ಕಾರವಾರ ಪ್ರಾದೇಶಿಕ ಕೇಂದ್ರದ ಐಸಿಎಆರ್–ಸೆಂಟ್ರಲ್ ಮೆರೈನ್ ಫಿಷರೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (CMFRI) ವಿಜ್ಞಾನಿಗಳ ಕಾಳಜಿ ಹಾಗೂ ನಶಿಸಿ ಹೋಗುತ್ತಿರುವ ಮೀನುಗಳ ಬಗ್ಗೆ ಮೀನುಗಾರರರಲ್ಲಿ ಮೂಡಿಸಿದ ಜಾಗೃತಿಯ ಹಿನ್ನಲೆಯಲ್ಲಿ, ಸಮುದ್ರ ಮೀನುಗಾರಿಕೆಯಲ್ಲಿ ಆಕಸ್ಮಿಕವಾಗಿ ಸೆರೆ ಸಿಕ್ಕ ಅಪರೂಪದ ವೈಡ್‌ನೋಸ್ ಗಿಟಾರ್‌ಫಿಶನ್ನು (Glaucostegus obtusus) ಜೀವಂತವಾಗಿ ಮತ್ತೆ ಸಮುದೃಕ್ಕೆ ಬಿಡಲಾಯಿತು.

2022ರಲ್ಲಿ ತಿದ್ದುಪಡಿಗೊಂಡ ಭಾರತೀಯ ವನ್ಯಜೀವಿ (ಸಂರಕ್ಷಣೆ) ಕಾಯ್ದೆಯ ಅನುಸೂಚಿ–Iರಲ್ಲಿ ಈ ಮೀನಿನ ಪ್ರಜಾತಿಯನ್ನು ಸೇರಿಸಲಾಗಿದೆ. ಈ ಪ್ರಭೇದಗಳ ಸಂಖ್ಯೆ ತೀವ್ರವಾಗಿ ಕುಸಿದಿರುವ ಹಿನ್ನೆಲೆಯಲ್ಲಿ ಈ ಪ್ರಭೇದಗಳನ್ನು ಸಂರಕ್ಷಿಸಲು ಸರ್ಕಾರ ನೂತನ ವನ್ಯಜೀವಿ ಕಾನೂನನ್ನು ಜಾರಿಗೆ ತಂದಿದೆ. ಇತ್ತೀಚೆಗೆ ಮೀನುಗಾರರ ಬಲೆಗೆ ಸಿಕ್ಕಿಬಿದ್ದ ಈ ಗಿಟಾರ್‌ಫಿಶ್‌ಗಳನ್ನು ಸ್ಥಳೀಯ ವಿಜ್ಞಾನಿಗಳಾದ ಐಸಿಎಆರ್–ಸಿಎಮ್‌ಎಫ್‌ಆರ್‌ಐ ಸಿಬ್ಬಂದಿ ಮಧ್ಯಸ್ಥಿಕೆಯಿಂದ ಮೀನುಗಾರರು ಜೀವಂತವಾಗಿಯೇ ಬಿಡುಗಡೆ ಮಾಡಿದ್ದಾರೆ. ಸಮುದ್ರ ತೀರದ ಮೀನುಗಾರ ಸಮುದಾಯದಲ್ಲಿ ಜಾಗೃತಿ ಮೂಡಿಸಿದ ಪರಿಣಾಮವೇ ಇದು ಸಾಧ್ಯವಾಗಿದೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಏಕಕಾಲಕ್ಕೆ ಹೊನ್ನಾವರ-ಅಂಕೋಲಾ ಉಪನೋಂದಣಾಧಿಕಾರಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ
“ಮೀನುಗಾರಿಕೆಯಲ್ಲಿ ಆಕಸ್ಮಿಕವಾಗಿ ಸೆರೆ ಸಿಕ್ಕ ಅಪರೂಪದ ಗಿಟಾರ್‌ಫಿಶ್ ಪ್ರಜಾತಿಗಳನ್ನು ಸಂರಕ್ಷಿಸುವುದು ಅತ್ಯಂತ ಮುಖ್ಯ. ಮೀನುಗಾರರ ಸಹಕಾರದಿಂದ ನಾವು ಈ ಪ್ರಜಾತಿಯನ್ನು ಉಳಿಸಲು ಸಾಧ್ಯವಾಗುತ್ತಿದೆ” ಎಂದು ಡಾ. ಮಹೇಶ್ ವಿ., ಕೃಷಿ ಸಂಶೋಧನಾ ಸೇವೆಯ ವಿಜ್ಞಾನಿ, ಕಾರವಾರ ಪ್ರಾದೇಶಿಕ ಕೇಂದ್ರ, ಐಸಿಎಆರ್–ಸಿಎಮ್‌ಎಫ್‌ಆರ್‌ಐ ಅವರು ತಿಳಿಸಿದರು.