ಖಾಸಗಿ ಬಸ್‌ಗಳ ಮುಖಾಮುಖಿ ಢಿಕ್ಕಿ : ಮೂವರ ಸ್ಥಿತಿ ಗಂಭೀರ, 28 ಮಂದಿಗೆ ಗಾಯ

Date:

ಎರಡು ಖಾಸಗಿ ಬಸ್‌ಗಳು ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಮೂವರು ಗಂಭೀರ ಸಹಿತ ಒಟ್ಟು 28 ಮಂದಿ ಪ್ರಯಾಣಿಕರು ಗಾಯಗೊಂಡ ಘಟನೆ ಹೆಮ್ಮಾಡಿ-ಮೂವತ್ತುಮುಡಿ ಸಮೀಪದ ಅರಾಟೆ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರವಿವಾರ ಮುಂಜಾನೆ ಸುಮಾರು 6.45ರ ಸುಮಾರಿಗೆ ನಡೆದಿದೆ.

- Advertisement -

ಗಂಭೀರವಾಗಿ ಗಾಯಗೊಂಡವರನ್ನು ಪೆರ್ಡೂರು ನಿವಾಸಿ ಸಂತೋಷ್ ಶೆಟ್ಟಿ, ಪಡುಕೋಣೆ ನಿವಾಸಿ ವಿಟ್ಠಲ್ ಹೆಬ್ಬಾರ್ ಹಾಗೂ ಉಳ್ತೂರು ನಿವಾಸಿ ಸುಧಾಕರ್ ಎಂದು ಗುರುತಿಸಲಾಗಿದೆ. ಇವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಗಾಯಾಳುಗಳ ಪೈಕಿ 20 ಮಂದಿಯನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ಹಾಗೂ ಮೂವರನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ ಕೆಲವು ಮಂದಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಕುರಿತು ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೇಮಾನಂದ ಅವರು ಆಸ್ಪತ್ರೆಗಳಿಗೆ ಭೇಟಿ ನೀಡಿ ಮಾಹಿತಿ ನೀಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ಹನಿ ನೀರಿಗೂ ಪರದಾಡುತ್ತಿರುವ ದಣ್ಣೂರು...

ಎರಡು ನಳಗಳ ಮುಂದೆ ಖಾಲಿ ಕೊಡ ಹಿಡಿದು ಗಂಟೆಗಟ್ಟಲೆ ಕಾಯುವ ಮಹಿಳೆಯರು; ಬೆಳೆ ನಷ್ಟ, ಜಾನುವಾರು ಮಾರಾಟ, ಉದ್ಯೋಗದ ಕೊರತೆಯಿಂದ ಗ್ರಾಮ ತೊರೆಯುತ್ತಿರುವ ಕುಟುಂಬಗಳು ಒಂದು ಕೊಡ ನೀರಿಗಾಗಿ ಮನೆಮನೆಯ ಮುಂದೆ ಕಾಯಬೇಕು....

‘ನನ್ನೊಳಗೆ ನೀವೊ ನಿಮ್ಮೊಳಗೆ ನಾನೊ’

ಲೇಹ್ ಲಡಾಕಿನ ಪರ್ವತ ಶ್ರೇಣಿಗಳ ನಡುವೆ ನಮ್ಮ ಕಾರು ನಿಧಾನವಾಗಿ ಸಾಗುತ್ತಿತ್ತು. ಬೇರೆ ಬೇರೆ ಬಣ್ಣಗಳ ಪರ್ವತ ಶಿಖರಗಳು, ಕೆಳಗಡೆ ಕಿಲೋಮಿಟರ್ ಉದ್ದದ ಕಿರಿದಾದ ರಸ್ತೆ, ಪಕ್ಕದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಕಾಣುವ...

ಕಾರ್ಪೊರೇಟ್‌ ಕಾಳಗ | ಮಸ್ಕ್‌ನ ಸ್ಟಾರ್‌ಲಿಂಕ್ ಮಣಿಸಿ ಅಂಬಾನಿಯ...

ಎಲಾನ್ ಮಸ್ಕ್ ಒಡೆತನದ ‘ಸ್ಟಾರ್‌ಲಿಂಕ್’ ಉಪಗ್ರಹ ಇಂಟರ್ನೆಟ್ ಭಾರತಕ್ಕೆ ಕಾಲಿಡುತ್ತಿದ್ದಂತೆ ರಿಲಯನ್ಸ್ ಜಿಯೋದ ಮಾರುಕಟ್ಟೆ ಏಕಸ್ವಾಮ್ಯಕ್ಕೆ ಭಾರಿ ಪೈಪೋಟಿ ಎದುರಾಗುವಂತೆ ಕಾಣುತ್ತಿದೆ. ಈ ಬೆನ್ನಲ್ಲೇ, ರಾಷ್ಟ್ರೀಯ ಭದ್ರತೆ ಮತ್ತು ದತ್ತಾಂಶ ಸುರಕ್ಷತೆಯ ನೆಪವೊಡ್ಡಿ...

ಘಟನೆ ವಿವರ: ಕುಂದಾಪುರದಿಂದ ಬೈಂದೂರು ಕಡೆ ಹೋಗುತ್ತಿದ್ದ ಶ್ರೀ ದುರ್ಗಾಂಬ ಬಸ್‌ಗೆ ಮಂತ್ರಾಲಯದಿಂದ ಮಂಗಳೂರು ಕಡೆ ವೇಗವಾಗಿ ಬರುತ್ತಿದ್ದ ಗಣೇಶ್ ಬಸ್ ಮುಖಾಮುಖಿಯಾಗಿ ಢಿಕ್ಕಿ ಹೊಡೆಯಿತ್ತೆನ್ನ ಲಾಗಿದೆ. ಢಿಕ್ಕಿಯ ರಭಸಕ್ಕೆ ಶ್ರೀದುರ್ಗಾಂಬ ಬಸ್‌ನ ಮುಂಭಾಗ ನಜ್ಜುಗುಜ್ಜಾಗಿದ್ದು, ಬಸ್ ತಿರುಗಿ ಹಿಂಬದಿಯಿಂದ ಬರುತ್ತಿದ್ದ ಪಿಕ್‌ಅಪ್ ಗೂಡ್ಸ್ ವಾಹನಕ್ಕೆ ಢಿಕ್ಕಿಯಾಗಿದೆ.

ಇದರ ಪರಿಣಾಮ ಎರಡೂ ಬಸ್‌ಗಳಲ್ಲಿದ್ದ ಚಾಲಕ ಸಾಗರದ ಆನಂದಪುರ ನಿವಾಸಿ ಏಕಾಂತಪ್ಪ, ಬೆಳ್ಮಣ್‌ನ ರಾಜೇಶ್, ಅವರ ಪತ್ನಿ ಚಂದ್ರಿಕಾ, ಮುಳ್ಳಿಕಟ್ಟೆ ನಿವಾಸಿಗಳಾದ ಸವಿತಾ, ಅಕ್ಷಯ್, ಆಯುಷ್, ಅನುಶ್ರೀ, ತಲ್ಲೂರಿನ ಉಮೇಶ್, ತೆಕ್ಕಟ್ಟೆಯ ಮಧುಸೂಧನ್, ಹೊನ್ನಾವರದ ಮಯಾಂಕ್ ಶೇಟ್, ಮಂಜುನಾಥ್ ಶೇಟ್, ಕಂಡ್ಲೂರಿನ ಅಣ್ಣಪ್ಪ ಮೊಗವೀರ, ಕುಂದಾಪುರದ ಗಣೇಶ್, ರವಿ ಪೂಜಾರಿ, ಶಿರಿಯಾರದ ಹರೀಶ್, ಬೈಂದೂರಿನ ಜಯಂತ್, ಕೋಡಿಯ ತಾಹೀರ್, ಹಕ್ಲಾಡಿಯ ಶೀನಾ, ಬೀಜಾಡಿಯ ಪಿಕಪ್ ಚಾಲಕ ಮಹಮ್ಮದ್ ಶಾಹಿದ್ ಹಾಗೂ ನಾಗೂರಿನ ಅಬ್ದುಲ್ ಮಹಮ್ಮದ್ ಗಾಯಗೊಂಡು ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಾಯಾಳುಗಳ ಪೈಕಿ ಕೆಲವರಿಗೆ ಕೈಕಾಲು ಹಾಗೂ ತಲೆಗೆ ತೀವ್ರ ಗಾಯಗಳಾಗಿವೆ. ಕುಂದಾಪುರದ ಸರಕಾರಿ ಆಸ್ಪತ್ರೆಯಲ್ಲಿ ಸಿದ್ದು, ಅಂಜನ್ ಹಾಗೂ ವಿರೇಶ್ ಎಂಬವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಂದು ಗಣೇಶ್ ಬಸ್ ಚಾಲಕ ಶಿವರಾಜ್ ಬಿರಾದಾರ್ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಗಂಗೊಳ್ಳಿಯ ಟೀಮ್ ಎಂ.ಎಚ್.ಐ ಆಪತ್ಬಾಂಧವ ಆಂಬುಲೆನ್ಸ್ ತಂಡದ ಇಬ್ರಾಹಿಂ ಗಂಗೊಳ್ಳಿ, ಅಬ್ರಾರ್ ಹಾಗೂ ಸ್ವಯಂಸೇವಕ ವಿಕಾಸ್ ಎರಡು ಆಂಬುಲೆನ್ಸ್‌ಗಳ ಮೂಲಕ ಗಾಯಾಳು ಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ಹೆಮ್ಮಾಡಿಯ ರಿಕ್ಷಾ ಚಾಲಕರಾದ ಶರತ್, ಕೃಷ್ಣ ಹಾಗೂ ಪ್ರಶಾಂತ್ ಕೂಡ ಸಹಕರಿಸಿದರು.

ಕುಂದಾಪುರ ನಗರ ಠಾಣೆ ಪೊಲೀಸ್ ನಿರೀಕ್ಷಕ ಜಯರಾಮ ಗೌಡ, ಸಂಚಾರ ಠಾಣೆಯ ಎಸ್ಸೈ ಅನೂಪ್ ನಾಯಕ್ ಹಾಗೂ ಸಿಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಿರಂತರ ಅಪಘಾತ: 5 ಮಂದಿ ಮೃತ್ಯು

ನಿಧಾನಗತಿಯಲ್ಲಿ ಸಾಗುತ್ತಿರುವ ಅರಾಟೆಯ ಹಳೆಯ ಸೇತುವೆಯ ದುರಸ್ತಿ ಕಾಮಗಾರಿ ಈ ಅವಘಡಗಳಿಗೆ ಕಾರಣ ವಾಗಿದೆ. ಹಳೆ ಸೇತುವೆಯಲ್ಲಿ ಸಂಚಾರ ಸ್ಥಗಿತಗೊಳಿಸಿ ಎರಡು ವರ್ಷ ಕಳೆದಿದೆ. ಕಟ್ಟು ಕ್ರಾಸ್ ಬಳಿಯಿಂದ ಅರಾಟೆ ಯವರೆಗೆ ಹೊಸ ಸೇತುವೆಯ ಮಾರ್ಗದಲ್ಲಿಯೇ ಎರಡೂ ಕಡೆಗಳ ವಾಹನಗಳನ್ನು ಬಿಡಲಾಗುತ್ತಿದೆ. ಇದರಿಂದ ಆಗಾಗ್ಗೆ ನಿರಂತರ ಅಪಘಾತಗಳು ಸಂಭವಿಸುತ್ತಿದೆ.

ಈವರೆಗೆ 5 ಮಂದಿ ಪ್ರಾಣ ಕಳೆದುಕೊಂಡಿದ್ದು, ಅನೇಕ ಮಂದಿ ಗಾಯಗೊಂಡಿದ್ದಾರೆ. ಕಳೆದ ಅ.12ರಂದು ಬೈಕ್ ಮತ್ತು ಕಾರಿನ ನಡುವೆ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಮೃತಪಟ್ಟಿದ್ದರು. ಕೆಲ ದಿನಗಳ ಹಿಂದೆ ಸಂಚಾರ ಸುರಕ್ಷತೆಗಾಗಿ ಇಲಾಖೆಯು ಅಳವಡಿಸಿದ್ದ ರಿಫ್ಲೆಕ್ಟರ್ ಕೋನ್‌ಗಳು ಭಾರೀ ವಾಹನಗಳ ಸಂಚಾರದಿಂದ ಕಿತ್ತುಹೋಗಿ ದ್ದವು. ಸೇತುವೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ, ರಾಷ್ಟ್ರೀಯ ಹೆದ್ದಾರಿಯ ಎರಡೂ ರಸ್ತೆಗಳಲ್ಲಿ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ಮಾ. ಶಾಸಕ ಎಂ.ಪಿ. ಕುಮಾರಸ್ವಾಮಿ: ದಲಿತರ ಭೂ ಕಬಳಿಕೆ ಆರೋಪ 

ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಶಾಸಕರಾಗಿದ್ದ ಅವಧಿಯಲ್ಲಿ ದಲಿತ ಕುಟುಂಬವೊಂದಕ್ಕೆ ಸೇರಿದ್ದ...

ರಾಮನಗರ | ಡಾ. ಬಂಜಗೆರೆ ಜಯಪ್ರಕಾಶ್‌ ಅವರಿಗೆ ಪ್ರಶಸ್ತಿ ಗೌರವ: ‘ಜನಮುಖಿ ಜೆಪಿ’ ಕಾರ್ಯಕ್ರಮ ಸಫಲ

ಹಿರಿಯ ಸಾಹಿತಿ ಡಾ. ಬಂಜಗೆರೆ ಜಯಪ್ರಕಾಶ್ (ಜೆ.ಪಿ) ಅವರಿಗೆ ಕರ್ನಾಟಕ ಸಾಹಿತ್ಯ...

ಚಿಕ್ಕಮಗಳೂರು | ರಸ್ತೆ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾವು 

ಮೂಡಿಗೆರೆ ತಾಲೂಕಿನ ಹಳೆಕೋಟೆ ಗ್ರಾಮದ ಮುಖ್ಯ ರಸ್ತೆಯಲ್ಲಿ ರಸ್ತೆ ಅಪಘಾತದಲ್ಲಿ ಬೈಕ್...

ಪರಿವಾರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನೂತನ ಪ್ರಧಾನ ಕಚೇರಿ ಉದ್ಘಾಟನೆ

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಅನೇಕ ಪ್ರತಿಷ್ಠಿತ ಹಣಕಾಸು ಸಂಸ್ಥೆಗಳ ತವರೂರಾಗಿದ್ದು,...