ವಿಜಯನಗರ | ಸರೋಜಿನಿ ಮಹಿಷಿ ವರದಿ ಜಾರಿಗೆ ಡಿವೈಎಫ್ಐ ಆಗ್ರಹ

Date:

Advertisements

ಉದ್ಯೋಗ ಸೃಷ್ಟಿ, ನಿರುದ್ಯೋಗ ಭತ್ಯೆ, ಉದ್ಯೋಗದಲ್ಲಿ ಸ್ಥಳೀಯರ ನೇಮಕಾತಿಗೆ ಆದ್ಯತೆ ಕೊಡುವುದು ಹಾಗೂ ಮಹಿಷಿ ಸಮಗ್ರ ವರದಿಯನ್ನು ಜಾರಿಗೊಳಿಸಬೇಕು ಎಂದು ಡಿವೈಎಫ್‌ಐ ಆಗ್ರಹಿಸಿದೆ.

ಉದ್ಯೋಗದಲ್ಲಿ ಸ್ಥಳೀಯರ ನೇಮಕಾತಿಗೆ ಸರೋಜಿನಿ ಮಹಿಷಿ ಅವರ ಸಮಗ್ರ ವರದಿ ಜಾರಿಗೊಳಿಸಲು ಒತ್ತಾಯಿಸಿ ಹಮ್ಮಿಕೊಂಡಿದ್ದ ಯುವಜನರ ಸಮಾವೇಶದಲ್ಲಿ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ್ ಪೂಜಾರ್ ಮಾತನಾಡಿ, “ಸರೋಜಿನಿ ಮಹಿಷಿ ಸ್ಥಳೀಯರಿಗೆ ಮೀಸಲಾತಿ ಕೊಡಬೇಕೆಂದು ವರದಿ ಮಾಡಿತ್ತು. ಈ ಸರಕಾರಗಳು ಸ್ಥಳೀಯರಿಗೆ ಉದ್ಯೋಗ ಕೊಡುತ್ತಿಲ್ಲ. ಕಂಪನಿಗಳು ಕಡಿಮೆ ವೇತನದಲ್ಲಿ ಕೆಲಸ ಮಾಡುವ ಹೊರ ರಾಜ್ಯಗದವರಿಗೆ ಉದ್ಯೋಗ ಕೊಡುತ್ತಿವೆ. ಹೊಸಪೇಟೆಯಲ್ಲಿ ದೊಡ್ಡದೊಡ್ಡ ಕಾರ್ಖಾನೆಗಳಿವೆ. ಹೀಗಿದ್ದೂ ಕೂಡಾ ಜಿಲ್ಲೆಯಲ್ಲಿ ಉದ್ಯೋಗದ ಕೊರತೆ ಕಾಡುತ್ತಿದೆ. ಸ್ಥಳೀಯ ಶಾಸಕ ಹಾಗೂ ಸಂಸದರು ಸರಕಾರವನ್ನು ಪ್ರಶ್ನೆ ಮಾಡುತ್ತಿಲ್ಲ. ರಾಜ್ಯದಲ್ಲಿ ನಿರುದ್ಯೋಗ ಮಟ್ಟ ಇಷ್ಟಿದ್ದರೂ ಕೇವಲ ಹಿಂದೂ, ಮುಸ್ಲಿಂ ಎಂದು ಧಾರ್ಮಿಕ ದ್ವೇಷ ಬಿತ್ತುತ್ತಿದ್ದಾರೆ. ಯುವಕರನ್ನು ಕೋಮು ದಳ್ಳುರಿಗೆ ತಳ್ಳುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಾಸ್ಟೆಲ್ ನೌಕರರ ಸಂಘದ ರಾಜ್ಯ ಪ್ರಮುಖ ಜಂಬಯ್ಯ ನಾಯ್ಕ ಮಾತನಾಡಿ, “ಉದ್ಯೋಗ ಮೂಲಭೂತ ಹಕ್ಕಾಗಬೇಕು. ಉದ್ಯೋಗ ಸೃಷ್ಟಿಸಬೇಕು, ನಿರುದ್ಯೋಗ ತೊಲಗಿಸಬೇಕು. ಇವತ್ತಿನ ವಾತಾವರಣ ಏನಾಗಿದೆ ಎಂದರೆ, ಇವತ್ತಿನ ವಿದ್ಯಾರ್ಥಿಗಳೇ ಮುಂದಿನ ನಿರುದ್ಯೋಗಿಗಳು ಎನ್ನುವಂತ ವಾತಾವರಣ ಸೃಷ್ಟಿಯಾಗಿದೆ. ಇವತ್ತು ಓದಿದ ವಿದ್ಯಾರ್ಥಿಗಳಿಗೆ ಕೆಲಸ ಸಿಗುತ್ತಿಲ್ಲ ಇದಕ್ಕೆ ಆಳುವ ಸರಕಾರಗಳು ‌ಕಾರಣ. ಬದುಕಿನಲ್ಲಿ ಕನಸನ್ನು ಕಾಣುವ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವ ‌ವಾತಾವರಣ ಸೃಷ್ಟಿಯಾಗಿದೆ. ಕಾರಣ ಇವತ್ತು ಸರಕಾರಿ ಕೆಲಸ ಸಿಗದೇ ಕಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವಂತ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಗುತ್ತಿಗೆ ಆಧಾರದ ಮೇಲೆ ಹುದ್ದೆ ತುಂಬಿಕೊಳ್ಳುತ್ತಿದ್ದಾರೆ. ಆದರೆ, ಖಾಯಂ ಸರಕಾರಿ ಹುದ್ದೆ ತುಂಬಿಕೊಳ್ಳುತ್ತಿಲ್ಲ ಇದು ದುರಂತ. ಬಂಡವಾಳಶಾಹಿಗಳು ಹಿಡಿತದಲ್ಲಿ ದೇಶದ ಆಡಳಿತ ಸಿಲಿಲುಕಿದೆ. ಸರಕಾರ ಉದ್ಯೋಗ ಸೃಷ್ಟಿಸದೇ ಬಂಡವಾಳಶಾಹಿಗಳು ಉದ್ಯೋಗ ಸೃಷ್ಟಿಸಿ ದೇಶದ ಯುವಕರ ಭವಿಷ್ಯವನ್ನ ಕಾರ್ಪೊರೇಟರ್‌ಗಳು ನಿರ್ಧರಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದರು.

ಇದನ್ನೂ ಓದಿ: ವಿಜಯನಗರ | ಮಹಮದ್ ಪೈಗಂಬರ್‌ ಜನ್ಮದಿನ: ಡಿವೈಎಫ್‌ಐನಿಂದ ಸಿಹಿ ಹಂಚಿಕೆ

ಅಂಗನವಾಡಿ ನೌಕರರ ಮುಖಂಡರಾದ ಕೆ. ನಾಗರತ್ನಮ್ಮ ಮಾತನಾಡಿ, “ಇಂದು ಶಿಕ್ಷಣ ವ್ಯವಸ್ಥೆ ಕುಂದುತ್ತಿದೆ. ಜಾತಿ, ಧರ್ಮಗಳ ಮಧ್ಯ ಬೆಂಕಿ ಹಚ್ಚಿ ಸಮುದಾಯಗಳ ಮದ್ಯ ಬೃಹತ್ ಕಂದಕ ಸೃಷ್ಟಿಸುತ್ತಿದ್ದಾರೆ. ಇದಕ್ಕೆ ಇವತ್ತಿನ ಯುವ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ. ಲೀಡ್ ಬ್ಯಾಂಕಿನಲ್ಲಿ ವಿಜಯನಗರ ಜಿಲ್ಲೆಯ ಅಭಿವೃದ್ಧಿಗೆ ಕೋಟಿ ರೂಪಾಯಿ ತೆಗೆದಿಟ್ಟಿದ್ದೇವೆ ಎಂದು ಹೇಳುತ್ತಾರೆ. ಆದರೆ, ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಲೋನ್ ಕೊಡುತ್ತಿಲ್ಲ. ಬಡ್ಡಿ ರಹಿತವಾಗಿ ದೊಡ್ಡದೊಡ್ಡ ಕಾರ್ಖಾನೆಗಳಿಗೆ ಸಾಲ ಕೊಡುತ್ತಾರೆ. ಉದ್ಯೋಗ ಸೃಷ್ಟಿ ಮಾಡುವುದು ಬಿಟ್ಟು ಪ್ರಧಾನಿಗಳು ಪಕೋಡ ಮಾರಿ ಆಂತ ಹೇಳುತ್ತಾರೆ” ಎಂದು ಆಕ್ರೋಶ ‌ವ್ಯಕ್ತಪಡಿಸಿದರು.

ಸಮಾವೇಶದಲ್ಲಿ ಈಡಿಗರ ಮಂಜುನಾಥ, ಎಲ್ಲಲಿಂಗ, ವಿ ಸ್ವಾಮಿ, ಪವನಕುಮಾರ, ಅಲ್ತಾಫ್, ವಿಜಯ್, ಬಂಡೆ ತಿರುಕಪ್ಪ, ಮಾಲತೇಶ್, ಚಂದ್ರು ಹಾಗೂ ವಿದ್ಯಾರ್ಥಿಗಳು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಅಂಬೇಡ್ಕರ್ ಓದು ; ಭಾರತವನ್ನು ಅರಿಯುವ ದಾರಿ : ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯ

ಶಿವಮೊಗ್ಗ ಮಾನವತಾವಾದಿ ಅಂಬೇಡ್ಕರ್ ಅವರನ್ನು ಓದುವುದು ಎಂದರೆ ಭಾರತವನ್ನು ನೈಜವಾಗಿ ಅರಿಯುವುದು,...

ಬಿಜೆಪಿಯ ಆತ್ಮವಂಚನೆ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

ಧಾರವಾಡ | ಹಿಂದುಳಿದ ವರ್ಗಗಳ ಸಮೀಕ್ಷೆ; ಸಬ್‌ಜೈಲ್ ಸುತ್ತ ಪ್ರದೇಶಗಳಲ್ಲಿ ನೆಟವರ್ಕ್ ಸಮಸ್ಯೆ

ಧಾರವಾಡ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿಯಲ್ಲಿದ್ದು,...

ವಿಜಯಪುರ | ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಶಂಕರಗೌಡ ಸೋಮನಾಳ

ಪರಿಸರಕ್ಕೆ ಹಾನಿ ಮಾಡದಂತಹ ತಂತ್ರಜ್ಞಾನಗಳನ್ನು ನಾವು ಪ್ರೋತ್ಸಾಹಿಸಬೇಕು. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ...

Download Eedina App Android / iOS

X