತಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಐಟಿಡಿಪಿ ಯೋಜನಾ ಸಮನ್ವಯಾಧಿಕಾರಿ ನಾರಾಯಣ ಸ್ವಾಮಿ ಸ್ವಾಗತಿಸಿ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಅ. 9ರಿಂದ ವಿಮಾನ ನಿಲ್ದಾಣದ ಮುಖ್ಯದ್ವಾರದಲ್ಲಿ ಅನಿರ್ದಿಷ್ಟವಧಿ ಧರಣಿ

ಶಿವಮೊಗ್ಗ, ತಾಲೂಕಿನ ನಿಧಿಗೆ ಹೋಬಳಿ ಸೋಗಾನೆ ಗ್ರಾಮದ ವಿಮಾನ ನಿಲ್ದಾಣಕ್ಕೆ ಜಮೀನು...

ಕೊರಟಗೆರೆ | ರಾಮಾಯಣ ಮಹಾಕಾವ್ಯ ಬೇರೆ ದೇಶದಲ್ಲಿಯೂ ಪ್ರಚಲಿತದಲ್ಲಿದೆ : ಗೋಪಿನಾಥ್

ನಿಸರ್ಗದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಮಹರ್ಷಿ ವಾಲ್ಮೀಕಿ ಅವರಲ್ಲಿ ಕವಿತ್ವ ಭಾವನೆ...

ವೀಲ್ ಚೇರ್ ಬ್ಯಾಸ್ಕೆಟ್ ಬಾಲ್ ರಾಜ್ಯ ತಂಡಕ್ಕೆ ಗುಬ್ಬಿಯ ಗಂಗರಾಜು ಆಯ್ಕೆ

 ಗೋವಾ ರಾಜ್ಯದಲ್ಲಿ ನಡೆದಿರುವ ಇಂಟರ್ ನ್ಯಾಷನಲ್ ಪರ್ಪಲ್ ಫೆಸ್ಟ್ 2025 ಹಿನ್ನಲೆ...

ಗುಬ್ಬಿ | ಮಹರ್ಷಿ ವಾಲ್ಮೀಕಿ ಅವರ ಸನ್ಮಾರ್ಗ ಪ್ರಸ್ತುತ ಔಚಿತ್ಯವಿದೆ : ಶಾಸಕ ಎಸ್.ಆರ್.ಶ್ರೀನಿವಾಸ್

 ಸಮಾಜಕ್ಕೆ ಕೊಡುಗೆ ನೀಡಿದ ಗಣ್ಯರ ಜನ್ಮ ದಿನವನ್ನು ಒಂದು ಸಮಾಜಕ್ಕೆ ಸೀಮಿತ...

Download Eedina App Android / iOS

X