ವಿಜಯನಗರ | ಸಮಕಾಲೀನ ಕಾವ್ಯಗಳು ನಿವೇದನಾತ್ಮಕವಾಗಿವೆ: ಆರಿಫ್ ರಾಜಾ

Date:

Advertisements

ಸಮಕಾಲೀನ ಕಾವ್ಯಗಳು ನಿವೇದನಾತ್ಮಕವಾಗಿವೆ. ಸಮಕಾಲೀನದಲ್ಲಿ ಭಾಷೆಗಳು ಸಂಕುಚಿತಗೊಳ್ಳುತ್ತಿದ್ದು, ಇವು ಕಣ್ಣಿಗೆ ಕಾಣದ ಹಿಂಸೆಯಾಗಿ ಪರಿವರ್ತನೆಗೊಂಡಿವೆ ಎಂದು ಕವಿ, ಅನುವಾದಕ ಆರಿಫ್ ರಾಜಾ ಅಭಿಪ್ರಾಯಪಟ್ಟರು.

‌ವಿಜಯನಗರದ ಕನ್ನಡ ವಿವಿಯ ಪಂಪ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದಿಂದ ಹಮ್ಮಿಕೊಳ್ಳಲಾಗಿದ್ದ ʼಕವಿತೆಗಳ ಓದು ಹಾಗೂ ಸಂವಾದ ಸಮಕಾಲೀನ ಭಾರತೀಯ ಕಾವ್ಯ ಸಂವೇದನೆಯ ಸ್ವರೂಪʼ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಾವು 90ರ ದಶಕದ ನಂತರ ದಲಿತ ಕಾವ್ಯಗಳ ಸಾಹಿತ್ಯದಲ್ಲಾದ ಏರುಪೇರುಗಳತ್ತ ಗಮನಹರಿಸಬೇಕು. ಕಾವ್ಯಗಳು ಕಲಾತ್ಮಕ ಮೌಲ್ಯಕ್ಕಿಂತ ಆತ್ಮಾವಲೋಕನಕ್ಕೆ ಹೆಚ್ಚು ಒತ್ತು ನೀಡಿದೆ. ಇನ್ನೂ ಅಮೂರ್ತ ಚಿಂತನೆಗೆ ನಾವು ಹೆಚ್ಚು ಹೊತ್ತು ನೀಡಬಾರದು ಎಂದು ನುಡಿಯುತ್ತ, ಹೆದರುವಂತಹ ಲೇಖಕ ಸಮಾಜಕ್ಕೆ ಯಾವುದೇ ಕೊಡುಗೆಗಳನ್ನು ನೀಡುವುದಿಲ್ಲ.‌ ಸಮಕಾಲೀನ ಕಾವ್ಯಗಳು ವಾಸ್ತವವಾಗಿರಬೇಕು” ಎಂದರು.

ಡಾರ್ಜಲಿಂಗ್‌ನ ಕವಿ ಮತ್ತು ಪತ್ರಕರ್ತ ಮನೋಜ್ ಬೋಗಾಟಿ ಅವರು ತಮ್ಮ ‘ಇದು ಶಾಲೆಯಲ್ಲ ಅಡುಗೆ ಮನೆ’ ಮತ್ತು ‘ಅಮೆರಿಕ ಹೆದುರುತ್ತದೆ’ ಎಂಬ ಕಾವ್ಯಗಳ ಮೂಲಕ ತಮ್ಮ ಗೋರ್ಖ ಸಮುದಾಯದ ಬಗ್ಗೆ ಕಾರ್ಯಕ್ರಮದಲ್ಲಿ ಮಾತನಾಡಿ, “ಡಾರ್ಜಲಿಂಗ್‌ನ ಚಹಾ ಜಗತ್ತಿನಾದ್ಯಂತ ತುಂಬಾ ಫೇಮಸ್. ಉತ್ತಮ ಗುಣಮಟ್ಟದ ಚಹಾಕ್ಕೆ ಲಕ್ಷಾಂತರ ರೂಪಾಯಿ ಬೆಲೆ ಸಿಗುತ್ತದೆ. ಆದರೆ ಅದೇ ಚಹಾದ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮಾತ್ರ ಕಡಿಮೆ ಕೂಲಿ ಸಿಗುತ್ತದೆ. ಇಲ್ಲಿಂದ ಆರಂಭವಾದ ತಾರತಮ್ಯ ಸ್ಥಳೀಯರ ಬದುಕು, ಭಾಷೆ, ಸಂಸ್ಕೃತಿಯ ಮೇಲೆ ಪ್ರಭಾವ ಬೀರಿ ಸ್ಥಳೀಯರ ಅಸ್ಮಿತೆಗೆ ಧಕ್ಕೆ ಉಂಟಾಗಿದೆ. ಅನ್ಯ ಭಾಷೆ ಏರಿಕೆಯಿಂದ ಎಲ್ಲ ಕ್ಷೇತ್ರದಲ್ಲಿಯೂ ಬುಡಕಟ್ಟು ಸಮುದಾಯಗಳ ಅನನ್ಯತೆ ಕಣ್ಮರೆಯಾಗಿವೆ ಎಂದಿದ್ದರು” ಎಂದು ತಿಳಿಸಿದರು.

Advertisements
WhatsApp Image 2025 02 13 at 7.25.20 PM 1 1

ಕನ್ನಡ ವಿಶ್ವವಿದ್ಯಾಲಯದ ಭಾಷಾ ನಿಕಾಯದ ಡೀನ್ ಡಾ.‌ ಎಫ್ ಟಿ ಹಳ್ಳಿಕೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ನೇಪಾಳಿ ಸಾಹಿತ್ಯದ ಘಟನೆಗಳನ್ನು ನಾವೆಲ್ಲರೂ ಅರಿಯಬೇಕು. ಕಾವ್ಯಗಳ ಅಧ್ಯಯನದ ಜೊತೆಗೆ ಅಲ್ಲಿನ ಸ್ಥಳೀಯ ಭಾಷೆಯ ಧೋರಣೆಯನ್ನು ಅಧ್ಯಯನ ಮಾಡಿದಾಗ ಸ್ಥಳೀಯ ಜೀವನ ಮತ್ತು ಬದುಕನ್ನು ತಿಳಿಯಬಹುದು” ಎಂದರು.

ಈ ಸುದ್ದಿ ಓದಿದ್ದೀರಾ?: ವಿಜಯನಗರ | ಸುಕ್ರಿ ಮಾತೆ ನಿಧನಕ್ಕೆ ಹಂಪಿ ಕನ್ನಡ ವಿವಿ ಸಂತಾಪ

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ವೆಂಕಟಗಿರಿ ದಳವಾಯಿ, ವಿವಿಧ ನಿಕಾಯಗಳ ಡೀನ್‌ಗಳು, ಮುಖ್ಯಸ್ಥರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗೇಪಲ್ಲಿ | ಡಿ.ದೇವರಾಜ ಅರಸುರವರ ಆಶಯ, ಚಿಂತನೆಗಳು ಇಂದಿಗೂ ಮಾದರಿ: ತಹಶೀಲ್ದಾರ್ ಮನೀಷ್ ಎನ್ ಪತ್ರಿ

ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಆಶಯಗಳು, ಚಿಂತನೆಗಳು ಇಂದಿಗೂ ಮಾದರಿಯಾಗಿವೆ....

ಮಂಡ್ಯ | ಹಿಂದುಳಿದ ಸಮುದಾಯದವರ ಬದುಕು ಕಟ್ಟಿಕೊಡಲು ಶ್ರಮಿಸಿದ ಮಹಾನ್ ನಾಯಕ ಡಿ.ದೇವರಾಜ ಅರಸು: ಜಿಲ್ಲಾಧಿಕಾರಿ ಡಾ.ಕುಮಾರ

ಸಾಮಾಜಿಕವಾಗಿ ಹಿಂದುಳಿದ ಎಲ್ಲ ಸಮುದಾಯದ ಜನರಿಗೆ ಬದುಕು ಕಟ್ಟಿಕೊಡಲು ಶ್ರಮಿಸಿದ ಮಹಾನ್...

ಚಿಂತಾಮಣಿ | ವಿಶೇಷಚೇತನರಿಗೆ ಶೇ.5ರಷ್ಟೂ ಮೀಸಲಾಗದ ಅನುದಾನ; ಎಲ್ಲಿಯೂ ಕಾಣದ ರ್‍ಯಾಂಪ್‌ ವ್ಯವಸ್ಥೆ

ವಿಶೇಷಚೇತನರಿಗೆ ಅನುಕಂಪ ಬೇಡ. ಅವರಿಗೆ ಅವಕಾಶಗಳನ್ನು ರೂಪಿಸಿ ಎನ್ನುವುದು ಕೇವಲ ಬಾಯಿ...

ರಸ್ತೆ ತುಂಬಾ ತಗ್ಗು ಗುಂಡಿಗಳದ್ದೇ ಕಾರುಬಾರು; ಸವಾರರ ಜೀವಕ್ಕೆ ‘ಗ್ಯಾರಂಟಿ’ಯೇ ಇಲ್ಲ!

ರಾಯಚೂರಿನ ಅನ್ವರಿ - ಹಟ್ಟಿ ಚಿನ್ನದ ಗಣಿ ಪಟ್ಟಣಕ್ಕೆ ಹೋಗುವ ಮುಖ್ಯ...

Download Eedina App Android / iOS

X