ವಿಜಯನಗರ | ಪುರದಲ್ಲಿ ನೂತನ ರಾಜ್ಯ ರೈತ ಸಂಘದ ಗ್ರಾಮ ಘಟಕ ಉದ್ಘಾಟನೆ

Date:

Advertisements

ವಿಜಯನಗರದ ಹೂವಿನಹಡಗಲಿ ತಾಲೂಕಿನ ಪುರ‌ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ನೂತನ ರೈತ ಸಂಘ ಗ್ರಾಮ ಘಟಕವನ್ನು ರಾಜ್ಯ ರೈತ ಸಂಘ ಕಾರ್ಯಾಧ್ಯಕ್ಷ ಜೆ ಎಮ್ ವೀರಸಂಗಯ್ಯ ಹಾಗೂ ಪಿ ಕೆ ಎಮ್ ವಿಶ್ವಾನಂದ ಸ್ವಾಮಿ ಉದ್ಘಾಟಿಸಿದರು. ನಂತರ ರೈತ ಸಂಘದ ನೂತನ ಸದಸ್ಯರಿಗೆ ಪದಗ್ರಹಣ ಮಾಡಿಸಲಾಯಿತು.

ಸಂಘದ ಕಾರ್ಯಾಧ್ಯಕ್ಷ ಜೆ ಎಮ್ ವೀರಸಂಗಯ್ಯ ಮಾತನಾಡಿ, “ಭಾರತದಲ್ಲಿ ಅತ್ಯಂತ ಗಂಭೀರ ಪರಿಸ್ಥಿತಿ ದುರಿಸುತ್ತಿರುವವರು ರೈತರು. ಪ್ರತಿ ರೈತನ ತಲೆ ಮೇಲೆ ಲಕ್ಷಾಂತರ ರೂಪಾಯಿ ಸಾಲ ಇದೆ. ರೈತ ಬೆಳೆದ ಬೆಳೆ ಪ್ರಕೃತಿಯ ಮುನಿಸಿಗೆ ನಾಶವಾಗಿ ಆ ಸಾಲ ತೀರಸಲಾಗದೇ ಆತ್ಮಹತ್ಯ ಮಾಡಿಕೊಳ್ಳುತ್ತಾನೆ. ಇನ್ನೊಂದೆಡೆ ಬಿತ್ತಿದ ಬೆಳೆ ಕೈಗೆ ಸಿಗಲ್ಲ. ಅಲ್ಪಸ್ವಲ್ಪ ಬಂದ ಬೆಳೆಗೆ ಕೃಷಿ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗಲ್ಲ. ಇದರ ಮದ್ಯದಲ್ಲಿ ಮಧ್ಯವರ್ತಿಗಳ ಹಾವಳಿಯೂ ಹೆಚ್ಚಾಗಿದೆ. ಮಧ್ಯವರ್ತಿಗಳು ಬೆಲೆ ನಿಗದಿ ಮಾಡಿದಷ್ಟಕ್ಕೆ ರೈತರು ತಾವು ಬೆಳೆದ ಬೆಳೆ ಕೊಡಬೇಕು. ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷಗಳಾದರೂ ರೈತರ ಗೋಳು ತಪ್ಪಿಸಲು ಸರ್ಕಾರಗಳಿಗೆ ಆಗುತ್ತಿಲ್ಲ. ಎಲ್ಲದಕ್ಕೂ ತೆರಿಗೆ ಹಾಕುತ್ತವೆ. ಆದರೆ, ರೈತರ ಬೆಳೆಗೆ ಬೆಂಬಲ ಬೆಲೆ ಘೋಷಿಸುತ್ತಿಲ್ಲ. ಕೇಂದ್ರ ಸರಕಾರ ರೈತರು ಬೆಳೆದ ಬೆಳೆ ಬಂದಾಗ ಬೆಂಬಲ ಬೆಲೆ ಘೋಷಿಸುವುದಿಲ್ಲ. ಅದರ ಅವಧಿ ಮುಗಿದ ಮೇಲೆ ಬೆಂಬಲ ಬೆಲೆ ಘೋಷಿಸುತ್ತದೆ. ಅಷ್ಟರಲ್ಲಿ ಮಧ್ಯವರ್ತಿಗಳು ತಾವೇ ನಿಗದಿಗೊಳಿಸಿದ ಬೆಲೆಗೆ ರೈತರ ಮಾಲು ಖರೀದಿ ಮಾಡುತ್ತಾರೆ. ಅನಿವಾರ್ಯವಾಗಿ ರೈತ ಕೊಟ್ಟು ಮತ್ತೆ ಸಾಲದ ಸುಳಿಯಲ್ಲಿ ಸಿಲುಕುತ್ತಾನೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಬಸವಾದಿ ಶರಣರಿಂದ ಇಂದಿನವರೆಗೂ ರೈತರು ತಮ್ಮ ಉಳುಮೆ ಮಾಡುವ ಕಾಯಕ ಮರೆತಿಲ್ಲ. ಇತ್ತೀಚಿಗೆ ಕೆಲವರು ರೈತ ಸಂಘಟನೆಗಳನ್ನು ತಮ್ಮ ಸ್ವಾರ್ಥಕ್ಕಾಗಿ ತೆರೆದು ಸಂಘಟನೆಗಳ ಹೆಸರಲ್ಲಿ ಹಣ ವಸೂಲಿ ಮಾಡುತ್ತಿವೆ. ಇದರಿಂದ ಪ್ರಾಮಾಣಿಕವಾಗಿ ರೈತ ಪರ ಹೋರಾಡುತ್ತಿರುವವರಿಗೆ ಹಾಗೂ ಹೋರಾಟಗಳಿಗೆ ಹಿನ್ನಡೆಯೂ ಆಗುತ್ತಿರುವುದು ದುರಂತ” ಎಂದು ಬೇಸರ ವ್ಯಕ್ತಪಡಿಸಿದರು. “ಹಸಿರು ವಸ್ತ್ರ ಹಾಕುವವರೆಲ್ಲ ರೈತಪರ, ರೈತರ ಬಗ್ಗೆ ಕಳಕಳಿ ಇರುವವರಲ್ಲ. ಅವರೆಲ್ಲ ರೈತರ ಮಕ್ಕಳಂತೆ ಹಗಲು ವೇಷದಾರಿಗಳು. ರೈತರ ದಾರಿ ತಪ್ಪಿಸಲು ರಾಜಕಾರಣಿಗಳು ಹಸಿರು ಟವೆಲ್ ಧರಿಸಿ ತಾವು ರೈತಪರರು ಎಂದು ಭಾಷಣದಲ್ಲಿ ಮಾತಾಡುತ್ತಾರೆ. ಅದಕ್ಕೆ ರೈತರು ಮೋಸಕ್ಕೊಳಗಾಗಬಾರದು” ಎಂದರು.

ಪಿ.ಕೆ.ಎಮ್.ವಿಶ್ವಾನಂದ ಸ್ವಾಮಿ ಮಾತನಾಡಿ, “ರೈತ ಸಂಘಟನೆಗೆ ತನ್ನದೇ ಅದ ವಿಶೇಷ ಸ್ಥಾನಮಾನವಿದೆ. ಸಂಘಟಿಕರು ಹಾಗೂ ರೈತ ಮುಖಂಡರು ಮನಸೋ ಇಚ್ಛೆ ನಡೆದುಕೊಳ್ಳಬಾರದು. ರೈತ ಸಂಘಟಕರು ಯಾವುದೇ ಪಕ್ಷದ ಧ್ಯೇಯೋದ್ಧೇಶಗಳಿಗೆ ಒಳಗಾಗಬಾರದು. ಸಂಘಟನೆಯ ಚಟುವಟಿಕೆಗಳು ಜನಪರ ಹಾಗೂ ರೈತರ ಹಿತಾಸಕ್ತಿ ಕಾಯಬೇಕು ಹಾಗೂ ಸಂಘಟನೆಗಳ ಸದಸ್ಯರು ವ್ಯಸನಕ್ಕೆ ದಾಸರಾಗಬಾರದು” ಎಂದರು ಕಿವಿಮಾತು ಹೇಳಿದರು.

ಹಿರಿಯ ಸಾಹಿತಿ ಹುರಕಡ್ಲಿ ಶಿವಕುಮಾರ್ ಮಾತನಾಡಿ, “1980ರಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಸ್ಥಾಪಿಸಿದವರಲ್ಲಿ ಎಮ್.ಡಿ.ನಂಜುಡಸ್ವಾಮಿಯವರೂ ಒಬ್ಬರು. ಅವರು ಕಾನೂನು ವಿದ್ಯಾಲಯದ ಪ್ರಾಧ್ಯಾಪಕರಾಗಿದ್ದರು. ಅವರು ಸಮಾಜವಾದಿಯಾಗಿ ಯುವಜನ ಸಭೆಯೊಂದಿಗೆ ತೊಡಗಿಸಿಕೊಂಡಿದ್ದರು. ರಾಮಮೋಹನ ಲೋಹಿಯಾ ಹಾಗೂ ಶಾಂತವೇರಿ ಗೋಪಾಲಗೌಡರಂತಹ ಸಮಾಜವಾದಿಗಳೊಂದಿಗೆ ನಿಕಟ ಸಂಪರ್ಕದಲ್ಲಿ ಕೆಲಸ ಮಾಡಿದರು. 1975 ರಲ್ಲಿ, ನಂಜುಂಡಸ್ವಾಮಿ ಕರ್ನಾಟಕದಲ್ಲಿ ಜೆಪಿ ಚಳವಳಿಯನ್ನು ಪ್ರಾರಂಭಿಸಿದರು ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕಡಿದಾಳ್‌ ಮಂಜಪ್ಪ ಮತ್ತು ಬರಹಗಾರ ಪೂರ್ಣಚಂದ್ರ ತೇಜಸ್ವಿ ಅವರೊಂದಿಗೆ ನವ ನಿರ್ಮಾಣ ಕ್ರಾಂತಿಯನ್ನು ಸ್ಥಾಪಿಸಿದರು. 1980ರಲ್ಲಿ ಕೆಆರ್‌ಆರ್‌ಎಸ್ ಅಧ್ಯಕ್ಷರಾಗಿ ಬಹುರಾಷ್ಟ್ರೀಯ ಸಂಸ್ಥೆಗಳಿಂದ ಕೃಷಿ ಪೇಟೆಂಟ್ ಪಡೆಯುವುದರ ವಿರುದ್ಧ ಅಭಿಯಾನಗಳನ್ನು ಮುನ್ನಡೆಸಿದರು, ಇದನ್ನು ಅವರು ʼಪಾಶ್ಚಿಮಾತ್ಯ ಜೈವಿಕ ಪೈರಸಿʼ ಎಂದು ಕರೆದರು. ಅವರು ಭಾರತದಲ್ಲಿನ ಬಹುರಾಷ್ಟ್ರೀಯ ಕಂಪನಿಗಳು ಮತ್ತು ವಿಶ್ವ ವ್ಯಾಪಾರ ಸಂಸ್ಥೆಯ ಬಲವಾದ ವಿಮರ್ಶಕರಾಗಿದ್ದರು ಮತ್ತು 1999 ರ ಸಿಯಾಟಲ್ ಡಬ್ಲ್ಯೂಟಿಒ ಪ್ರತಿಭಟನೆಗಳಲ್ಲಿ ಕೈಜೋಡಿಸಿದರು”

ಇದನ್ನೂ ಓದಿ: ವಿಜಯನಗರ | ಸರೋಜಿನಿ ಮಹಿಷಿ ವರದಿ ಜಾರಿಗೆ ಡಿವೈಎಫ್ಐ ಆಗ್ರಹ

“1996 ರಲ್ಲಿ, ಅವರು ದೆಹಲಿಯಲ್ಲಿ ಮೊದಲ ಮೆಕ್‌ಡೊನಾಲ್ಡ್, ಔಟ್‌ಲೆಟ್ ತೆರೆಯುವುದನ್ನು ವಿರೋಧಿಸಿ ಅದರ ವಿರುದ್ಧ ಪ್ರತಿಭಟಿಸಿದರು. ಬೆಂಗಳೂರಿನಲ್ಲಿ ಹೊಸದಾಗಿ ತೆರೆಯಲಾದ ಪಿಜ್ಜಾ ಹಟ್ ಮತ್ತು ಕೆಂಟುಕಿ ಪ್ರೈಡ್ ಚಿಕನ್ ರೆಸ್ಟೋರೆಂಟ್‌ಗಳ ವಿರುದ್ಧ ಪ್ರತಿಭಟಿಸಿದರು. ಕೋಕಾ-ಕೋಲಾ ಕಂಪನಿಯಂತಹ ಇತರ ಕಂಪನಿಗಳನ್ನು ಎದುರಿಸುವ ಮೊದಲು, ತಮ್ಮ ಕ್ರಿಮೇಷನ್‌ ಮೊನ್ಸಾಂಟೊ ಚಳುವಳಿಯೊಂದಿಗೆ ಮೊನ್ಸಾಂಟೊದ ಸ್ಥಳೀಯವಾಗಿ ಮಾರ್ಪಡಿಸಿದ ಬೆಳೆಗಳನ್ನು ಸುಟ್ಟುಹಾಕಿದರು. ಹೀಗೆ ಎಮ್.ಡಿ.ನಂಜುಂಡಸ್ವಾಮಿ ತಮ್ಮ ಜೀವಿತಾವಧಿಯಲ್ಲಿ ಹಲವಾರು ರೈತಪರ ಹೋರಾಟ ಮಾಡಿ ರೈತರಲ್ಲಿ ಮಾನಸಿಕ ಬೆಂಬಲ ತುಂಬಿ ಸರಕಾರಗಳ ಜಾಗತೀಕರಣ ನೀತಿಯನ್ನು ಕಟುವಾಗಿ ವಿರೋಧಿಸಿದರು. ಅವರು ಶ್ವಾಸಕೋಶದ ಕ್ಯಾನ್ಸರ್‌ನ ಮಾರಕ ರೋಗಕ್ಕೆ ತುತ್ತಾಗಿ ಮರಣ ಹೊಂದಿದರು” ಎಂದು ನಂಜುಂಡಸ್ವಾಮಿಯವರ ಜೀವನ ಹಾಗೂ ರೈತ ಚಳುವಳಿಗಳನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ನಾಗರಹಳ್ಳಿ ಹನುಮಂತಪ್ಪ, ಕಾಗನೂರು ಮಂಜುನಾಥ, ಕೆ.ಎಮ್.ಮಹಾಂತೇಶ, ಡೊಳ್ಳಿನ ಪಕ್ಕೀರಪ್ಪ, ಹೆಚ್.ಹನಮಂತಪ್ಪ, ಕುಂಬಾರ ಗುರುಬಸವರಾಜ, ಕಕ್ಕೂರ ದಾನಪ್ಪ, ನಿಟ್ಟಾಲಿ ಸುರೇಶ, ಬಿ.ರಾಮಪ್ಪ, ಬಳಿಗಾರ ಹುಚ್ವೇಶ, ಕೆ.ಜಗದೀಶ, ಎಚ್.ಮುದಿಯಪ್ಪ ಕಕ್ಕೂರ ರಮಗಪ್ಪ, ಸಿ.ಚನ್ನವೀರಪ್ಪ, ಪಿಕೆಎಮ್ ಶಿವನಮದಯ್ಯ, ಬೀರಣ್ಣನವರ ಬಸವರಾಜ್, ಗಡ್ಡಿ ಮಲ್ಲಪ್ಪ, ರಾಟಿ ಹೊನ್ನಪ್ಪ, ಹೆಚ್.ಗಾಳೆಪ್ಪ, ಎಂ.ಯಮನೂರಪ್ಪ ಹಾಗೂ ಇತರರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಅಂಬೇಡ್ಕರ್ ಓದು ; ಭಾರತವನ್ನು ಅರಿಯುವ ದಾರಿ : ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯ

ಶಿವಮೊಗ್ಗ ಮಾನವತಾವಾದಿ ಅಂಬೇಡ್ಕರ್ ಅವರನ್ನು ಓದುವುದು ಎಂದರೆ ಭಾರತವನ್ನು ನೈಜವಾಗಿ ಅರಿಯುವುದು,...

ಬಿಜೆಪಿಯ ಆತ್ಮವಂಚನೆ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

ಧಾರವಾಡ | ಹಿಂದುಳಿದ ವರ್ಗಗಳ ಸಮೀಕ್ಷೆ; ಸಬ್‌ಜೈಲ್ ಸುತ್ತ ಪ್ರದೇಶಗಳಲ್ಲಿ ನೆಟವರ್ಕ್ ಸಮಸ್ಯೆ

ಧಾರವಾಡ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿಯಲ್ಲಿದ್ದು,...

ವಿಜಯಪುರ | ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಶಂಕರಗೌಡ ಸೋಮನಾಳ

ಪರಿಸರಕ್ಕೆ ಹಾನಿ ಮಾಡದಂತಹ ತಂತ್ರಜ್ಞಾನಗಳನ್ನು ನಾವು ಪ್ರೋತ್ಸಾಹಿಸಬೇಕು. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ...

Download Eedina App Android / iOS

X