ಉತ್ತರ ಕನ್ನಡ | ಗೋವಾದ ನೇತ್ರಾವಳಿಯಲ್ಲಿ ಸಮೀಕ್ಷೆ ಆರಂಭಿಸಿದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ

Date:

Advertisements

ಕಾರವಾರ ತಾಲ್ಲೂಕು ಕೇಂದ್ರದಿಂದ 70 ಕಿಲೋ ಮೀಟರ್ ದೂರವಿರುವ ಕಮರಗಾಂವ್ ದಟ್ಟಾರಣ್ಯದ ನಡುವೆ ಇದೆ. ಅಲ್ಲಿ ಇಂಟರ್‌ನೆಟ್ ಇರಲಿ, ವಿದ್ಯುತ್‌ ಪೂರೈಕೆ ಕೂಡ ಇಲ್ಲಾ. ಗ್ರಾಮ ಪಂಚಾಯಿತಿ ಕೇಂದ್ರವಾದ ಘೋಟೆಗಾಳಿ ಗ್ರಾಮ ಕೂಡ 16 ಕಿ.ಮೀ. ದೂರವಿದೆ. ಅಲ್ಲಿಗೆ ರಸ್ತೆಯೂ ಸರಿಯಾಗಿಲ್ಲ. ತಾಲೂಕು ಕೇಂದ್ರ ಕಾರವಾರಕ್ಕೆ ಬರಬೇಕು ಎಂದರೆ ಗೋವಾ ರಾಜ್ಯದ ಮೂಲಕ 125 ಕಿ.ಮೀ. ಪ್ರಯಾಣಿಸಿ ಬರಬೇಕು. ಇದು ಕಮರಗಾಂವ ಗ್ರಾಮಸ್ಥರ ನಿತ್ಯದ ಗೋಳು. ಇವರಿಗೆ ಗೋವಾ ರಾಜ್ಯದ ಊರುಗಳೇ ಸಮೀಪ.

ಹಾಗಾಗಿ ಸಮೀಪವಿರುವ ಗೋವಾ ರಾಜ್ಯದ ನೇತ್ರಾವಳಿಯಲ್ಲಿ ಸೋಮವಾರ ಸಮೀಕ್ಷೆಯ ಶಿಬಿರ ಆಯೋಜಿಸಲಾಗಿದೆ ಗೋವಾದಲ್ಲಿ ನಡೆಯುವ ಶಿಬಿರಕ್ಕೆ ಸಿಬ್ಬಂದಿ ಜತೆ ಜಿಲ್ಲಾ ಪಂಚಾಯಿತಿ ಸಿಇಒ ಡಾ. ದಿಲೀಷ ಶಶಿ, ತಹಸೀಲ್ದಾರ ನಿಶ್ಚಲ ನರೋನಾ ಕೂಡ ತೆರಳಲಿದ್ದಾರೆ. ಹಾಗೂ  ವಿದ್ಯುತ್‌ ಸಂಪರ್ಕ ಇಲ್ಲದ ಮನೆಗಳಿಗೆ ಹೆಸ್ಕಾಂ ಸಿಬ್ಬಂದಿ ಯುಎಚ್ ಐಡಿ ಅಂಟಿಸಿದ್ದಾರೆ. ಶನಿವಾರ ಕಾಡು ದಾರಿಯ ಮೂಲಕವೇ ಕಂದಾಯ ಇಲಾಖೆಯ ಅಧಿಕಾರಿಗಳು ಹೋಗಿ ಯುಎಚ್ ಐಡಿ ಇರುವ ಮನೆ ವಿವರ ಹಾಗೂ ವಿದ್ಯುತ್ ಸಂಪರ್ಕ ಇಲ್ಲದೇ ಇರುವ ಮನೆಗಳ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಹಾಗೂ ಸಮೀಕ್ಷೆ ಮಾಡುವಾಗ ಜಿಗಣೆ ಕಾಟದಿಂದ ನರಳಿದ್ದು ಹಾಗೂ ವಿದ್ಯುತ್ ಇಲ್ಲದೆ ಇರುವುದರಿಂದ ಚಾರ್ಜಿಂಗ್ ಬಲ್ಬ್ ಹಿಡಿದು ಸಮೀಕ್ಷೆ ಮಾಡಿದ್ದು ಕಂಡುಬಂದಿದೆ.

ಒಟ್ಟು 32 ಮನೆ ಗ್ರಾಮದಲ್ಲಿರುವುದು. ಮತ ಪಟ್ಟಿಯಲ್ಲಿ ಇರುವವರ ಸಂಖ್ಯೆ 130

ಕಮರಗಾಂವ ಗ್ರಾಮದ ಎಲ್ಲಾ ಮನೆಗಳ ದಾಖಲೆ ಸಂಗ್ರಹ ಮಾಡಲಾಗಿದೆ. ಗ್ರಾಮದಿಂದ ಗೋವಾದ ನೇತ್ರಾವಳಿಗೆ ವಾಹನದ ವ್ಯವಸ್ಥೆ ಮಾಡಿದ್ದು ಅಲ್ಲಿಯೂ ಸಮೀಕ್ಷೆ ಶಿಬಿರ ಆರಂಭಿಸಲ್ಲಿದ್ದೆವೆ ಎಂದು ಕಾರವಾರ ತಹಶಿಲ್ದಾರ ನಿಶ್ಚಲ ನರೋನಾ ಅವರು ತಿಳಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಟ್ಕಳ | ಮುರುಡೇಶ್ವರದಲ್ಲಿ ಯುವಕನ ಪ್ರಾಮಾಣಿಕತೆ; ಕಳೆದುಹೋದ ಬ್ಯಾಗ್‌ ಹಸ್ತಾಂತರ

ಪ್ರಸಿದ್ಧ ಪ್ರವಾಸಿ ತಾಣ ಮುರುಡೇಶ್ವರದಲ್ಲಿ ಮೌಲ್ಯಯುತ ವಸ್ತುಗಳನ್ನು ಕಳೆದುಕೊಂಡಿದ್ದ ಹೈದರಾಬಾದ್ ಪ್ರವಾಸಿಗರಿಗೆ...

ಶಿರಸಿ | ಅರಣ್ಯ ಭೂಮಿ ಸ್ವಾಧೀನಕ್ಕೆ ಸುಪ್ರೀಂ ಕೋರ್ಟ್ ಆದೇಶ – ರಾಜ್ಯ ಸರ್ಕಾರದಿಂದ ವಿಶೇಷ ತನಿಖಾ ತಂಡ ರಚನೆ.

ಸರ್ಕಾರದ ಅಧೀನದಲ್ಲಿರುವ ಅರಣ್ಯ ಭೂಮಿಯನ್ನು ಅನಧಿಕೃತವಾಗಿ ಅರಣ್ಯೇತರ ಚಟುವಟಿಕೆಗೆ ಬಳಸಿಕೊಂಡಿರುವ ಭೂಮಿಯನ್ನು...

ಉತ್ತರ ಕನ್ನಡ | ಕುಂಟುತ್ತಾ ಸಾಗುತ್ತಿರುವ ಸಮೀಕ್ಷೆ; ಅರ್ಧದಷ್ಟು ಸಮೀಕ್ಷೆದಾರರು ಕೆಲಸಕ್ಕೆ ಗೈರು

ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮೂರನೇ ದಿನವೂ...

ಉತ್ತರ ಕನ್ನಡ | ಮಾದಕ ವಸ್ತು ನಿಯಂತ್ರಣಕ್ಕೆ ಪೊಲೀಸರ ಹೊಸ ಕ್ರಮ; ಕ್ಯೂಆರ್ ಕೋಡ್ ಮೂಲಕ ಸುಲಭ ದೂರು ವ್ಯವಸ್ಥೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನೇ ದಿನೇ ತೀವ್ರವಾಗುತ್ತಿರುವ ಮಾದಕ ವಸ್ತು ಬಳಕೆ...

Download Eedina App Android / iOS

X